Site icon Vistara News

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Lok Sabha Election 2024 Youth Congress protest

ಬೆಂಗಳೂರು: ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೆಂಬು ಎಂಬ ಕಾಂಗ್ರೆಸ್‌ನ ಜಾಹೀರಾತಿಗೆ ಬಿಜೆಪಿ ನಾಯಕರು ಆಕ್ರೋಶ (Lok Sabha Election 2024) ಹೊರಹಾಕಿದ್ದರು. ಈ ನಡುವೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನವೂ ಯೂತ್‌ ಕಾಂಗ್ರೆಸ್‌ನ ಕಾರ್ಯಕರ್ತರು ಚೆಂಬು ಹಾಗೂ ಗ್ಯಾಸ್‌ ಸಿಲಿಂಡರ್‌ ಪ್ರದರ್ಶನ ಮಾಡಿದರು.

ಬೆಂಗಳೂರಿನ ರಾಜಾಜಿನಗರದ ಮತಗಟ್ಟೆ ಬಳಿ ಚೆಂಬು ಮತ್ತು ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದರು. ರಾಜಾಜಿನಗರದ ಮಂಜುನಾಥ್ ನಗರದಲ್ಲಿರುವ ಗೌತಮ್ ಕಾಲೇಜಿನ ಮತಗಟ್ಟೆ ಬಳಿ ಬಂದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹಾಗೂ ಕಾರ್ಯಧ್ಯಕ್ಷ ಮಂಜುನಾಥ್‌ ತಂಡ ಚೆಂಬು ಪ್ರದರ್ಶನ ಮಾಡಿದರು. ಜತೆಗೆ ಯುವಕನೊಬ್ಬ ಗ್ರ್ಯಾಜುಯೇಟ್‌ ಡ್ರೆಸ್‌ನಲ್ಲಿ ಬಂದು ಕೈಯಲ್ಲಿ ಚೆಂಬು ಹಿಡಿದು ಬಿಜೆಪಿಗೆ ಪರೋಕ್ಷವಾಗಿ ತಿರುಗೇಟು ನೀಡಲಾಯಿತು.

ಇದನ್ನೂ ಓದಿ: Lok Sabha Election 2024: ಮೊದಲೆರಡು ಗಂಟೆಗಳ ಮತದಾನ ಚುರುಕು, ಶೇ.9.21 ಚಲಾವಣೆ, ಕೆಲವೆಡೆ ಚಕಮಕಿ

ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಗಣೇಶ್ ದಂಪತಿ: ಪ್ರಕಾಶ್‌ ರಾಜ್‌ ಮನವಿ ಏನು?

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಮಾಧ್ಯಮದ ಜತೆ ಮಾತನಾಡಿದರು.

ಗೋಲ್ಡನ್ ಸ್ಟಾರ್ ಗಣೇಶ್‌ ಮಾತನಾಡಿ ʻʻನನ್ನ ಹಕ್ಕು ಇದು. ಎಷ್ಟೇ ಹೊತ್ತಾದರೂ ನನ್ನ ಹಕ್ಕನ್ನು ಚಲಾಯಿಸಬೇಕು. ಯಾರೆಲ್ಲ ಮನೆಯಲ್ಲಿ ಇದ್ದೀರಾ ಬಂದು ವೋಟ್‌ ಮಾಡಿ. ಯಾರು ನಿಮಗೆ ಇಷ್ಟ, ಯಾರು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾರೆ, ಅವರಿಗೆ ವೋಟ್‌ ಹಾಕಿ. ಯಾವುದಾದರೂ ಕೆಲಸ ಆಗಿಲ್ಲ ಎಂದು ಕೇಳಬೇಕು ಎಂದರೆ ವೋಟ್ ಹಾಕಬೇಕು, ವೋಟ್ ಹಾಕಿ ಕೇಳಿದರೆ ಅದರ ಬೆಲೆ ಜಾಸ್ತಿ ಇರುತ್ತದೆ. ಹಿರಿಯ ನಾಗರಿಕರೇ ಕ್ಯೂ ನಿಂತು ವೋಟ್‌ ಹಾಕ್ತಾ ಇದ್ದರು. ಯುವಕರು ಮೊದಲು ಬಂದು ವೋಟ್‌ ಮಾಡಬೇಕುʼʼಎಂದರು.

