Site icon Vistara News

Election Results 2024: ಆಲ್ ಮೋಸ್ಟ್ ನಾನು ಸೋತಂಗೆ- ಸುರಪುರ ಬಿಜೆಪಿ ಅಭ್ಯರ್ಥಿ ರಾಜುಗೌಡ ಬೇಸರ

Election Results 2024

ಯಾದಗಿರಿ: ಸುರಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲು ಖಚಿತ ಆಗುತ್ತಿದ್ದಂತೆ ಸುರಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜುಗೌಡ ಮತ ಎಣಿಕೆ ಕೇಂದ್ರದಿಂದ (Election Results 2024) ಹೊರ ನಡೆದರು. ನಿರಾಸೆಯಲ್ಲೇ ಮತ ಎಣಿಕೆ ಕೇಂದ್ರದಿಂದ ಹೊರಬಂದ ರಾಜುಗೌಡ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಬಹುತೇಕ ನಾನು ಸೋತಂಗೆನೇ.. ಹಾಗಾಗಿ ಮತ ಎಣಿಕೆ ಕೇಂದ್ರದಿಂದ ಹೊರಗೆ ಬಂದಿದ್ದೇನೆ. ಸುರಪುರ ಮತದಾರರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ಅವರ ತಂದೆಯ ನಿಧನವು ಸಹಜವಾಗಿ ಮತದಾರರಿಂದ ಅನುಕಂಪ ಸಿಕ್ಕಿದೆ. ಜತೆಗೆ ಗ್ಯಾರಂಟಿ ಯೋಜನೆಗಳಿಗೆ ಮತದಾರರು ಕಾಂಗ್ರೆಸ್‌ ಕೈಹಿಡಿದಿದ್ದಾರೆ.

ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಅದ್ಭುತ ಕೆಲಸ ಮಾಡಿದ್ದಾರೆ. ಬಿಜೆಪಿ ಪರವಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸೋಲು – ಗೆಲುವು ಚುನಾವಣೆಯಲ್ಲಿ ಇದ್ದಿದ್ದೆ. ನನಗೆ ಸೋಲಾಗಿದೆ ಎಂದು ಎದೆಗೊಂದುವುದಿಲ್ಲ. ಬಿಜೆಪಿ ಕಾರ್ಯಕರ್ತರು ಕೂಡಾ ಎದೆಗುಂದಬಾರದು. ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರ ಜತೆಗೆ ಇದ್ದು ಕೆಲಸ ಮಾಡುತ್ತೇನೆ ಬಿಜೆಪಿ ಗೆಲ್ಲಬೇಕು ಎಂದು ಕಾರ್ಯಕರ್ತರು ಕೆಲಸ ಮಾಡಿದ್ದಕ್ಕೆ ಕೈಜೋಡಿಸಿ ಕೈಮುಗಿದರು.

18ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ರಾಜುಗೌಡಗೆ 73,850 ಮತಗಳು ಬಂದರೆ, ಕಾಂಗ್ರೆಸ್ ನ ರಾಜಾ ವೇಣುಗೋಪಾಲ ನಾಯಕಗೆ 95,105 ಮತ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ 21,255 ಮತಗಳ ಅಂತರ ಕಾಯ್ದುಕೊಂಡಿದ್ದಿ, 646 ಮತಗಳು ನೋಟಾ ದಾಖಲಾಗಿವೆ.

ಇದನ್ನೂ ಓದಿ: Tushar Girinath : ಬ್ಯಾರಿಕೇಡ್ ತೆಗೆಯದ್ದಕ್ಕೆ ತುಷಾರ್‌ ಗಿರಿನಾಥ್‌ ಗರಂ; ಕಾರಿನಿಂದ ಇಳಿದು ಪೊಲೀಸ್‌ಗೆ ʻಹುಚ್ಚ ನೀನುʼ ಎಂದು ಅವಾಜ್‌

ಹಾಸನದಲ್ಲಿ ಜೆಡಿಎಸ್‌ ಮುನ್ನಡೆ; ಪ್ರಜ್ವಲ್ ರೇವಣ್ಣಗೆ ಇಲ್ಲ ಫಲಿತಾಂಶ ನೋಡುವ ಭಾಗ್ಯ!

