Site icon Vistara News

Voter Slip: ಮತದಾನಕ್ಕೆ ಇನ್ನೊಂದೇ ದಿನ ಬಾಕಿ; ವೋಟರ್ ಸ್ಲಿಪ್ ಸಿಕ್ಕಿಲ್ಲವೇ? ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ

Lok Sabha Election 2024

ಬೆಂಗಳೂರು: ಲೋಕಸಭಾ ಚುನಾವಣೆ 2024ರ (Lok Sabha Election 2024) ಪ್ರಯುಕ್ತ ರಾಜ್ಯದಲ್ಲಿ (karnataka) ಇದೇ ತಿಂಗಳ 26ರಂದು ಮೊದಲ ಹಂತದ ಮತದಾನ (voting) ನಡೆಯಲಿದೆ. ಭಾರತೀಯ ಚುನಾವಣಾ ಆಯೋಗ (Election Commission of India) ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ನೋಂದಾಯಿತ ಮತದಾರರಿಗೆ ಮತದಾರರ ಮಾಹಿತಿ ಸ್ಲಿಪ್ (Voter Slip) ಅನ್ನು ಮುದ್ರಿಸಿ ಕಳುಹಿಸುತ್ತಿದೆ.

ಒಂದು ವೇಳೆ ಈ ಸ್ಲಿಪ್ ಸಿಕ್ಕಿಲ್ಲದಿದ್ದರೆ ಚಿಂತೆ ಬೇಡ. ನೀವೇ ಇದನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಅರಿವಿಲ್ಲದವರಿಗೆ ಮತದಾರರ ಚೀಟಿ ಅಥವಾ ವಿಐಎಸ್ ಎನ್ನುವುದು ಇಐಸಿಯಿಂದ ಚುನಾವಣೆಗೆ ಮುಂಚಿತವಾಗಿ ಅಗತ್ಯ ವಿವರಗಳ ಬಗ್ಗೆ ಮತದಾರರಿಗೆ ತಿಳಿಸಲು ನೀಡಿದ ದಾಖಲೆಯಾಗಿದೆ.

ವಿಐಎಸ್ ಎಂದರೆ ಏನು?

ಸ್ಲಿಪ್ ಹೆಸರು, ವಯಸ್ಸು, ಲಿಂಗ, ಅಸೆಂಬ್ಲಿ ಕ್ಷೇತ್ರ ಮತ್ತು ಪ್ರಮುಖವಾಗಿ ಮತಗಟ್ಟೆ ಸ್ಥಳ, ಕೊಠಡಿ ಸಂಖ್ಯೆ, ಮತದಾನದ ದಿನಾಂಕ ಮತ್ತು ಹೆಚ್ಚಿನ ವಿವರಗಳನ್ನು ಇದು ಒಳಗೊಂಡಿರುತ್ತದೆ. ಇದರೊಂದಿಗೆ ಮತದಾರರ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಕ್ಯೂಆರ್ ಕೋಡ್ ಅನ್ನು ಸಹ ಇದು ಒಳಗೊಂಡಿದೆ.

ಇದನ್ನೂ ಓದಿ: Lok Sabha Election 2024: ಬೆಂಗಳೂರು ಗ್ರಾಮಾಂತರಕ್ಕೆ ಡಬಲ್ ಸೆಕ್ಯೂರಿಟಿ; 28 ಲೋಕಸಭಾ ಕ್ಷೇತ್ರದ ಮತದಾರರು ಎಷ್ಟು?


ಈವರೆಗೆ ಮತದಾರರ ಮಾಹಿತಿ ಸ್ಲಿಪ್ ಸಿಗದೇ ಇದ್ದರೆ ಮತದಾನದ ದಿನಾಂಕದ ಮೊದಲು ಅದನ್ನು ಖಂಡಿತಾ ