Site icon Vistara News

Lok Sabha Election 2024: ಲೋಕಸಭೆ ಚುನಾವಣೆಯಲ್ಲಿ 7 ಸಂಸದರಿಗೆ ಸಿಕ್ಕಿದ್ದು ಶೇ. 70ಕ್ಕಿಂತ ಹೆಚ್ಚು ಮತ; ಯಾರಿವರು?

Lok Sabha Election 2024

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕೇವಲ ಏಳು ಸಂಸದರು (MPs) ತಮ್ಮ ಕ್ಷೇತ್ರಗಳಲ್ಲಿ ಒಟ್ಟು ಶೇ. 70ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಮತ್ತು ಅವರೆಲ್ಲರೂ ಭಾರತೀಯ ಜನತಾ ಪಕ್ಷದವರು (BJP) ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ರಾಷ್ಟ್ರೀಯ ಚುನಾವಣಾ ವೀಕ್ಷಣೆಯ ಹೊಸ ವರದಿಗಳು ತಿಳಿಸಿವೆ.

ಅದೇ ರೀತಿ ಕಾಂಗ್ರೆಸ್‌ನ (congress) ಮೂವರು ಸಂಸದರು ತಮ್ಮ ಸ್ಥಾನಗಳಲ್ಲಿ ಒಟ್ಟು ಶೇ. 30ಕ್ಕಿಂತ ಕಡಿಮೆ ಮತಗಳೊಂದಿಗೆ ವಿಜೇತರಾಗಿದ್ದಾರೆ ಎಂಬುದನ್ನು ಈ ವರದಿ ಉಲ್ಲೇಖಿಸಿದೆ. ಹೊಸ ಲೋಕಸಭಾ ಚುನಾವಣೆಯಲ್ಲಿ 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಮತ ಹಂಚಿಕೆಯನ್ನು ಎಡಿಆರ್ ವಿಶ್ಲೇಷಿಸಿದೆ. ಸೂರತ್ ನಲ್ಲಿ ಬಿಜೆಪಿ ಸಂಸದರು ಅವಿರೋಧವಾಗಿ ಆಯ್ಕೆಯಾಗಿದ್ದರು.

ವರದಿಯ ಪ್ರಕಾರ 542 ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು 279 ಮಂದಿ ಶೇ. 50ಕ್ಕಿಂತ ಹೆಚ್ಚಿನ ಮತಗಳಿಂದ ಗೆದ್ದಿದ್ದರೆ 263ರಷ್ಟು ಮಂದಿ ತಮ್ಮ ಕ್ಷೇತ್ರಗಳಲ್ಲಿ ಒಟ್ಟು ಶೇ. 50ಕ್ಕಿಂತ ಕಡಿಮೆ ಮತಗಳಿಂದ ಚುನಾವಣೆ ಗೆದ್ದಿದ್ದಾರೆ.


ಬಿಜೆಪಿಯ 239 ವಿಜೇತರಲ್ಲಿ 75 ಮಂದಿ ತಮ್ಮ ಕ್ಷೇತ್ರಗಳಲ್ಲಿ ಒಟ್ಟು ಶೇ. 50ಕ್ಕಿಂತ ಕಡಿಮೆ ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಐಎನ್‌ಸಿಯಿಂದ 99 ವಿಜೇತರಲ್ಲಿ 57 ಮಂದಿ ಶೇ. 58, ಎಸ್‌ಪಿಯಿಂದ 37 ವಿಜೇತರಲ್ಲಿ 32 ಮಂದಿ ಶೇ. 86, ಎಐಟಿಸಿಯಿಂದ 29 ವಿಜೇತರಲ್ಲಿ 21 ಮಂದಿ ಶೇ. 72 ಮತ್ತು ಡಿಎಂಕೆಯಿಂದ 22 ವಿಜೇತರಲ್ಲಿ 14 ಮಂದಿ ಶೇ. 64ಕ್ಕಿಂತ ಕಡಿಮೆ ಮತಗಳಿಂದ ಗೆದ್ದಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರದಲ್ಲಿ ಒಟ್ಟು ಶೇ. 50ಕ್ಕಿಂತ ಕಡಿಮೆ ಮತಗಳು ಚಲಾವಣೆಯಾದವು ಎಂದು ಅಂಕಿ ಅಂಶ ಉಲ್ಲೇಖಿಸಿದೆ. ಮತ್ತೊಂದೆಡೆ ಬಿಜೆಪಿಯ 164 ಮತ್ತು ಕಾಂಗ್ರೆಸ್‌ನ 42 ಸಂಸದರು ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಗೆದ್ದಿದ್ದಾರೆ. ತೆಲುಗು ದೇಶಂ ಪಕ್ಷವು ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ 15 ಸಂಸದರೊಂದಿಗೆ ಮೂರನೇ ಸ್ಥಾನದಲ್ಲಿದೆ.

