Site icon Vistara News

Indresh Kumar: ರಾಮ ಭಕ್ತರು ಅಧಿಕಾರದಲ್ಲಿದ್ದಾರೆ, ರಾಮ ವಿರೋಧಿಗಳು ಸೋತಿದ್ದಾರೆ; ಆರ್‌ಎಸ್‌ಎಸ್‌ ನಾಯಕನ ಹೊಸ ಹೇಳಿಕೆ

Indresh Kumar

ರಾಮನನ್ನು (ram) ವಿರೋಧಿಸಿದವರು ಅಧಿಕಾರದಿಂದ ಹೊರಗೆ ಉಳಿದಿದ್ದಾರೆ. ರಾಮ ಭಕ್ತಿ ಪ್ರತಿಜ್ಞೆ ಮಾಡಿದವರು ಅಧಿಕಾರದಲ್ಲಿದ್ದಾರೆ. ನರೇಂದ್ರ ಮೋದಿ (narendra modi) ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗಿದೆ ಎಂದು ಆರ್ ಎಸ್ ಎಸ್ ನಾಯಕ (RSS Leader) ಇಂದ್ರೇಶ್ ಕುಮಾರ್ (Indresh Kumar) ಹೇಳಿದ್ದಾರೆ. ಬಿಜೆಪಿಯ ದುರಂಹಕಾರ (BJP’s Arrogance) ಕುರಿತು ಇವರು ಈ ಹಿಂದೆ ನೀಡಿದ ಹೇಳಿಕೆ ಭಾರಿ ಚರ್ಚೆಗೆ ಒಳಗಾಗಿತ್ತು. ಇವರ ಹೇಳಿಕೆ ಮೋದಿ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಎಂಬ ವ್ಯಾಖ್ಯಾನ ಕೇಳಿ ಬಂದಿತ್ತು. ಇದೀಗ ಇಂದ್ರೇಶ್‌ ಕುಮಾರ್‌ ಯುಟರ್ನ್‌ ಹೊಡೆದಿದ್ದಾರೆ. ಮೋದಿ ಮತ್ತು ಬಿಜೆಪಿ ಪರ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) 240 ಸ್ಥಾನಗಳಿಗೆ ಸೀಮಿತವಾಗಿದೆ. ಬಿಜೆಪಿ ನಾಯಕರ “ಅಹಂಕಾರ”ದಿಂದ ಪಕ್ಷವು ಬಹುಮತದ ಅಂಕವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದು ಸಂಚಲನ ಸೃಷ್ಟಿಸಿತ್ತು.

ಲೋಕಸಭೆ ಸ್ಥಾನಗಳಲ್ಲಿ 240 ಸ್ಥಾನಗಳನ್ನು ಪಡೆದ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕುರಿತು ಜೈಪುರ ಬಳಿಯ ಕನೋಟಾದಲ್ಲಿ ಗುರುವಾರ ನಡೆದ ‘ರಾಮರಥ ಅಯೋಧ್ಯೆ ಯಾತ್ರಾ ದರ್ಶನ ಪೂಜಾ ಸಮಾರೋಹ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮನ ಭಕ್ತಿ ಮಾಡಿದ ಸೊಕ್ಕಿನ ಪಕ್ಷವನ್ನು 241ಕ್ಕೆ ನಿಲ್ಲಿಸಲಾಯಿತು. ಆದರೆ ಅದುವೇ ಅತಿದೊಡ್ಡ ಪಕ್ಷವಾಯಿತು ಎಂದು ಟೀಕಿಸಿದ್ದರು.


ಅಹಿಂಸೆ ಮತ್ತು ಸತ್ಯದ ತತ್ವಗಳನ್ನು ಉಲ್ಲೇಖಿಸಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎಲ್ಲರ ಬಗ್ಗೆ ವಿನಮ್ರತೆ ಮತ್ತು ಸದ್ಭಾವನೆಯ ಅಗತ್ಯವನ್ನು ಒತ್ತಿ ಹೇಳಿದ್ದರು ಹಾಗೂ ನಿಜವಾದ ‘ಸೇವಕ’ ಅಹಂಕಾರವಿಲ್ಲದೆ ಜನರ ಸೇವೆ ಮಾಡಬೇಕು ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: Lok Sabha Election : ಅಹಂಕಾರ ತೋರಿಸಿದ್ದಕ್ಕೆ ರಾಮನೇ 241 ಸ್ಥಾನಕ್ಕೆ ನಿಲ್ಲಿಸಿದ; ಪರೋಕ್ಷ ಟಾಂಗ್​ ಕೊಟ್ಟ ಆರ್​ಎಸ್​ಎಸ್​​ ಸಿದ್ಧಾಂತವಾದಿ

ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯವನ್ನು ಎತ್ತಿ ಹಿಡಿದು ವಿವಾದವನ್ನು ಹುಟ್ಟು ಹಾಕಿತ್ತು. ಇಂತಹ ಹೇಳಿಕೆಗಳು ಗೊಂದಲವನ್ನು ಬಿತ್ತುವ ಉದ್ದೇಶದಿಂದ ಮಾಡಲಾಗಿದೆ. ಇದು ಕೇವಲ ಊಹಾಪೋಹ ಎಂದು ಆರ್ ಎಸ್ ಎಸ್ ಸ್ಪಷ್ಟಪಡಿಸಿದೆ.

Exit mobile version