ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಕರ್ನಾಟಕದ ಮೊದಲ ಹಂತದ ಮತದಾನ 14 ಕ್ಷೇತ್ರಗಳಲ್ಲಿ ಇಂದು ಮುಂಜಾನೆಯಿಂದ ಚುರುಕಾಗಿ ನಡೆದಿದ್ದು. ಸಂಜೆ 6 ಗಂಟೆಯವರೆಗೆ ಸರಾಸರಿ ಶೇ.69.23 ಮತದಾನ ನಡೆದಿದೆ.
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಮತ ಹಾಕಿ ಸಂದೇಶ ನೀಡಿದರು.
ಮತಗಟ್ಟೆಯೊಳಗೆ ಮೊಬೈಲ್‌ಗೆ ನಿರ್ಬಂಧ ವಿಧಿಸಿದ್ದರೂ ಪುತ್ತೂರಿನ ಮತಗಟ್ಟೆಯೊಂದರಲ್ಲಿ ಕಾನೂನು ಉಲ್ಲಂಘಿಸಿ ಯುವಕನೊಬ್ಬ ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ವಾಟ್ಸ್ಯಾಪ್ ಗ್ರೂಪ್‌ಗೆ ಶೇರ್ ಮಾಡಿದ್ದಾನೆ. ರಂಜಿತ್ ಬಂಗೇರ ಎಂಬ ಯುವಕ ಕಾಂಗ್ರೆಸ್‌ಗೆ ವೋಟ್ ಹಾಕುವ ಫೋಟೊ ಶೇರ್ ಮಾಡಿದ್ದಾನೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಚಲಾಯಿಸಿದರು.
ಜಯನಗರದಲ್ಲಿರುವ BES ಕಾಲೇಜಿನ ಮತಗಟ್ಟೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಡಿವಿ ಸದಾನಂದ ಗೌಡ ಮತ ಹಾಕಿದರು.
ಚಾಮರಾಜನಗರದ ರಾಮಸಮುದ್ರದ ಸಾಂಸ್ಕೃತಿಕ ಮತಗಟ್ಟೆಯಲ್ಲಿ ಜನಪದ ಕಲಾವಿದರು ಮತದಾರರನ್ನು ಮತಗಟ್ಟೆಗೆ ಸ್ವಾಗತಿಸಿದರು. ತಂಬೂರಿ, ಕಂಸಾಳೆ ಹಿಡಿದು ಜಾನಪದ ಶೈಲಿಯಲ್ಲಿ ಸ್ವಾಗತ ಕೋರಿದರು.