ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಕರ್ನಾಟಕದ ಮೊದಲ ಹಂತದ ಮತದಾನ 14 ಕ್ಷೇತ್ರಗಳಲ್ಲಿ ಇಂದು ಮುಂಜಾನೆಯಿಂದ ಚುರುಕಾಗಿ ನಡೆದಿದ್ದು. ಸಂಜೆ 6 ಗಂಟೆಯವರೆಗೆ ಸರಾಸರಿ ಶೇ.69.23 ಮತದಾನ ನಡೆದಿದೆ.
Lok Sabha Election 2024 : ಬೋಟ್‌ನಲ್ಲಿ ಬಂದು ವೋಟ್ ಮಾಡಿದ 150ಕ್ಕೂ ಮತದಾರರು
ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಉಳಿಯ ದ್ವೀಪದ ಮತದಾರರು ಬೋಟ್‌ನಲ್ಲಿ ಬಂದು ವೋಟ್ ಮಾಡಿದ್ದಾರೆ. ಪಾವೂರು ಉಳಿಯ ದ್ವೀಪದ ಸುತ್ತ ನೇತ್ರಾವತಿ ನದಿ ಹರಿಯುತ್ತಿದ್ದು ಸಂಪರ್ಕ ಸೇತುವೆ ಇಲ್ಲದಿದ್ದರೂ ನೆಪಗಳನ್ನು ಹೇಳದೆ ತಮ್ಮ ಕರ್ತವ್ಯ ಮರೆಯದೆ ಹಕ್ಕು ಚಲಾಯಿಸಿದ್ದಾರೆ.
vistaranews.com/lok-sabha-election-2024/lok-sabha-election-2024-voters-who-came-in-a-boat-and-cast-their-votes/639215.html
Lok Sabha Election 2024: ದುಬೈ, ಫಿಲಿಫೈನ್ಸ್‌ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಬಿರುಸಿನ ಮತದಾನ ನಡೆಯುತ್ತಿದ್ದು, ದುಬೈನಿಂದ ಬಂದು ಕೋಲಾರದ ನಿವಾಸಿಯೊಬ್ಬರು ಮತದಾನ ಮಾಡಿದ್ದಾರೆ. ಕೋಲಾರ ನಿವಾಸಿ ಅಬ್ದುಲ್ ಸುಬಾನ್ ಎಂಬುವವರು ಬ್ಯುಸಿನೆಸ್‌ಗೆಂದು ದುಬೈಗೆ ತೆರಳಿದ್ದರು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾಯಿಸಲೆಂದು ದುಬೈನಿಂದ ಬಂದಿದ್ದರು. ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಮಾಡಿದರು.
vistaranews.com/lok-sabha-election-2024/lok-sabha-election-2024-voters-from-dubai-philippines-cast-their-votes/639187.html
1 ಗಂಟೆವರೆಗಿನ ರಾಜ್ಯವಾರು ಮತದಾನದ ವಿವರ
ಅಸ್ಸಾಂ – 46.31%
ಬಿಹಾರ – 33.80%
ಛತ್ತೀಸ್‌ಗಢ – 53.9%
ಜಮ್ಮುಕಾಶ್ಮೀರ – 42.88%
ಕರ್ನಾಟಕ- 38.23%
ಕೇರಳ – 39.26%
ಮಧ್ಯಪ್ರದೇಶ – 38.96%
ಮಹಾರಾಷ್ಟ್ರ – 31.77%
ಮಣಿಪುರ – 54.26%
ರಾಜಸ್ಥಾನ- 40.39%
ತ್ರಿಪುರ- 54.47%
ಉತ್ತರಪ್ರದೇಶ – 35.73%
ಪಶ್ಚಿಮ ಬಂಗಾಳ- 47.29%
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.31.51 ರಷ್ಟು ಮತದಾನ.
ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ.
ಬಿಟಿಎಂ ಲೇಔಟ್: ಶೇ.28.77
ಬಸವನಗುಡಿ: ಶೇ.34.27
ಬೊಮ್ಮನಹಳ್ಳಿ: ಶೇ.28.79
ಚಿಕ್ಕಪೇಟೆ: ಶೇ.32.20
ಗೋವಿಂದರಾಜನಗರ:ಶೇ.31.07
ಜಯನಗರ: ಶೇ.35.80
ಪದ್ಮನಾಭ ನಗರ: ಶೇ.35.82
ವಿಜಯನಗರ: ಶೇ.28.97
Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್ ಕಾಂಗ್ರೆಸ್
ಬೆಂಗಳೂರು: ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೆಂಬು ಎಂಬ ಕಾಂಗ್ರೆಸ್‌ನ ಜಾಹೀರಾತಿಗೆ ಬಿಜೆಪಿ ನಾಯಕರು ಆಕ್ರೋಶ (Lok Sabha Election 2024) ಹೊರಹಾಕಿದ್ದರು. ಈ ನಡುವೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನವೂ ಯೂತ್ ಕಾಂಗ್ರೆಸ್‌ನ ಕಾರ್ಯಕರ್ತರು ಚೆಂಬು ಹಾಗೂ ಗ್ಯಾಸ್ ಸಿಲಿಂಡರ್ ಪ್ರದರ್ಶನ ಮಾಡಿದರು.
vistaranews.com/lok-sabha-election-2024/lok-sabha-election-2024-youth-congress-displays-chembu-gas-cylinders-near-polling-booth/638992.html