ಬೆಂಗಳೂರು: ಜೂನ್ 4ರ ಮಂಗಳವಾರದಂದು ಲೋಕಸಭಾ ಚುನಾವಣೆ 2024ರ (Lok sabha election 2024) ಮತ ಎಣಿಕೆ ನಡೆಯಲಿದೆ. ಹೀಗಾಗಿ ಮತ ಎಣಿಕೆ ನಡೆಯುವ ಕೇಂದ್ರಗಳ ಸುತ್ತಮುತ್ತ ನಿಷೇಧ (Traffic Advisory) ಹೇರಲಾಗಿದೆ. ಜೂ.4 ಬೆಳಗ್ಗೆ 6 ಗಂಟೆಯಿಂದ ಮತ ಎಣಿಕೆ ಮುಗಿಯುವವರೆಗೂ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಯಾವುದೇ ರೀತಿಯ ವಾಹನಗಳ ಪಾರ್ಕಿಂಗ್ ಮಾಡುವಂತಿಲ್ಲ. ಬೆಂಗಳೂರಿನ ಸೇಂಟ್ ಜೋಸೆಪ್ ಕಾಲೇಜು, ಎಸ್ಎಸ್ಎಂಆರ್‌ವಿ ಕಾಲೇಜು ಹಾಗೂ ಮೌಂಟ್ ಕಾರ್ಮೆಲ್ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಸಂಚಾರವನ್ನು (Traffic Advisory) ನಿರ್ಬಂಧಿಸಲಾಗಿದೆ.
ಸೇಂಟ್ ಜೋಸೆಫ್ ಕಾಲೇಜು ಸುತ್ತಮುತ್ತ ಪಾರ್ಕಿಂಗ್ ನಿಷೇಧ
ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ಯಾವುದೇ ರೀತಿಯ ವಾಹನಗಳ ಪಾರ್ಕಿಂಗ್ ಮಾಡುವಂತಿಲ್ಲ. ಸಾರ್ವಜನಿಕರು ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡದೇ ಬದಲೀ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಲು ಕೋರಲಾಗಿದೆ. ವಾಹನಗಳ ಪಾರ್ಕಿಂಗ್ ಮಾಡಲು ನಿಷೇಧಿಸಿರುವ ರಸ್ತೆಗಳು ಹೀಗಿವೆ.
-ವಿಠಲ್ ಮಲ್ಯ ರಸ್ತೆ :- ಸಿದ್ದಲಿಂಗಯ್ಯ ವೃತ್ತದಿಂದ ರಿಚ್ಚಂಡ್ ಜಂಕ್ಷನ್‌ವರೆಗೆ
-ಆರ್.ಆರ್.ಎಂ.ಆರ್ ರಸ್ತೆ- ರಿಚ್ಚಂಡ್ ಸರ್ಕಲ್‌ನಿಂದ ಹಡ್ರನ್ ಜಂಕ್ಷನ್‌ವರೆಗೆ
-ಎನ್ ಆರ್ ರಸ್ತೆ: ಹಡ್ನನ್ ಸರ್ಕಲ್‌ನಿಂದ ಟೌನ್ ಹಾಲ್ ಜಂಕ್ಷನ್‌ವರೆಗೆ
-ಕೆ ಬಿ ರಸ್ತೆ: ಎಚ್‌ಎಲ್‌ಡಿ ಜಂಕ್ಷನ್‌ನಿಂದ ಕ್ವೀನ್ಸ್ ಜಂಕ್ಷನ್‌ವರೆಗೆ
-ಕೆ ಜಿ ರಸ್ತೆ ಪೊಲೀಸ್ ಕಾರ್ನರ್ ಜಂಕ್ಷನ್‌ನಿಂದ ಮೈಸೂರು ಬ್ಯಾಂಕ್ ಜಂಕ್ಷನ್‌ವರೆಗೆ
-ನೃಪತುಂಗ ರಸ್ತೆ : ಕೆ ಆರ್ ಜಂಕ್ಷನ್‌ನಿಂದ ಪೊಲೀಸ್ ಕಾರ್ನರ್‌ವರೆಗೆ
-ಕ್ವೀನ್ಸ್ ರಸ್ತೆ: ಬಾಳೇಕುಂದ್ರಿ ಸರ್ಕಲ್‌ನಿಂದ ಸಿ.ಟಿ.ಓ ಸರ್ಕಲ್‌ವರೆಗೆ
-ಸೆಂಟ್ರಲ್ ಸ್ಟ್ರೀಟ್ ರಸ್ತೆ- ಬಿಆರ್‌ವಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೆ
-ಎಂ.ಜಿ ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಜಂಕ್ಷನ್‌ವರೆಗೆ
ಸವಾರರು ವಾಹನಗಳನ್ನು ಪಾರ್ಕಿಂಗ್ ಮಾಡಬೇಕಾದರೆ ಸೇಂಟ್ ಜೋಸೆಫ್ ಕಾಲೇಜು ಮೈದಾನ, ಕಂಠೀರವ ಸ್ಟೇಡಿಯಂ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬಹುದು.
ಜಯನಗರ ಟಿ ಬ್ಲ್ಯಾಕ್ ಸಂಚಾರ ನಿರ್ಬಂಧ
ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಂ.ಆರ್.ವಿ. ಕಾಲೇಜಿನಲ್ಲಿ ಲೋಕಸಭೆ ಚುನಾವಣೆ-2024ರ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಯ ಸ್ಥಳದಲ್ಲಿ ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸುವ ಸಲುವಾಗಿ ಸಂಚಾರ ಮಾರ್ಪಾಡು ಮಾಡಲಾಗಿದೆ.
