Site icon Vistara News

J Shantha: ಅಣ್ಣ-ತಂಗಿಗೆ ಕಹಿ; ಕರ್ನಾಟಕದಲ್ಲಿ ಶ್ರೀರಾಮುಲು, ಆಂಧ್ರದಲ್ಲಿ ಜೆ. ಶಾಂತಾಗೆ ಸೋಲು!

J Shantha

B Sriramulu In Bellary, His Sister J Shantha Face Defeat In Andhra Pradesh

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶವು (Election Results 2024) ಅಣ್ಣ ಹಾಗೂ ತಂಗಿಗೆ ಕಹಿ ತಂದಿದೆ. ಕರ್ನಾಟಕದ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ. ಶ್ರೀರಾಮುಲು (B Sriramulu) ಅವರು ಸೋಲನುಭವಿಸಿದ್ದರೆ, ಆಂಧ್ರಪ್ರದೇಶದ ಹಿಂದುಪುರ (Hindupur) ಲೋಕಸಭೆ ಕ್ಷೇತ್ರದಲ್ಲಿ ವೈಎಸ್‌ಆರ್‌ಸಿಪಿಯಿಂದ ಸ್ಪರ್ಧಿಸಿದ್ದ ಜೆ. ಶಾಂತಾ (J Shantha) ಅವರು ಕೂಡ ಸೋಲನುಭವಿಸಿದ್ದಾರೆ. ಆ ಮೂಲಕ ಅಣ್ಣ-ತಂಗಿಯು ಚುನಾವಣೆಯಲ್ಲಿ ಪರಾಜಯ ಕಂಡಂತಾಗಿದೆ.

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇ. ತುಕಾರಾಮ್‌ ಅವರ ವಿರುದ್ಧ ಶ್ರೀರಾಮುಲು ಅವರು 98,992 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಇ. ತುಕಾರಾಮ್‌ ಅವರು 7,30,845 ಮತಗಳನ್ನು ಪಡೆದರೆ, ಶ್ರೀರಾಮುಲು ಅವರು 6,31,853 ಮತಗಳನ್ನು ಪಡೆದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಶ್ರೀರಾಮುಲು ಅವರು ಸೋಲುಂಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲೂ ಅವರು ಪರಾಜಯಗೊಂಡಿದ್ದಾರೆ.

ಹಿಂದುಪುರದಲ್ಲಿ ಏನಾಯ್ತು?

ಹಿಂದುಪುರ ಲೋಕಸಭೆ ಕ್ಷೇತ್ರದಲ್ಲಿ ಟಿಡಿಪಿಯ ಬಿ.ಕೆ. ಪಾರ್ಥಸಾರಥಿ ಅವರು ಜೆ. ಶಾಂತಾ ಅವರ ವಿರುದ್ಧ 1,32,427 ಮತಗಳ ಅಂತರದಿಂಧ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಜೆ. ಶಾಂತಾ ಅವರು ಹಿಂದುಪುರದಲ್ಲಿ ಸೋಲನುಭವಿಸಿದಂತಾಗಿದೆ. ಕರ್ನಾಟಕದಲ್ಲಿ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಜೆ. ಶಾಂತಾ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್‌ ಸಿಗದ ಕಾರಣ ಆಂಧ್ರಪ್ರದೇಶದತ್ತ ಮುಖ ಮಾಡಿ, ಹಿಂದುಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮೊದಲು ಜೆ. ಶಾಂತಾ ಅವರು ಜಗನ್‌ ಮೋಹನ್‌ ರೆಡ್ಡಿ ನೇತೃತ್ವದಲ್ಲಿ ವೈಎಸ್‌ಆರ್‌ಸಿಪಿ ಸೇರಿದ್ದರು. ಹಿಂದುಪುರದಲ್ಲಿ ಜೆ. ಶಾಂತಾ ಅವರು ಸೋಲುಂಡರೂ ಅವರು 5.78 ಲಕ್ಷ ಮತಗಳನ್ನು ಸೆಳೆದಿರುವುದು ಪ್ರಮುಖವಾಗಿದೆ. 2009ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಜೆ. ಶಾಂತಾ ಅವರು ಕಾಂಗ್ರೆಸ್‌ನ ಎನ್‌.ವೈ.ಹನುಮಂತಪ್ಪ ಅವರ ವಿರುದ್ಧ ಗೆಲುವು ಸಾಧಿಸಿ, 5 ವರ್ಷ ಸಂಸದೆಯಾಗಿದ್ದರು.

2014, 2019ರಲ್ಲಿ ಬಳ್ಳಾರಿಯಲ್ಲಿ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ದೇವೇಂದ್ರಪ್ಪ ಅವರು ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌.ವೈ. ಹನುಮಂತಪ್ಪ ಅವರ ವಿರುದ್ಧ ಬಿಜೆಪಿಯ ಬಿ. ಶ್ರೀರಾಮುಲು ಅವರು ಭರ್ಜರಿ ಗೆಲುವು ಸಾಧಿಸಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಜೆ. ಶಾಂತಾ ಅವರು ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Udupi Chikmagalur Election Result 2024 : ಉಡುಪಿಯಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್​ ಪೂಜಾರಿಗೆ ವಿಜಯ

Exit mobile version