Site icon Vistara News

Rajat Sharma: ಕಾಂಗ್ರೆಸ್ ನಾಯಕರ ವಿರುದ್ಧ ಖ್ಯಾತ ಪತ್ರಕರ್ತ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇಕೆ?

Lok Sabha Election Result

ಲೋಕಸಭೆ ಚುನಾವಣೆ ಫಲಿತಾಂಶದ (Lok Sabha Election Result) ದಿನ ತಮ್ಮ ಕಾರ್ಯಕ್ರಮದ ವೇಳೆ “ನಿಂದನೀಯ ಭಾಷೆ” (abusive language) ಬಳಸಿದ್ದಾರೆಂದು ಆರೋಪಿಸಿದ್ದ ಕಾಂಗ್ರೆಸ್ (congress) ನಾಯಕರಾದ ರಾಗಿಣಿ ನಾಯಕ್ (Ragini Nayak), ಜೈರಾಮ್ ರಮೇಶ್ (Jairam Ramesh) ಮತ್ತು ಪವನ್ ಖೇರಾ (Pawan Khera) ಅವರ ವಿರುದ್ಧ ಹಿರಿಯ ಪತ್ರಕರ್ತ (journalist) ರಜತ್ ಶರ್ಮಾ (Rajat Sharma) ದೆಹಲಿ ಹೈಕೋರ್ಟ್‌ನಲ್ಲಿ (delhi high court) ಮಾನನಷ್ಟ ಮೊಕದ್ದಮೆ (defamation suit) ದಾಖಲಿಸಿದ್ದಾರೆ.

ರಜತ್ ಶರ್ಮಾ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಟ್ವೀಟ್‌ಗಳು ಮತ್ತು ವಿಡಿಯೋಗಳನ್ನು ತೆಗೆದುಹಾಕಬೇಕು, ರಾಜಕೀಯ ನಾಯಕರು ಅವರ ವಿರುದ್ಧ ಆರೋಪ ಮಾಡುವುದನ್ನು ತಡೆಯುವಂತೆ, ಮಾನನಷ್ಟ ಪರಿಹಾರ ನೀಡುವಂತೆ ಶರ್ಮಾ ಅವರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ.

ಈ ಕುರಿತು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ರಜತ್ ಶರ್ಮಾ ಪರ ವಕೀಲರ ವಾದಗಳನ್ನು ಆಲಿಸಿದ ಅನಂತರ ಮಧ್ಯಂತರ ವಿಚಾರಣೆಗಾಗಿ ಆದೇಶವನ್ನು ಕಾಯ್ದಿರಿಸಿದರು. ಎರಡು ಪಕ್ಷದವರ ವಾದವನ್ನು ಆಲಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಇಂಡಿಪೆಂಡೆಂಟ್ ನ್ಯೂಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ (ಇಂಡಿಯಾ ಟಿವಿ) ಅಧ್ಯಕ್ಷ ಮತ್ತು ಸಂಪಾದಕ-ಮುಖ್ಯಸ್ಥ ರಜತ್ ಶರ್ಮಾ ಕೂಡ ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದರು.

2024ರ ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನದಂದು ಕಾರ್ಯಕ್ರಮದ ಚರ್ಚೆಯ ಸಂದರ್ಭದಲ್ಲಿ ರಾಷ್ಟ್ರೀಯ ದೂರದರ್ಶನದಲ್ಲಿ ರಜತ್ ಶರ್ಮಾ ತಮ್ಮನ್ನು ನಿಂದಿಸಿದ್ದಾರೆ ಎಂದು ರಾಗಿಣಿ ನಾಯಕ್ ಆರೋಪಿಸಿದ ಅನಂತರ ಈ ವಿವಾದ ಹುಟ್ಟಿಕೊಂಡಿತು.

ಚುನಾವಣಾ ಫಲಿತಾಂಶ ಬಂದ ಜೂನ್ 4ರ ಸಂಜೆ ವಾಹಿನಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಕಾಂಗ್ರೆಸ್ ನಾಯಕರು ಜೂನ್ 10 ಮತ್ತು 11ರಂದು ಮಾನಹಾನಿಕರ ಟ್ವೀಟ್ ಮಾಡಲು ಆರಂಭಿಸಿದ್ದಾರೆ ಎಂದು ಶರ್ಮಾ ಪರ ವಕೀಲರು ಹೇಳಿದ್ದಾರೆ.

