Site icon Vistara News

Election Results 2024: ಜಯನಗರ ಮತ ಎಣಿಕೆ ಕೇಂದ್ರದಲ್ಲಿ ಟಿ ಶರ್ಟ್‌ ಕಿರಿಕ್‌; ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ಔಟ್‌

Election Results 2024

ಬೆಂಗಳೂರು: ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ 2024ರ (Lok Sabha Election 2024) ಮತ ಎಣಿಕೆ (Election Results 2024) ನಡೆಯುತ್ತಿದ್ದ ಕೇಂದ್ರದಲ್ಲಿ ಗಲಾಟೆ ನಡೆದಿದೆ. ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ರಘುಪತಿ ಭಟ್ ಎಂಬುವವರು ಪೊಲೀಸರ ವಿರುದ್ಧ ಕೂಗಾಡಿ ಆಕ್ರೋಶ ಹೊರಹಾಕಿದ್ದಾರೆ.

ರಘುಪತಿ ಭಟ್‌ ಟಿ ಶರ್ಟ್‌ ಧರಿಸಿ ಬಂದಿದ್ದರು. ಸೆಕ್ಯೂರಿಟಿ ಚೆಕ್‌ ಎಲ್ಲವೂ ಆದ ಬಳಿಕ ಒಳಗೆ ಬಂದಾಗ ಟಿ ಶರ್ಟ್‌ ಧರಿಸಿ ಮತ ಎಣಿಕೆ ಕೇಂದ್ರಕ್ಕೆ ಬರಬಾರದು ಎಂದು ಪೊಲೀಸರು ಹೊರಗೆ ಕಳಿಸಿದ್ದಾರೆ. ಇದರಿಂದ ಸಿಟ್ಟಾದ ರಘುಪತಿ ಭಟ್‌ ಅನುಮತಿ ಇದೆ‌‌‌ ಎಂದು ಹೇಳಿದ್ದಕ್ಕೆ ಟಿ ಶರ್ಟ್‌ ಧರಿಸಿದ್ದು, ಇಲ್ಲಿಗೆ ಬಂದ್ಮೇಲೆ ಪೊಲೀಸರು ಹೊರಗೆ ಕಳಿಸಿ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಟಿ ಶರ್ಟ್‌ ಧರಿಸಿ ಬರಬಾರದು ಎಂಬ ಯಾವ ರೂಲ್ಸ್‌ ಇಲ್ಲ. ಹೀಗಿದ್ದರೂ ಪೊಲೀಸರು ಸುಖಾಸುಮ್ಮನೆ ಕಿರಿಕಿರಿ ಮಾಡುತ್ತಿದ್ದಾರೆ. ನನ್ನ ಎಳೆದುಕೊಂಡು, ದೂಡಿಕೊಂಡು ಹೊರಗೆ ಕಳಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: Election Results 2024: ಹಾಸನದಲ್ಲಿ ಜೆಡಿಎಸ್‌ ಮುನ್ನಡೆ; ಪ್ರಜ್ವಲ್ ರೇವಣ್ಣಗೆ ಇಲ್ಲ ಫಲಿತಾಂಶ ನೋಡುವ ಭಾಗ್ಯ!

ಮತ ಎಣಿಕೆ ಕೇಂದ್ರದಲ್ಲಿ ಇದೆಲ್ಲ ನಿಷೇಧ

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ ಮಾಡಲಾಗಿದ್ದು, ಹೆಜ್ಜೆ ಹೆಜ್ಜೆಗೂ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಇಡಲಾಗಿದೆ. ಪೊಲೀಸ್ ಸಿಬ್ಬಂದಿ, ಮತ ಎಣಿಕೆ ಸಿಬ್ಬಂದಿ ಸೇರಿದಂತೆ ಯಾರಿಗೂ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ. ನಾಲ್ಕು ಹಂತದಲ್ಲಿ ಸಿಬ್ಬಂದಿಯ ಐಡಿ ಕಾರ್ಡ್ ತಪಾಸಣೆ ಮಾಡಲಾಗುತ್ತದೆ.

Election Results 2024

ಅಂದಹಾಗೆ ಮತ ಎಣಿಕೆ ಕೇಂದ್ರದ ಕೊಠಡಿಯೊಳಗೆ ಮೊಬೈಲ್‌ ಫೋನ್‌, ಸ್ಮಾಟ್‌ ವಾಚ್‌, ಬ್ಲ್ಯೂಟೂತ್‌ ಡಿವೈಸ್‌, ನೀರಿನ ಬಾಟೆಲ್‌, ತಿಂಡಿ ಹಾಗೂ ತಂಪು ಪಾನೀಯಯನ್ನು ತರುವಂತಿಲ್ಲ. ಇನ್ನೂ ಗುಟ್ಕಾ, ಪಾನ್‌ ಮಸಾಲ, ಧೂಮಪಾನವೂ ನಿಷೇಧವಿದೆ. ಮ್ಯಾಚ್‌ ಬಾಕ್ಸ್‌, ಲೈಟರ್‌, ಪಟಾಕಿಯನ್ನು ತರುವಂತಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version