ಹೆಚ್ಚು ಮತ ಪಡೆದ ಸಂಸದರು

ಅತಿ ಹೆಚ್ಚು ಮತಗಳ ಹಂಚಿಕೆಯೊಂದಿಗೆ ಗೆದ್ದ ಬಿಜೆಪಿಯ ಅಗ್ರ ಏಳು ಸಂಸದರಲ್ಲಿ ಇಂದೋರ್ ಸಂಸದ ಶಂಕರ್ ಲಾಲ್ವಾನಿ ಅವರು ಒಟ್ಟು ಶೇ. 78.54ರಷ್ಟು ಮತಗಳನ್ನು ಪಡೆದರು. ಅನಂತರ ನವಸಾರಿ ಸಂಸದ ಸಿ.ಆರ್. ಪಾಟೀಲ್ ಅವರು ಶೇ. 77ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಬಿಜೆಪಿಯ ಏಳು ಸ್ಥಾನಗಳ ಪಟ್ಟಿಯಲ್ಲಿ ಗುಜರಾತ್‌ನಲ್ಲಿ ನಾಲ್ಕು, ಮಧ್ಯಪ್ರದೇಶದಲ್ಲಿ ಎರಡು ಮತ್ತು ತ್ರಿಪುರಾದಲ್ಲಿ ಒಂದು ಸ್ಥಾನ ಸೇರಿದೆ.

ವಿಜೇತರಿಗೆ ಪಡೆದ ಮತಗಳನ್ನು ಒಟ್ಟು ಚಲಾವಣೆಯಾದ ಮಾನ್ಯವಾದ ಮತಗಳಿಂದ ಭಾಗಿಸುವ ಮೂಲಕ ಶೇಕಡಾವಾರು ಮತ ಹಂಚಿಕೆಯನ್ನು ಲೆಕ್ಕಹಾಕಲಾಗುತ್ತದೆ. ಹಾಗಾಗಿ ಶೇ. 77ರಷ್ಟು ಮತ ಹಂಚಿಕೆ ಎಂದರೆ ಸರಾಸರಿ ಪ್ರತಿ 100 ಮಾನ್ಯ ಮತಗಳಲ್ಲಿ 77 ಪಾಟೀಲರಿಗೆ ಬಂದಿವೆ.

ವಿದಿಶಾ ಸಂಸದ ಶಿವರಾಜ್ ಸಿಂಗ್ ಚೌಹಾಣ್ ಒಟ್ಟು ಮತಗಳಲ್ಲಿ ಸುಮಾರು ಶೇ. 77ರಷ್ಟು ಗಳಿಸಿದರೆ, ಗಾಂಧಿನಗರ ಸಂಸದ ಅಮಿತ್ ಶಾ ಶೇ. 76.5ರಷ್ಟು ಪಡೆದರು. ಈ ಪಟ್ಟಿಯಲ್ಲಿ ತ್ರಿಪುರಾ ಪಶ್ಚಿಮ ಸಂಸದ ಬಿಪ್ಲಬ್ ಕುಮಾರ್ ದೇಬ್ ಶೇ. 72.85, ವಡೋದರಾ ಸಂಸದ ಡಾ ಹೇಮಾಂಗ್ ಜೋಶಿ ಶೇ. 72.04 ಮತ್ತು ಪಂಚಮಹಲ್ ಸಂಸದ ರಾಜಪಾಲ್ಸಿನ್ಹ್ ಮಹೇಂದ್ರಸಿನ್ಹ್ ಜಾದವ್ ಶೇ. 70.22ರಷ್ಟು ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: NEET UG: ನೀಟ್‌ ಅಕ್ರಮ: ಪರೀಕ್ಷೆಯನ್ನು ರದ್ದುಗೊಳಿಸುವುದು ಸಮಂಜಸವಲ್ಲ ಎಂದ ಕೇಂದ್ರ


ಕಡಿಮೆ ಮತ ಪಡೆದವರು

ಐದು ಸಂಸದರು ತಮ್ಮ ಸ್ಥಾನಗಳಿಗೆ ಒಟ್ಟು ಮತಗಳ ಶೇ. 30ಕ್ಕಿಂತ ಕಡಿಮೆ ಮತಗಳಿಸಿ ಸದನಕ್ಕೆ ಬಂದಿದ್ದಾರೆ. ಇದರಲ್ಲಿ ಮೂರು ಸ್ಥಾನಗಳನ್ನು ಪಂಜಾಬ್‌ನ ಕಾಂಗ್ರೆಸ್ ಶಾಸಕರು ಗಳಿಸಿದ್ದಾರೆ. ಫಿರೋಜ್‌ಪುರದ ಶೇರ್ ಸಿಂಗ್ ಘುಬಾಯಾ ಶೇ. 23.70, ಪಟಿಯಾಲಾದ ಡಾ ಧರ್ಮವೀರ ಗಾಂಧಿ ಶೇ. 26.54 ಮತ್ತು ಅಮೃತಸರದ ಗುರ್ಜಿತ್ ಸಿಂಗ್ ಔಜ್ಲಾ ಶೇ. 28.18ರಷ್ಟು ಮತಗಳನ್ನು ಗಳಿಸಿದ್ದಾರೆ.

ಪಟ್ಟಿಯಲ್ಲಿರುವ ಇತರ ಇಬ್ಬರು ಸಂಸದರು ಪಂಜಾಬ್‌ನವರಾಗಿದ್ದರು. ಆಮ್ ಆದ್ಮಿ ಪಕ್ಷದ ಆನಂದ್‌ಪುರ ಸಾಹಿಬ್‌ನ ಮಲ್ವಿಂದರ್ ಸಿಂಗ್ ಕಾಂಗ್ ಮತ್ತು ಸ್ವತಂತ್ರ ಫರೀದ್‌ಕೋಟ್ ಶಾಸಕ ಸರಬ್ಜೀತ್ ಸಿಂಗ್ ಖಾಲ್ಸಾ ಅವರು ಒಟ್ಟು ಮತಗಳ ಸುಮಾರು ಶೇ. 29ರಷ್ಟನ್ನು ಗಳಿಸಿದರು.

Exit mobile version