ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸಂಪೂರ್ಣ ಬಹುಮತ (Karnataka Election Results 2024) ಸಿಕ್ಕಿದೆ. ಸುಮಾರು 295ಕ್ಕೂ ಹೆಚ್ಚಿನ ಸೀಟ್‌ಗಳನ್ನೂ ಮೈತ್ರಿಕೂಟ ಪಡೆದಿದೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ನಾವು ಒಟ್ಟಾಗಿ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ನಡುವೆ ನಮ್ಮ ಈ ಸಾಧನೆ ತೃಪ್ತಿ ತಂದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, 20 ಸೀಟ್ ಪಡೆಯುತ್ತೇವೆ ಅಂತ ಹೇಳಿದ್ದ ಕಾಂಗ್ರೆಸ್‌ಗೆ ಈ ಫಲಿತಾಂಶದಿಂದ ಮುಖಭಂಗವಾಗಿದೆ. ಕಾಂಗ್ರೆಸ್ ಪಕ್ಷದ ಕನಸು ಭಗ್ನವಾಗಿದೆ. ನಮ್ಮ ಈ ಅಭೂತಪೂರ್ವ ಗೆಲುವಿಗೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹಾಗೂ ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಸಿಎಂ, ಡಿಸಿಎಂ 20 ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಅಂತ ಹೇಳಿದ್ದರು. ಈ ಸರ್ಕಾರ ಗ್ಯಾರಂಟಿ ನಡುವೆ ನಮ್ಮ ಈ ಸಾಧನೆ ನಮಗೆ ತೃಪ್ತಿ ಇದೆ. ಇದು ನಮಗೆ ಹಿನ್ನಡೆ ಅಂತ ನಾವು ಅಂದುಕೊಳ್ಳಲ್ಲ. ನಾವು ಗೆದ್ದ 19 ಕ್ಷೇತ್ರಗಳಲ್ಲಿ ವಿಶ್ಲೇಷಣೆ ಆಗುತ್ತದೆ. ಹಾಸನ ಸೇರಿದಂತೆ ಸೋತಿರುವ ಕ್ಷೇತ್ರಗಳಲ್ಲಿ ಆತ್ಮಾವಲೋಕನ ನಡೆಯುತ್ತದೆ. ಸದ್ಯ ಯಾವ ಸಚಿವರೂ ಬೀಗುವ ವಾತಾವರಣ ಇಲ್ಲ ಎಂದು ತಿಳಿಸಿದ್ದಾರೆ.
ಗ್ಯಾರಂಟಿಗಳು ಬೋಗಸ್ ಅಂತ ಸಾಬೀಯಾಗಿದೆ: ಆರ್.ಅಶೋಕ್
ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯದ ಫಲಿತಾಂಶವನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. 136 ಜನ ಶಾಸಕರು ಇದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಮೆರೆಯುತ್ತಿದ್ದರು. 20 ಸ್ಥಾನ ಗೆಲ್ಲುತ್ತೇವೆ, ಅಂತ ಹೇಳುತ್ತಿದ್ದರು. ಗ್ಯಾರಂಟಿ ಎಲ್ಲಾ ಬೋಗಸ್ ಅಂತ ಈಗ ಸಾಬೀತು ಆಗಿದೆ ಎಂದು ತಿಳಿಸಿದರು.
ನಮ್ಮ ಹಣ ತೆಗೆದುಕೊಂಡು ನಮಗೆ ಕೊಡುತ್ತಿದ್ದಾರೆ. ಡಿಕೆಶಿ ತಮ್ಮನೇ ಸೋಲು ಕಂಡಿದ್ದಾರೆ. ಇದಕ್ಕೆ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಅವರ ಸ್ವ ಕ್ಷೇತ್ರ ಮೈಸೂರಿನಲ್ಲಿ ಸಹ ಸೋತಿದ್ದಾರೆ. ಸೋಲಿನ ಪಶ್ಚಾತ್ತಾಪ ಅವರು ಪಡಬೇಕು. ಯಾವುದೇ ಗ್ಯಾರಂಟಿ ಮತ ತಂದು ಕೊಟ್ಟಿಲ್ಲ. ಅತ್ತ ಭ್ರಷ್ಟಾಚಾರ ಮಾಡಿದ ಸಚಿವರ ರಾಜೀನಾಮೆ ಸಹ ಕೇಳಿಲ್ಲ. ಅತಿಯಾದ ಮುಸ್ಲಿಂ ಓಲೈಕೆ ಮಾಡಲು ಹೋಗಿ ಹೀಗೆ ಆಗಿದೆ. ಈ ಮೂಲಕ ಕಾಂಗ್ರೆಸ್ ವಿರುದ್ಧದ ಅಲೆ ಎದ್ದಿದೆ ಎಂದರು.
ಇದನ್ನೂ ಓದಿ | AP Election Results 2024 Live: ಚಂದ್ರಬಾಬು ನಾಯ್ಡುಗೆ ಮತ್ತೆ ಒಲಿಯಲಿದೆ ಸಿಎಂ ಪಟ್ಟ; ಜೂನ್ 9ರಂದು ಪ್ರಮಾಣ ವಚನ ಸ್ವೀಕಾರ ಸಾಧ್ಯತೆ
ಮೋದಿ ದೇಶದ ಪ್ರಧಾನಿ ಆಗಬೇಕು ಹಾಗೂ 400 ಸೀಟ್ ಗೆಲ್ಲಬೇಕು ಅಂತ ಎರಡು ಅಜೆಂಡಾ ಇಟ್ಟು ಕೊಂಡಿದ್ದೆವು. ಅದರಲ್ಲಿ ಒಂದು ಆಗಿದೆ, ಮತ್ತೊಂದು ಆಗಿಲ್ಲ. ಒಟ್ಟಾರೆ ಈ ಫಲಿತಾಂಶ ನನಗೆ ತೃಪ್ತಿ ತಂದಿದೆ. ಕಾಂಗ್ರೆಸ್ ಕಳೆದ ಬಾರಿ ಹೊಂದಾಣಿಕೆ ವಿಫಲ ಆಗಿತ್ತು. ನಮ್ಮ ಈ ಹೊಂದಾಣಿಕೆ ವರ್ಕ್ ಔಟ್ ಆಗಿದೆ. ಕೆಲವು ಕಡೆಗಳಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ ಆಗಿತ್ತು. ಮುಂದಿನ ದಿನಗಳಲ್ಲಿ ಇವುಗಳನ್ನು ಸರಿಪಡಿಸಿ ಮುಂದೆ ಹೋಗುತ್ತೇವೆ ಎಂದು