Site icon Vistara News

Lok Sabha Election 2024: ಡಿಎಂಕೆ ಅಭ್ಯರ್ಥಿಗಳ ಪಟ್ಟಿ, ಪ್ರಣಾಳಿಕೆ ಪ್ರಕಟ: ನೀಟ್‌ ನಿಷೇಧಿಸುವ ಭರವಸೆ; ಇನ್ನೇನಿದೆ?

stalin

stalin

ಚೆನ್ನೈ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ತಮಿಳುನಾಡಿನ ಆಡಳಿತರೂಢ ಡಿಎಂಕೆ (DMK) ಪಕ್ಷ ಬುಧವಾರ (ಮಾರ್ಚ್‌ 20) ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಜತೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (M.K.Stalin) ಚುನಾವಣಾ ಪ್ರಣಾಳಿಕೆ (Manifesto)ಯನ್ನು ಘೋಷಿಸಿದ್ದಾರೆ. ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಮತ್ತು ನೀಟ್ (National Eligibility cum Entrance Test) ಅನ್ನು ನಿಷೇಧಿಸುವ ಭರವಸೆ ನೀಡಿದೆ.

ಸ್ಟಾಲಿನ್‌ ಹೇಳಿದ್ದೇನು?

ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಎಂ.ಕೆ.ಸ್ಟಾಲಿನ್, “ಚುನಾವಣೆಗೆ ಮುಂಚಿತವಾಗಿ ಪ್ರಣಾಳಿಕೆಯನ್ನು ತಯಾರಿಸುವುದು ಮತ್ತು ಏನು ಹೇಳುತ್ತೇವೋ ಅದನ್ನು ಪಾಲಿಸುವುದು ನಮ್ಮ ರೀತಿ. ಇದು ನಮ್ಮ ನಾಯಕರು ನಮಗೆ ಕಲಿಸಿದ್ದು. ನಾವು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ವಿವಿಧ ಜನರ ಸಮಸ್ಯೆಗಳನ್ನು ಆಲಿಸಿದ್ದೇವೆ. ಇದು ಕೇವಲ ಡಿಎಂಕೆ ಪ್ರಣಾಳಿಕೆ ಮಾತ್ರವಲ್ಲ, ಜನರ ಪ್ರಣಾಳಿಕೆಯೂ ಆಗಿದೆ. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರು ಭಾರತವನ್ನು ನಾಶಪಡಿಸಿದರು. ಯಾವುದೇ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ. ನಾವು ʼಇಂಡಿಯಾʼ ಮೈತ್ರಿಕೂಟವನ್ನು ರಚಿಸಿದ್ದೇವೆ ಮತ್ತು ನಾವು 2024ರಲ್ಲಿ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ನಾವು ತಮಿಳುನಾಡಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದ್ದೇವೆ ಮತ್ತು ಪ್ರತಿ ಜಿಲ್ಲೆಯನ್ನೂ ಈ ಪ್ರಣಾಳಿಕೆಯಲ್ಲಿ ಪರಿಗಣಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಡಿಎಂಕೆ ಸಂಸದೆ ಕನಿಮೋಳಿ ಮಾತನಾಡಿ, “ಪ್ರಣಾಳಿಕೆ ಯಾವಾಗಲೂ ನಮಗೆ ಮುಖ್ಯ. ಈ ದ್ರಾವಿಡ ಮಾದರಿ ಸರ್ಕಾರವು ರಾಜ್ಯದ ಜನರಿಗೆ ಏನೆಲ್ಲ ಮಾಡಿದೆ ಎನ್ನುವುದು ನಿಮಗೆಲ್ಲ ತಿಳಿದಿದೆ. ಈ ಚುನಾವಣಾ ಪ್ರಣಾಳಿಕೆಯು ನಮ್ಮ ದ್ರಾವಿಡ ಮಾದರಿಯನ್ನು ಭಾರತದಾದ್ಯಂತ ಕೊಂಡೊಯ್ಯಲು ಸಹಾಯ ಮಾಡಲಿದೆ. ಈ ಬಾರಿ ಬಹುಮತ ಪಡೆಯುತ್ತೇವೆ ಎನ್ನುವ ಭರವಸೆ ಇದೆ” ಎಂದು ತಿಳಿಸಿದ್ದಾರೆ.

ಪ್ರಣಾಳಿಕೆ ಪ್ರಮುಖಾಂಶಗಳು

ಇದನ್ನೂ ಓದಿ: Congress Guarantee: ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳೋದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ: ಡಿಕೆಶಿ

ಯಾರಿಗೆಲ್ಲ ಟಿಕೆಟ್‌ ?

ಡಿಎಂಕೆ 21 ಲೋಕಸಭಾ ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಅದರ ಮಿತ್ರಪಕ್ಷಗಳು ತಮಿಳುನಾಡಿನ ಉಳಿದ 18 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version