ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ (BJP Karnataka) ಸಕಲ ತಯಾರಿ ನಡೆಸುತ್ತಿದೆ. ಪ್ರತಿಯೊಂದನ್ನೂ ಪ್ಲ್ಯಾನ್ ಪ್ರಕಾರವೇ ಮಾಡಿಕೊಂಡು ಬರುವ ಕಮಲ ಪಡೆಯು ಈ ಬಾರಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೂ ಕಾರ್ಯತಂತ್ರವನ್ನು ರೂಪಿಸಿದೆ. ಈ ಏಪ್ರಿಲ್ 1ರಿಂದ ಬಿಜೆಪಿ ಅಭ್ಯರ್ಥಿಗಳು ನಾಮಪತ್ರಕ್ಕೆ ಮುಂದಾಗುತ್ತಿದ್ದು, ಪ್ರತಿ ಕ್ಷೇತ್ರದಲ್ಲೂ ಅಭ್ಯರ್ಥಿ ನಾಮಪತ್ರ ಸಲ್ಲಿಕೆ (Nomination Filing) ವೇಳೆ ಪಕ್ಷದ ಹಿರಿಯ ನಾಯಕರ ತಂಡ ಇರಲೇಬೇಕು ಎಂಬ ಕಟ್ಟಪ್ಪಣೆ ಹೊರಡಿಸಲಾಗಿದೆ. ಈ ಸಂಬಂಧ ಯಾರು ಯಾರು, ಯಾವ ಯಾವ ಅಭ್ಯರ್ಥಿಗಳ ಜತೆ ನಾಮಪತ್ರ ಸಲ್ಲಿಕೆ ದಿನದಂದು ಹಾಜರಿರಬೇಕು ಎಂಬುದನ್ನೂ ನಿಯೋಜನೆ ಮಾಡಲಾಗಿದೆ.
14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಹಲವು ಜನ ಹಿರಿಯರ ತಂಡ, ಜೆಡಿಎಸ್ ಪ್ರಮುಖರ ತಂಡ ಭಾಗವಹಿಸಲಿದೆ. ಅದಕ್ಕಾಗಿ ಬೇರೆ ಬೇರೆ ತಂಡಗಳನ್ನು ಆಯೋಜನೆ ಮಾಡಿ, 2 ಪಕ್ಷಗಳ ತಂಡವನ್ನು ಕಳಿಸಲಾಗುತ್ತಿದೆ.
ಇಲ್ಲಿ ಏಪ್ರಿಲ್ 1ರಿಂದ 4ರವರೆಗೆ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಕೆ ಮಾಡುತ್ತಿದ್ದು, ಒಂದೇ ದಿನ ಹಲವರು ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದಾರೆ. ಆ ವಿವರವನ್ನು ದಿನಾಂಕವಾರು ನೀಡಲಾಗಿದೆ.
ಇದನ್ನೂ ಓದಿ: Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್; ಮೋದಿ ಬಂದರೂ ಹೆದರಲ್ಲ!
ಏಪ್ರಿಲ್ 1ಕ್ಕೆ ಯಾವ ಅಭ್ಯರ್ಥಿ ಜತೆ ಯಾರ ತಂಡ?
ಏಪ್ರಿಲ್ 1ರಂದು ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ (PC Mohan) ನಾಮಪತ್ರ ಸಲ್ಲಿಸುತ್ತಾರೆ. ಈ ವೇಳೆ ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ (BS Yediyurappa), ಡಿ.ವಿ. ಸದಾನಂದ ಗೌಡ (DV Sadanada Gowda), ಬಸವರಾಜ ಬೊಮ್ಮಾಯಿ (Basavaraj Bommai), ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ವಿರೋಧ ಪಕ್ಷದ ವಿಪಕ್ಷ ನಾಯಕ ಆರ್. ಅಶೋಕ್ (R Ashok), ಮಾಜಿ ಸಚಿವರಾದ ಸಿ.ಟಿ.ರವಿ (CT Ravi), ಅರವಿಂದ ಲಿಂಬಾವಳಿ, ಸುರೇಶ್‍ಕುಮಾರ್, ಜನಾರ್ದನ ರೆಡ್ಡಿ ಹಾಗೂ ಎಸ್.ರಘು, ತಾರಾ ಅನುರಾಧ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು. ಬನ್ನಪ್ಪ ಪಾರ್ಕಿನಿಂದ ಬಿಬಿಎಂಪಿ ತನಕ ರೋಡ್ ಶೋವನ್ನು ಸಹ ಈ ವೇಳೆ ಆಯೋಜನೆ ಮಾಡಲಾಗಿದೆ.
