ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಕರ್ನಾಟಕದ ಮೊದಲ ಹಂತದ ಮತದಾನ 14 ಕ್ಷೇತ್ರಗಳಲ್ಲಿ ಇಂದು ಮುಂಜಾನೆಯಿಂದ ಚುರುಕಾಗಿ ನಡೆದಿದ್ದು. ಸಂಜೆ 6 ಗಂಟೆಯವರೆಗೆ ಸರಾಸರಿ ಶೇ.69.23 ಮತದಾನ ನಡೆದಿದೆ.
ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ತಾಳಿ ಕಟ್ಟುವ ಮೊದಲು ಮತದಾನ ಮಾಡಿದ ವರ
ಮತದಾನ ಮಾಡಿದ ಸಂಸದ ತೇಜಸ್ವಿ ಸೂರ್ಯ.
ಕುಂದಾಪುರ ಕ್ಷೇತ್ರದ ದ್ವೀಪ ಪ್ರದೇಶವಾಗಿರುವ ಕೋಡಿಬೆಂಗ್ರೆಯ ಮತದಾರರು ಬಾರ್ಜ್ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಳಿವೆಯ ಈಚೆಗೆ ಇರುವ ಹಂಗಾರಕಟ್ಟೆಗೆ ಬಂದು ಮತ ಚಲಾಯಿಸಿದರು.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತದಾನ ಮಾಡಿದರು. “ಇದು ಜವಾಬ್ದಾರಿ ಕೂಡ” ಎಂಬ ಸಂದೇಶ ನೀಡಿದರು.
ಮೈಸೂರು ಯುವರಾಜ, ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಒಡೆಯರ್ ತಮ್ಮ ಪತ್ನಿ ತ್ರಿಶಿಕಾ ಹಾಗೂ ರಾಜಮಾತೆ ಪ್ರಮೋದಾದೇವಿ ಅವರ ಜೊತೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ದೇವಿಯ
ದರ್ಶನ ಪಡೆದು, ಬಳಿಕ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.