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್‌ ರೇವಣ್ಣ ತಮ್ಮ ಕ್ಷೇತ್ರದ ಚುನಾವಣಾ ಫಲಿತಾಂಶ (Election Results 2024) ನೋಡಲಾಗದ ಸ್ಥಿತಿಯಲ್ಲಿ ಇದ್ದಾರೆ. ಒಂದೆಡೆ ಹಾಸನದಲ್ಲಿ ಜೆಡಿಎಸ್‌ ಮುನ್ನಡೆಯಲ್ಲಿದ್ದರೆ, ಮತ್ತೊಂದೆಡೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಫಲಿತಾಂಶ ನೋಡಲಾಗದೆ, ಕೇಳಲಾಗದೆ ಪರಿತಪಿಸುತ್ತಿದ್ದಾರೆ.

ಹಾಸನದ ಮತ ಎಣಿಕೆ ತೀವ್ರ ಕುತೂಹಲ ಮೂಡಿಸಿದ್ದು, ಪ್ರಜ್ವಲ್‌ ರೇವಣ್ಣ ಒಮ್ಮೆ ಹಿನ್ನಡೆ, ಮತ್ತೊಮ್ಮೆ ಮುನ್ನಡೆ ಸಾಧಿಸುತ್ತಿದ್ದಾರೆ. ಸದ್ಯ ಪ್ರಜ್ವಲ್‌ 3009 ಮತಗಳ ಮುನ್ನಡೆಯಲ್ಲಿದ್ದಾರೆ. ಫಲಿತಾಂಶ ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡಿ ಎಂದು ಎಸ್ಐಟಿ ಮುಂದೆ ಪ್ರಜ್ಬಲ್ ಬೇಡಿಕೆ ಇಟ್ಟಿದ್ದಾರೆ. ಆದರೆ, ಟಿವಿ ವ್ಯವಸ್ಥೆಗೆ ಕೋರ್ಟ್ ಅನುಮತಿ ಬೇಕೆಂದು ಎಸ್ಐಟಿ ತನಿಖಾಧಿಕಾರಿ ಹೇಳಿದ್ದಾರೆ. ಹೀಗಾಗಿ ಎಸ್ಐಟಿ ಸೆಲ್‌ನಲ್ಲಿ ಪ್ರಜ್ವಲ್ ಡಲ್ಲಾಗಿ ಅತ್ತಿಂದಿತ್ತ ಓಡಾಡಿಕೊಂಡಿದ್ದಾರೆ.

ಇದನ್ನೂ ಓದಿ | Election Results 2024 : ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭ; ಇವಿಎಂಗಳಲ್ಲಿದ್ದ ಪಕ್ಷಗಳ ಭವಿಷ್ಯ ಬಹಿರಂಗ

ಬೆಂ.ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್‌ ಭರ್ಜರಿ ಮುನ್ನಡೆ

ಹೈ ವೋಲ್ಟೇಜ್‌ ಸ್ಪರ್ಧೆಯ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ (Bangalore Rural Lok Sabha Constituency) ಮತ ಎಣಿಕೆ (vote counting) ಕಾರ್ಯ ಸಾಂಗವಾಗಿ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌ ಮಂಜುನಾಥ್‌ (Dr CN Manjunath) ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 9 ಗಂಟೆಯ ಹೊತ್ತಿಗೆ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಿ.ಕೆ ಸುರೇಶ್‌ (DK Suresh) ಅವರಿಗಿಂತ 50,000 ಮತಗಳ ಮುನ್ನಡೆ (Election results 2024) ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ | Election Result 2024: ವಾರಾಣಸಿಯಲ್ಲಿ ಮೋದಿಗೆ ಆಘಾತ; 6,223 ಮತಗಳ ಹಿನ್ನಡೆ

ಮಂಡ್ಯದಲ್ಲಿ ಎಚ್‌ಡಿಕೆ 33,168 ಮತಗಳ ಲೀಡ್‌

ಮಂಡ್ಯದಲ್ಲಿ ಜೆಡಿಎಸ್​​ (ಮೈತ್ರಿ ಅಭ್ಯರ್ಥಿ) ಎಚ್.ಡಿ.ಕುಮಾರಸ್ವಾಮಿ 33,168 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ 26018 ಮತಗಳ ಮುನ್ನಡೆಯಲ್ಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ 7790 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 32936 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version