ಏಪ್ರಿಲ್ 3ಕ್ಕೆ ಯಾವ ಅಭ್ಯರ್ಥಿ ಜತೆ ಯಾರ ತಂಡ?
ಏ. 3ರಂದು ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣರಾಜ ಒಡೆಯರ್ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್, ಮಾಜಿ ಶಾಸಕ ಎನ್. ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಪಾಲ್ಗೊಳ್ಳುತ್ತಾರೆ.
ಅದೇ ದಿನ ಚಾಮರಾಜನಗರದ ನಮ್ಮ ಅಭ್ಯರ್ಥಿ ಎಸ್. ಬಾಲರಾಜ್ ಅವರ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶ್ರೀನಿವಾಸ ಪ್ರಸಾದ್, ಎ. ನಾರಾಯಣಸ್ವಾಮಿ, ಡಿ.ವಿ. ಸದಾನಂದಗೌಡ, ಅರವಿಂದ ಲಿಂಬಾವಳಿ, ಶ್ರುತಿ ಅವರು ಉಪಸ್ಥಿತರಿರುವರು.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಕೂಡ ಏ. 3ರಂದು ಉಡುಪಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ಮಾಜಿ ಸಚಿವರಾದ ಸಿ.ಟಿ. ರವಿ, ಜೆ.ಸಿ.ಮಾಧುಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ್, ಸಂಸದ ತೇಜಸ್ವಿ ಸೂರ್ಯ ಭಾಗವಹಿಸುತ್ತಾರೆ.
ಏ. 3ರಂದು ತುಮಕೂರಿನ ನಮ್ಮ ಅಭ್ಯರ್ಥಿ ಸೋಮಣ್ಣ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್, ಜನಾರ್ದನ ರೆಡ್ಡಿ, ಶ್ರೀರಾಮುಲು, ಬೈರತಿ ಬಸವರಾಜು, ಜೆ.ಸಿ. ಮಾಧುಸ್ವಾಮಿ, ಜಗ್ಗೇಶ್, ಕುಡಚಿ ರಾಜೀವ್, ವೈ.ಎ.ನಾರಾಯಣಸ್ವಾಮಿ ಅವರು ಪಾಲ್ಗೊಳ್ಳುವರು.
3ರಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಮುಖರಾದ ಆರ್. ಅಶೋಕ್, ಡಾ. ಅಶ್ವತ್ಥನಾರಾಯಣ, ಬೈರತಿ ಬಸವರಾಜು, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸುತ್ತಾರೆ. ಅಂದು ಗಣಪತಿ ದೇವಸ್ಥಾನ, ಮೈಸೂರು ಬ್ಯಾಂಕ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ರೋಡ್ ಶೋ ನಡೆಯಲಿದೆ.
ಏಪ್ರಿಲ್ 4ಕ್ಕೆ ಯಾವ ಅಭ್ಯರ್ಥಿ ಜತೆ ಯಾರ ತಂಡ?