ಶರ್ಮಾ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್, ಶೋನ ಕ್ಲಿಪ್ ಅನ್ನು ಪ್ರಸಾರ ಮಾಡಲಾಗುತ್ತಿದೆ. ಅದರಲ್ಲಿ ನಿಂದನೆಯನ್ನು ಸೇರಿಸಲಾಗಿದೆ. ಆದರೆ ಮೂಲ ತುಣುಕಿನಲ್ಲಿ ಅಂತಹ ಯಾವುದೇ ಆಕ್ಷೇಪಾರ್ಹ ವಿಷಯವನ್ನು ಹೊಂದಿಲ್ಲ ಎಂದು ಪ್ರತಿಪಾದಿಸಿದರು.

ನ್ಯಾಯಾಲಯದ ಪರಿಶೀಲನೆಗಾಗಿ ಅವರು ವೀಡಿಯೊ ಕ್ಲಿಪ್ ಅನ್ನು ಸಹ ಪ್ಲೇ ಮಾಡಿದರು.

ಯಾವುದೇ ನಿಂದನೆ ಇಲ್ಲ. ಲೈವ್ ಶೋ ನಡೆದ ಆರು ದಿನಗಳ ಅನಂತರ ಅವರು ರಾಗಿಣಿ ನಾಯಕ್ ವಿರುದ್ಧ ಶರ್ಮಾ ನಿಂದನೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ. ಅವರು ಜೂನ್ 11ರಂದು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು.


ಕಾರ್ಯಕ್ರಮವು ನೇರ ಪ್ರಸಾರವಾಗಿದೆ. ಅವರು ಜೂನ್ 10 ರ ರಾತ್ರಿಯವರೆಗೆ ಆರು ದಿನಗಳವರೆಗೆ ಯಾವುದೇ ಅಸಮಾಧಾನವನ್ನು ಹೊಂದಿರಲಿಲ್ಲ. ಆ ಬಳಿಕ ಇದ್ದಕ್ಕಿದ್ದಂತೆ ಆರೋಪಿಸಿದ್ದೇಕೆ ಎಂದು ಸಿಂಗ್ ವಾದಿಸಿದರು.

ಇದನ್ನೂ ಓದಿ: Suresh Gopi: ಇಂದಿರಾ ಗಾಂಧಿ ಭಾರತದ ಮಾತೆ ಎಂದ ಬಿಜೆಪಿ ಸಂಸದ ಸುರೇಶ್‌ ಗೋಪಿ

ಕಳೆದ ನಾಲ್ಕು ದಶಕಗಳಲ್ಲಿ ಗಳಿಸಿದ ಪತ್ರಕರ್ತನ ಪ್ರತಿಷ್ಠೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಹುಸಿ ಆರೋಪ ನಷ್ಟವನ್ನುಂಟು ಮಾಡುತ್ತಿದ್ದು, ತಕ್ಷಣವೇ ಟ್ವೀಟ್‌ಗಳನ್ನು ತೆಗೆದುಹಾಕಬೇಕೆಂದು ರಜತ್ ಶರ್ಮಾ ಪರ ವಕೀಲರು ಮನವಿ ಮಾಡಿದರು.

ಇದು ಲೈವ್ ಶೋ ಆಗಿತ್ತು ಮತ್ತು ಲಕ್ಷಾಂತರ ಜನರು ಇದನ್ನು ವೀಕ್ಷಿಸುತ್ತಾರೆ. ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಇದ್ದರೆ ನಿರಂತರ ನಿಂದನೆ ಎದುರಿಸಬೇಕಾಗುತ್ತದೆ. ಹೀಗಾಗಿ ತಕ್ಷಣವೇ ಅದನ್ನು ತೆಗೆದುಹಾಕಬೇಕು. ನಾನು ಯಾರನ್ನೂ ಬೈಯುವುದಕ್ಕೆ ಅಥವಾ ನಿಂದಿಸುವುದಕ್ಕೆ ಹೆಸರಾಗಿಲ್ಲ. ನಾನು ನನ್ನ ಸುಸಂಸ್ಕೃತ ನಡವಳಿಕೆಗೆ ಹೆಸರುವಾಸಿಯಾಗಿದ್ದೇನೆ ಎಂದು ರಜತ್ ಶರ್ಮಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

Exit mobile version