Site icon Vistara News

Lok sabha election: ತಮಿಳುನಾಡಿನಲ್ಲಿ ಬಿಜೆಪಿ ಆಗಲಿದೆ 2ನೇ ಅತಿದೊಡ್ಡ ಪಕ್ಷ; ಸಮೀಕ್ಷೆ ಹೇಳೋದಿಷ್ಟು

Lok Sabha election-2024

ತಮಿಳುನಾಡು: ಲೋಕಸಭಾ ಚುನಾವಣೆಯಲ್ಲಿ (Lok sabha election-2024) ಈ ಬಾರಿ ತಮಿಳುನಾಡಿನ (tamilnadu) ಕೊಯಮುತ್ತೂರಿನಲ್ಲಿ (coimbatore) ಕಣಕ್ಕೆ ಇಳಿದಿರುವ ಕೆ. ಅಣ್ಣಾಮಲೈ (K. Annamalai) ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ (bjp) ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ಟೈಮ್ಸ್ ನೌ-ಇಟಿಜಿ (times know-ETG) ಸಂಶೋಧನಾ ಸಮೀಕ್ಷೆ ಹೇಳಿದೆ.

ತಮಿಳುನಾಡಿನಲ್ಲಿ ಅಣ್ಣಾಮಲೈ ನೇತೃತ್ವದ ಬಿಜೆಪಿ ಡಿಎಂಕೆ ಅನಂತರ ಮತ ಹಂಚಿಕೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಟೈಮ್ಸ್ ನೌ-ಇಟಿಜಿ_ಸಂಶೋಧನಾ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ ತಮಿಳುನಾಡಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಶೇ. 19ರಷ್ಟು ಮತವನ್ನು ಬಾಚಿಕೊಳ್ಳಲಿದ್ದು ಡಿಎಂಕೆಗೆ ಭಾರೀ ಹೊಡೆತ ನೀಡುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ಡಿಎಂಕೆಯು ಶೇ. 26ರಷ್ಟು ಮತಗಳನ್ನು ಪಡೆದರೆ ಮಿತ್ರಪಕ್ಷ ಕಾಂಗ್ರೆಸ್ ಶೇ.18ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಜೆಪಿ ಶೇ.19 ಮತ ಗಳಿಸಿದರೆ ಎಐಎಡಿಎಂಕೆ ಶೇ. 17 ಮತ್ತು ಇತರರು ಶೇ. 20ರಷ್ಟು ಮತಗಳಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: K. Annamalai: ಬದುಕು ಬದಲಿಸಿದ ಮಾನಸ ಸರೋವರ ಯಾತ್ರೆ! ಕೆ.ಅಣ್ಣಾಮಲೈ ಕುರಿತ ಕುತೂಹಲಕರ ಸಂಗತಿಗಳಿವು

ಅಂಕಿ ಅಂಶ ಏನು ಹೇಳುತ್ತದೆ ?

ಸಮೀಕ್ಷೆಯ ಪ್ರಕಾರ ಡಿಎಂಕೆ 20- 21 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಮಿತ್ರಪಕ್ಷಗಳು 5- 7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. 2019ರ ಲೋಕಸಭೆ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿರುವ ಬಿಜೆಪಿ ಈ ಬಾರಿ ಮಾತ್ರ 2 -6 ಸ್ಥಾನಗಳನ್ನು ಗೆಲ್ಲಲಿದೆ ಎನ್ನಲಾಗುತ್ತದೆ.