ಏಪ್ರಿಲ್ 4ರಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮಂಗಳೂರಿನ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಲ್ಹಾದ್ ಜೋಶಿ, ನಳಿನ್‍ಕುಮಾರ್ ಕಟೀಲ್, ವಿ. ಸುನೀಲ್ ಕುಮಾರ್, ಸಿ.ಟಿ. ರವಿ, ತಾರಾ ಅನುರಾಧ ಅವರು ಭಾಗವಹಿಸುತ್ತಾರೆ. ಟೌನ್ ಹಾಲ್, ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ರೋಡ್ ಶೋ ಇರುತ್ತದೆ. 4ರಂದು ಬೆಂಗಳೂರು ಗ್ರಾಮಾಂತರದ ಡಾ. ಸಿ.ಎನ್. ಮಂಜುನಾಥ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್, ಸಿ.ಟಿ.ರವಿ, ಡಾ.ಅಶ್ವತ್ಥನಾರಾಯಣ, ಎ.ನಾರಾಯಣಸ್ವಾಮಿ, ಜಿ.ಟಿ. ದೇವೇಗೌಡ, ಸಿ.ಪಿ. ಯೋಗೇಶ್ವರ್, ಎಸ್. ಸುರೇಶ್ ಕುಮಾರ್, ಶ್ರುತಿ ಮತ್ತಿತರರು ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ: Lok Sabha Election 2024: ದೇವೇಗೌಡರಿಂದ ಕನ್ನಡಿಗರಿಗೆ ದ್ರೋಹ; ನನ್ನದು ಕನ್ನಡಿಗನ ಸ್ವಾಭಿಮಾನ: ಸಿದ್ದರಾಮಯ್ಯ
ಏಪ್ರಿಲ್ 4ರಂದು ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವಿದೆ. ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಆರ್. ಅಶೋಕ್, ಡಾ .ಅಶ್ವತ್ಥನಾರಾಯಣ, ಪ್ರತಾಪ್ ಸಿಂಹ, ಸುನಿಲ್ ಕುಮಾರ್, ತಾರಾ ಅನುರಾಧ ಭಾಗವಹಿಸುವರು.
Live : ಪತ್ರಿಕಾಗೋಷ್ಠಿ
— BJP Karnataka (@BJP4Karnataka) March 30, 2024
ಸ್ಥಳ : ಚುನಾವಣಾ ಮಾಧ್ಯಮ ಕೇಂದ್ರ, ಜಿ. ಎಂ. ರಿಜಾಯ್ಸ್, ಬೆಂಗಳೂರುhttps://t.co/S9Xj5qmY8L
ಏಪ್ರಿಲ್ 4ರಂದು ಚಿತ್ರದುರ್ಗದ ಗೋವಿಂದ ಕಾರಜೋಳ ಅವರು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಜೆ.ಸಿ. ಮಾಧುಸ್ವಾಮಿ, ಜನಾರ್ದನ ರೆಡ್ಡಿ, ವೈಎ. ನಾರಾಯಣಸ್ವಾಮಿ, ಎನ್. ರವಿಕುಮಾರ್, ವೈ.ಎ. ನಾರಾಯಣಸ್ವಾಮಿ, ತಿಪ್ಪಾರೆಡ್ಡಿ, ಚಿದಾನಂದಗೌಡ, ರಾಜೇಶ್ ಗೌಡ ಭಾಗವಹಿಸುತ್ತಾರೆ.
ಅದೇ ದಿನ ಚಿಕ್ಕಬಳ್ಳಾಪುರದ ನಮ್ಮ ಅಭ್ಯರ್ಥಿ ಡಾ. ಸುಧಾಕರ್ ಅವರ ನಾಮಪತ್ರ ಸಲ್ಲಿಕೆ ನಡೆಯುತ್ತದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ, ಅಶೋಕ್, ಮುನಿರತ್ನ, ಬೈರತಿ ಬಸವರಾಜು, ಎಂ.ಟಿ.ಬಿ.ನಾಗರಾಜ್, ಜನಾರ್ದನ ರೆಡ್ಡಿ, ಅರವಿಂದ ಲಿಂಬಾವಳಿ, ಛಲವಾದಿ ನಾರಾಯಣಸ್ವಾಮಿ, ವೈಎ.ನಾರಾಯಣಸ್ವಾಮಿ, ಎಸ್.ಮುನಿರಾಜು, ಶ್ರೀಮತಿ ತಾರಾ ಅನುರಾಧ ಅವರು ಭಾಗವಹಿಸುವರು.