ಬೆಂಗಳೂರು : ಏಪ್ರಿಲ್ 26ರಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಲೋಕ ಸಭಾ ಚುನಾವಣೆಯ (Lok Sabha Election) ಎರಡನೇ ಹಂತದ ಮತದಾನವು ಶಾಂತಿಯುತವಾಗಿ ನಡೆಯಿತು. ಒಟ್ಟು 88 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಸಂಜೆ 7 ಗಂಟೆಯ ವೇಳೆಗೆ ಅಂದಾಜು 60.96% ಮತದಾನವನ್ನು ದಾಖಲಿಸಿದೆ. ಎಂದು ಚುನಾವಣಾ ಆಯೋಗ ಹೇಳಿದೆ. 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮತದಾರರು ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ ತಮ್ಮ ಮತಗಟ್ಟೆಯಲ್ಲಿ ಉತ್ಸಾಹದಿಂದ ಮತ ಚಲಾಯಿಸಿದರು. ನವವಿವಾಹಿತರಿಂದ ಹಿಡಿದು ಹಿರಿಯ ನಾಗರಿಕರವರೆಗೆ, ಬುಡಕಟ್ಟು ಜನಾಂಗದವರಿಂದ ಐಟಿ ವೃತ್ತಿಪರರು, ಅಂಗವಿಕಲರು, ಮಹಿಳೆಯರು ಮತ್ತು ಯುವಕರು ಎಲ್ಲರೂ ತಮ್ಮ ಮತ ಚಲಾಯಿಸಿದರು. 2024ರ ಲೋಕಸಭಾ ಚುನಾವಣೆಗೆ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಪೂರ್ಣಗೊಂಡಿದೆ.
Peaceful polling across 13 States/UTs in phase 2 of #GeneralElections2024 ; overall approximate voter turnout of 60. 96 % as of 7 PM today
— Spokesperson ECI (@SpokespersonECI) April 26, 2024
Polling is now complete in 14 States/UTs in the first two phases
Details : https://t.co/QXPFpmuD1T pic.twitter.com/lfb1lsGCxg
ತ್ರಿಪುರಾದ ಏಕೈಕ ಕ್ಷೇತ್ರದಲ್ಲಿ ಶೇ.77.93, ಛತ್ತೀಸ್ ಗಢದ ಮೂರು ಕ್ಷೇತ್ರಗಳಲ್ಲಿ ಶೇ.72.13 ಹಾಗೂ ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಲ್ಲಿ ಶೇ.71.84ರಷ್ಟು ಮತದಾನವಾಗಿದೆ. ಮಣಿಪುರದ 13 ಮತಗಟ್ಟೆಗಳಲ್ಲಿ ಶೇ.76.06ರಷ್ಟು ಮತದಾನವಾಗಿದ್ದರೆ, ಅಸ್ಸಾಂನ ಮತಗಟ್ಟೆಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.70.66ರಷ್ಟು ಮತದಾನವಾಗಿದೆ. ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ.53.51ರಷ್ಟು ಮತದಾನವಾಗಿದೆ.
#PollsWithAkashvani ||
— All India Radio News (@airnewsalerts) April 26, 2024
The voter turnout of 60.96% was recorded in the second phase of the Lok Sabha Election till 7:00 PM.
In this phase, 88 Lok Sabha seats went to polls.
Polling remained largely peaceful with voters from various walks of life participating… pic.twitter.com/i5Ekj3tNOi
ಬಿಹಾರದಲ್ಲಿ ಮತದಾನದ ಶೇಕಡಾವಾರು ಮೊದಲ ಹಂತಕ್ಕಿಂತ ಹೆಚ್ಚಾಗಿದ್ದರೆ, ಇದು ಉತ್ತರ ಪ್ರದೇಶಕ್ಕಿಂತ 53.03% ಹೆಚ್ಚಾಗಿದೆ. ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ 52.74% ಮತದಾನ ದಾಖಲಾಗಿದೆ. ಎರಡನೇ ಹಂತದಲ್ಲಿ ಮತದಾನ ನಡೆದ ರಾಜಸ್ಥಾನದ 13 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಸರಾಸರಿ ಶೇಕಡಾ 59.19 ರಷ್ಟು ಮತದಾನವಾಗಿತ್ತು. ಕೆಲವು ಘಟನೆಗಳ ಹೊರತಾಗಿಯೂ, ಮತದಾನವು ಶಾಂತಿಯುತವಾಗಿ ನಡೆಯಿತು.
ಇದನ್ನೂ ಓದಿ: Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!
ಮಧ್ಯಪ್ರದೇಶದ ಆರು ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಕನಿಷ್ಠ 54.83% ಮತದಾನವಾಗಿದೆ. ಕರ್ನಾಟಕದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಎರಡನೇ ಹಂತದಲ್ಲಿ ಮತದಾನ ನಡೆದಿದೆ. ಕರ್ನಾಟಕ 69. 23 ಶೇಕಡಾ ಮತದಾನವಾಗಿದೆ.
ಬಹುತೇಕ ಶಾಂತಿಯುತ ಮತದಾನ
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನವು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಿತು. ಸಿಇಸಿ ಶ್ರೀ ರಾಜೀವ್ ಕುಮಾರ್ ನೇತೃತ್ವದ ಆಯೋಗವು ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖ್ಬೀರ್ ಸಿಂಗ್ ಸಂಧು ಅವರೊಂದಿಗೆ ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಯಿತು. ಮತದಾರರು ಭಯ ಅಥವಾ ಬೆದರಿಕೆಯಿಲ್ಲದೆ ಮತ ಚಲಾಯಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಾಯಿತು. 1 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗಿದೆ.
ಬಿಹಾರದ ಬಂಕಾ, ಮಾಧೇಪುರ, ಖಗರಿಯಾ ಮತ್ತು ಮುಂಗೇರ್ ಕ್ಷೇತ್ರಗಳ ಅನೇಕ ಮತಗಟ್ಟೆಗಳಲ್ಲಿ ಮತದಾನದ ಸಮಯವನ್ನು ಸಂಜೆ 6 ಗಂಟೆಯ ಬಳಿಕವೂ ವಿಸ್ತರಿಸಲಾಗಿತ್ತು. ಎರಡನೇ ಹಂತದಲ್ಲಿ, ಛತ್ತೀಸ್ಗಢದ ಬಸ್ತಾರ್ ಮತ್ತು ಕಂಕೇರ್ ಪಿಸಿಗಳ 46 ಗ್ರಾಮಗಳ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಸ್ವಂತ ಗ್ರಾಮದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಗ್ರಾಮಸ್ಥರ ಅನುಕೂಲಕ್ಕಾಗಿ ಈ ಪಿಸಿಗಳಲ್ಲಿ ಮೊದಲ ಬಾರಿಗೆ 102 ಹೊಸ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಯಿತು
ಕ್ರಿಕೆಟ್ ತಾರೆಗಳಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಅವರು ಬೆಂಗಳೂರಿನ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಶಾಯಿ ಹಾಕಿದ ಬೆರಳುಗಳಿಂದ ಪೋಸ್ ನೀಡಿದ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಹತ್ವದ ಸಂದೇಶವನ್ನು ಯುವಕರಿಗೆ ತಲುಪಿಸಿದರು.