ಮೋಡಿ ಮಾಡುವ ಮೋದಿ ಅಲೆ

ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲಿ ಪ್ರಭಾವ ಬೀರಿದೆ ಎನ್ನಲಾಗಿದೆ. ಸಮೀಕ್ಷೆಯ ಪ್ರಕಾರ ಪ್ರಧಾನಿಯ ಚಿತ್ರಣವು ದಕ್ಷಿಣ ಭಾರತದಲ್ಲಿ ಮತದಾನದ ಮಾದರಿಯ ಮೇಲೆ ಗಣನೀಯವಾಗಿ ಪ್ರಭಾವ ಬೀರುತ್ತದೆ. ಶೇ.23ರಷ್ಟು ಮತದಾರರು ಪ್ರಧಾನಿಯವರ ವ್ಯಕ್ತಿತ್ವವನ್ನು ಆಧರಿಸಿ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಶೇಕಡಾ 19 ರಷ್ಟು ಜನರು ಮತ ಚಲಾಯಿಸುವಾಗ ಪ್ರಾದೇಶಿಕ ನಾಯಕರನ್ನು ಪರಿಗಣಿಸುವುದಾಗಿ ಹೇಳಿದ್ದರೆ, ಆದರೆ ಶೇಕಡಾ 17 ರಷ್ಟು ಜನರು ಸಂಸದರ ಚಿತ್ರದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ್ದಾರೆ. ಸಮೀಕ್ಷೆಯ ಪ್ರಕಾರ ಧರ್ಮದ ವಿಚಾರ ಇಲ್ಲಿ ಅಷ್ಟಾಗಿ ಪ್ರಭಾವ ಬೀರಿಲ್ಲ. ಕೇವಲ ಏಳು ಶೇಕಡಾ ಮತದಾರರು ಮಾತ್ರ ಇದಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಹೇಗಿದೆ ಅಣ್ಣಾಮಲೈ ಕ್ಷೇತ್ರ ?

ಕೊಯಮತ್ತೂರು ಕ್ಷೇತ್ರದಲ್ಲಿ ಡಿಎಂಕೆ ನಾಯಕ ಗಣಪತಿ ಪಿ. ರಾಜ್ ಕುಮಾರ್ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ , ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಎಐಎಡಿಎಂಕೆಯ ಸಿಂಗೈ ರಾಮಚಂದ್ರನ್ ಕಣಕ್ಕೆ ಇಳಿದಿದ್ದು, ಈ ಕ್ಷೇತ್ರ ಭಾರೀ ಪೈಪೋಟಿಗೆ ಸಾಕ್ಷಿಯಾಗಲಿದೆ.

ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿದಿದ್ದರೂ ಗೆಲವು ಸಾಧಿಸಿಲ್ಲ. ಭಾರಿ ಮತಗಳ ಅಂತರದಿಂದ ಸೋಲು ಅನುಭವಿಸಿತ್ತು. ಆದರೆ ಈ ಬಾರಿ ಗೆಲುವಿನ ನಿರೀಕ್ಷೆ ಮೂಡಿಸಿರುವುದು ಬಿಜೆಪಿ ಅಭ್ಯರ್ಥಿಯಾಗಿರುವ ಕೆ. ಅಣ್ಣಾಮಲೈ. ಆದರೂ ಇಲ್ಲಿ ಗೆಲುವು ಅಷ್ಟು ಸುಲಭವೇನಲ್ಲ. ಯಾಕೆಂದರೆ ಡಿಎಂಕೆ, ಎಐಎಡಿಎಂಕೆ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದೆ.

ಹಿಂದೆ ಇಲ್ಲಿ ಏನಾಗಿದೆ ?

2014 ಮತ್ತು 2019ರ ಎರಡು ಲೋಕಸಭಾ ಚುನಾವಣೆಗಳಲ್ಲಿ ಕೊಯಮತ್ತೂರಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಸತತ ಸೋಲು ಅನುಭವಿಸಿದ್ದರು. 2014ರಲ್ಲಿ ಎಐಎಡಿಎಂಕೆಯ ಪಿ. ನಾಗರಾಜನ್ ಅವರು ಸಿ.ಪಿ. ರಾಧಾಕೃಷ್ಣನ್ ಅವರನ್ನು ಸೋಲಿಸಿ 42,016 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

2019ರಲ್ಲಿ ಸಿ.ಪಿ. ರಾಧಾಕೃಷ್ಣನ್ ಅವರ ವಿರುದ್ಧ ಕಣಕ್ಕೆ ಇಳಿದಿದ್ದ ಸಿಪಿಐ (ಎಂ) ಸಂಸದ ಪಿ.ಆರ್. ನಟರಾಜನ್ ಅವರು 1,79,143 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ಸಿ.ಪಿ.ರಾಧಾಕೃಷ್ಣನ್ ಅವರು ಶೇ. 31.3. ಹಾಗೂ ಪಿ.ಆರ್.ನಟರಾಜನ್ ಶೇ.45.7ರಷ್ಟು ಮತಗಳನ್ನು ಪಡೆದಿದ್ದರು. ಒಂದು ವೇಳೆ ಇಲ್ಲಿ ಈ ಬಾರಿ ಬಿಜೆಪಿ ಗೆಲವು ಸಾಧಿಸಿದರೆ ಬಹುದೊಡ್ಡ ಇತಿಹಾಸವೇ ಸೃಷ್ಟಿಯಾಗಲಿದೆ.

Exit mobile version