ಇದನ್ನೂ ಓದಿ: Lok Sabha Election 2024: ಸ್ಯಾಂಡಲ್‌ವುಡ್‌ ತಾರೆಯರು ಎಲ್ಲೆಲ್ಲಿ ವೋಟ್‌ ಹಾಕ್ತಾರೆ?

ಈ ವೇಳೆ ಪ್ರಕಾಶ್‌ ರಾಜ್‌ ಮಾತನಾಡಿ ʻʻವೋಟ್‌ ಮಾಡುವುದು ಬಹಳ ಮುಖ್ಯ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೋಟ್‌ ಮಾಡಿ ಬದಲಾವಣೆ ತನ್ನಿ ಎಂದು ಮನವಿ ಮಾಡಿದರು.

ಈಗಾಗಲೇ ವೋಟ್‌ ಮಾಡಲು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ದಂಪತಿ ಬಂದಿದ್ದಾರೆ.

ಪತ್ನಿ ಸಮೇತ ಹಕ್ಕು ಚಲಾಯಿಸಲು ರವಿಶಂಕರ್ ಕೂಡ ಆಗಮಿಸಿದ್ದರು. ಹೊಸಕೆರೆ ಹಳ್ಳಿ ಮತದಾನ‌ ಕೇಂದ್ರಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಮತದಾನ ಮಾಡಲು ತಡವಾಗಿ ಬರುತ್ತಿದ್ದಾರೆ. ಪ್ಲಾನ್ ಪ್ರಕಾರ ಇಂದು ಬೆಳಗ್ಗೆ 8:30ಕ್ಕೆ ಯಶ್‌ ಮತಚಲಾಯಿಸಬೇಕಿತ್ತು. ಕಾರಣಾಂತರಗಳಿಂದ 11 ಗಂಟೆ ನಂತರ ವೋಟ್ ಮಾಡಲು ಹೊಸಕೆರೆಹಳ್ಳಿಗೆ ಆಗಮಿಸಲಿದ್ದಾರೆ. ಈಗಾಗಲೇ ಹೊಸಕೆರೆ ಹಳ್ಳಿ ಮತಗಟ್ಟೆಯಲ್ಲಿ ಖಾಕಿ ಕಣ್ಗಾವಲು ಇಟ್ಟಿದೆ. ಯಾವುದೇ ರೀತಿಯ ಗೊಂದಲ, ಜನಜಂಗುಳಿ ಆಗದಂತೆ ಪೊಲೀಸ್ ಕಟ್ಟೆಚ್ಚರ ವಹಿಸಿದ್ದಾರೆ.

ಹೊಸಕೆರೆಹಳ್ಳಿಯಲ್ಲಿ ನಟ ರವಿಶಂಕರ್ ದಂಪತಿ ವೋಟ್‌ ,ಮಾಡಿದರು. ರವಿಶಂಕರ್ ಮಾತನಾಡಿ ʻಇದು ಖುಷಿಗಿಂತ ಹೆಚ್ಚಾಗಿ ಇದು ನಮ್ಮ ಕರ್ತವ್ಯ. 140 ಕೋಟಿ ಜನರನ್ನ ಕಾಯೋ ನಾಯಕನ ಆಯ್ಕೆ ಮಾಡೋ ದಿನ. ಯಾರಿಗೆ ವೋಟ್ ಮಾಡಬೇಕು, ಯಾಕೆ ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡಿಕೊಂಡು ಬನ್ನಿ. ಮತ ಗಟ್ಟಗೆ ಬಂದು ಕನ್ ಪ್ಯೂಸ್ ಆಗಬೇಡಿʼʼಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version