ಜೂನ್ 4 ರಂದು ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಬೆಳಗ್ಗೆ 06 ಗಂಟೆಯಿಂದ ಮತ ಎಣಿಕೆ ಮುಗಿಯುವವರೆಗೆ ಜಯನಗರ ಟಿ ಬ್ಲಾಕ್ ನಿರ್ಬಂಧಿಸಲಾಗಿದೆ. 18ನೇ ಮುಖ್ಯ ರಸ್ತೆ ಮತ್ತು 28ನೇ ಮುಖ್ಯ ರಸ್ತೆಯ ಮಧ್ಯದಲ್ಲಿ ಬರುವ 36ನೇ ಕ್ರಾಸ್ ಹಾಗೂ 32ನೇ ಇ ಕ್ರಾಸ್ ರಸ್ತೆ ಮತ್ತು 39ನೇ ಕ್ರಾಸ್ ರಸ್ತೆ ಜಂಕ್ಷನ್ ನಡುವೆ ಬರುವ 26ನೇ ಮುಖ್ಯ ರಸ್ತೆಯನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು ಹೀಗಿವೆ
-ಈಸ್ಟ್ ಎಂಡ್ ಮುಖ್ಯ ರಸ್ತೆ, 39ನೇ ಕ್ರಾಸ್ ರಸ್ತೆ, 18ನೇ ಮುಖ್ಯ ರಸ್ತೆ, 32ನೇ ಇ ಕ್ರಾಸ್ ರಸ್ತೆಗಳನ್ನು ಬಳಸಬಹುದಾಗಿರುತ್ತದೆ.
ಮೌಂಟ್ ಕಾರ್ಮೆಲ್ ಕಾಲೇಜು ಸುತ್ತಮುತ್ತ ಸಂಚಾರ ನಿರ್ಬಂಧ
ಬೆಂಗಳೂರಿನ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಕೇಂದ್ರದಲ್ಲಿ ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅರಮನೆ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತಿದೆ.
ಪ್ಯಾಲೇಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್‌ನಿಂದ ಮಿನುಗುತಾರೆ ಕಲ್ಪನಾ ಜಂಕ್ಷನ್ ಹಾಗೂ ಮಿನುಗುತಾರೆ ಕಲ್ಪನಾ ಜಂಕ್ಷನ್‌ನಿಂದ ಪ್ಯಾಲೇಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್‌ವರೆಗೆ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು
-ಪ್ಯಾಲೇಸ್ ರಸ್ತೆಯಿಂದ ಎಂಸಿಸಿ ಕಾಲೇಜು, ಕಲ್ಪನಾ ಜಂಕ್ಷನ್ ಮತ್ತು ಚಂದ್ರಿಕಾ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು- ಪ್ಯಾಲೇಸ್ ರಸ್ತೆ- ಎಡ ತಿರುವು ಪಡೆದು ಚಕ್ರವರ್ತಿ ಲೇಔಟ್- ಮುಖ್ಯ ಪ್ಯಾಲೇಸ್- ವಸಂತನಗರ ಅಂಡರ್ ಬ್ರಿಡ್ಜ್ ಎಡ ತಿರುವು ಪಡೆದು ಎಂ.ವಿ.ಜಯರಾಮ ರಸ್ತೆ, ಹಳೆ ಉದಯ ಟಿವಿ ಜಂಕ್ಷನ್-ಎಡ ತಿರುವು-ಕಂಟೋನ್ಸೆಂಟ್ ರಸ್ತೆಯ ಮೂಲಕ ಸಂಚರಿಸಬಹುದಾಗಿದೆ.
ಬಸವೇಶ್ವರ ಜಂಕ್ಷನ್ ಕಡೆಯಿಂದ ಉದಯ ಟಿವಿ ಜಂಕ್ಷನ್ ಮತ್ತು ಜಯಮಹಲ್ ರಸ್ತೆಯ ಕಡೆಗೆ ಸಂಚರಿಸುವವರು ಬಸವೇಶ್ವರ ಜಂಕ್ಷನ್ – ಓಲ್ಡ್ ಹೈಗೌಂಡ್ ಜಂಕ್ಷನ್, ಕಲ್ಪನಾ ಜಂಕ್ಷನ್ ಬಲ ತಿರುವು-ಚಂದ್ರಿಕಾ ಜಂಕ್ಷನ್-ಎಡ ತಿರುವು ಅಯ್ಯಪ್ಪಸ್ವಾಮಿ ಟೆಂಪಲ್ ಉದಯ ಟಿವಿ ಜಂಕ್ಷನ್ ಕಡೆಯಿಂದ ಎಡ ತಿರುವು-ಎಂ ವಿ ಜಯರಾಂ ರಸ್ತೆ, ಅಥವಾ ನೇರ -ಜಯಮಹಲ್ ರಸ್ತೆ ಅಥವಾ ಬಲ ತಿರುವು ರೈಲ್ವೆ ಸ್ಪಷನ್ ರಸ್ತೆ-ಕಂಟೋನ್ಮಂಟ್ ಮೂಲಕ ಫ್ರೀಜರ್ ಟೌನ್ ಅಥವಾ ಕ್ವೀನ್ಸ್ ರಸ್ತೆಯ ಮೂಲಕ ಸಂಚರಿಸಬಹುದಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