Site icon Vistara News

Lok Sabha Election 2024 Live News: ರಾಜ್ಯದ 14 ಕ್ಷೇತ್ರಗಳಲ್ಲಿ ದಾಖಲೆಯ ಶೇ.69.23 ಮತದಾನ

lok sabha election 2024 sudha murthy voting

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಕರ್ನಾಟಕದ ಮೊದಲ ಹಂತದ ಮತದಾನ 14 ಕ್ಷೇತ್ರಗಳಲ್ಲಿ ಇಂದು ಮುಂಜಾನೆಯಿಂದ ಚುರುಕಾಗಿ ನಡೆದಿದ್ದು. ಸಂಜೆ 6 ಗಂಟೆಯವರೆಗೆ ಸರಾಸರಿ ಶೇ.69.23 ಮತದಾನ ನಡೆದಿದೆ.

Deepa S

Lok Sabha Election 2024: ಮತದಾರರು ಜಸ್ಟ್‌ ಮಿಸ್‌; ಮತಗಟ್ಟೆ ಸಮೀಪವೇ ನೆಲಕ್ಕುರುಳಿದ ಬೃಹತ್ ಮರ, ಕಾರು ಜಖಂ

ನೋಡ ನೋಡುತ್ತಲೇ ಬೃಹತ್ ಮರವೊಂದು ನೆಲಕ್ಕುರುಳಿದೆ. ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ 38ನೇ ಮತಗಟ್ಟೆ ಸಮೀಪದಲ್ಲೆ ಈ ಅವಘಡ ಸಂಭವಿಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನ ಮತದಾನ (Lok Sabha Election 2024) ನಡೆಯುತ್ತಿದೆ. ಇದೇ ವೇಳೆ ಮತಗಟ್ಟೆ ಸಮೀಪ ಬೃಹತ್ ಮರವೊಂದು ಬುಡ ಸಮೇತ ಕಿತ್ತು ಬಂದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.


vistaranews.com/lok-sabha-election-2024/lok-sabha-election-2024-huge-tree-falls-near-polling-booth-car-damaged/639041.html

Deepa S

Lok Sabha Election 2024: ಆಪರೇಷನ್‌ಗೂ ಮುನ್ನ ಆಂಬ್ಯುಲೆನ್ಸ್‌ನಲ್ಲಿ ಬಂದು ವೋಟ್‌ ಮಾಡಿದ ಉತ್ಸಾಹಿ ಮತದಾರ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಉತ್ಸಾಹಿ ಮತದಾರರೊಬ್ಬರು ಶಸ್ತ್ರಚಿಕಿತ್ಸೆಗೂ ಮುನ್ನ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಮುರಳಿಧರ್‌ ಎಂಬುವವರು ತಮ್ಮ ಹಕ್ಕು ಚಲಾಯಿಸಿ ಇತರರಿಗೂ ಮಾದರಿ ಆಗಿದೆ. 39 ವರ್ಷದ ಎಚ್‌.ಎನ್ ಮುರಳಿಧರ್ ಶುಕ್ರವಾರ ಮಧ್ಯಾಹ್ನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅನಾರೋಗ್ಯದ ನಡುವೆಯೂ ನೋವಿನಲ್ಲೂ ಮತಕೇಂದ್ರಕ್ಕೆ ಬಂದು ಮತವನ್ನು ಚಲಾಯಿಸಿದ್ದಾರೆ.


vistaranews.com/lok-sabha-election-2024/lok-sabha-election-2024-enthusiastic-voter-arrives-in-ambulance-to-cast-his-vote-before-operation/639075.html

Deepa S

Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

ಲೋಕಸಭಾ ಚುನಾವಣೆ (Lok sabha Election 2024) ಹಿನ್ನೆಲೆಯಲ್ಲಿ ಮತದಾನದ ಹಬ್ಬ ಬಿರುಸಿನ ನಡೆಯುತ್ತಿದೆ. ವಿಶೇಷ ಚೇನತರು, ವೃದ್ಧರೆನ್ನದೆ ಎಲ್ಲರೂ ಸಂಭ್ರಮದಿಂದ ಮತಗಳನ್ನು ಚಲಾವಣೆ ಮಾಡುತ್ತಿದ್ದಾರೆ. ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ನೂತನ ವರ- ವಧುಗಳೂ ಸಹ ವಿವಾಹಕ್ಕೂ ಮುಂಚೆ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಈ ಮೂಲಕ ಎಲ್ಲರೂ ಮತದಾನ ಮಾಡುವಂತೆ ಕರೆ ಕೊಟ್ಟಿದ್ದಾರೆ.


vistaranews.com/lok-sabha-election-2024/lok-sabha-election-2024-bride-and-groom-cast-their-votes-before-wedding/639128.html

Adarsha Anche

Lok Sabha Election 2024: ಕನಕಪುರದಲ್ಲಿ 505 ರೂ, ಮಲೆ ಮಹದೇಶ್ವರದ ಲಾಡು, ಗ್ಯಾರಂಟಿ ಕಾರ್ಡ್ ಹಂಚಿಕೆ; ಎಚ್‌ಡಿಕೆ ಗಂಭೀರ ಆರೋಪ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ಕಪ್ಪು ಚುಕ್ಕೆ ರೀತಿ ಪ್ರಕ್ರಿಯೆಗಳು ನಡೆಯುತ್ತಿವೆ. ನಿನ್ನೆ ಸಹ ಕನಕಪುರದಲ್ಲೂ ಧೈರ್ಯದಿಂದ ಎದರಿಸುವ ವಾತಾವರಣ ನಿರ್ಮಾಣವಾಗಿದೆ. ಆದರೆ, ಕನಕಪುರದ ಸೊರಕಾಯಿ ದೊಡ್ಡಿ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ‌. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್ ಸೇರಿದಂತೆ ಹಲವು ಭಾಗದಲ್ಲಿ ಬೆಳಗಿನ ಜಾವ ಐದು ಗಂಟೆಗೆ ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ಕೊಟ್ಟು 4 ರಿಂದ 5 ಸಾವಿರ ರೂಪಾಯಿಯ ಕೂಪನ್ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

https://vistaranews.com/lok-sabha-election-2024/lok-sabha-election-2024-dk-brothers-distribute-rs-505-in-bengaluru-rural-constituency-hd-kumaraswamy-allegations/639127.html

B Somashekhar

ಯಾವ ರಾಜ್ಯದಲ್ಲಿ ಎಷ್ಟು ಮತದಾನ?

– ಅಸ್ಸಾಂ: 27%

– ಕರ್ನಾಟಕ: 22%

– ಪಶ್ಚಿಮ ಬಂಗಾಳ: 31%

– ಮಧ್ಯಪ್ರದೇಶ: 28%

– ತ್ರಿಪುರ: 36%

(ಬೆಳಗ್ಗೆ 11 ಗಂಟೆ ವೇಳೆಗೆ)

Exit mobile version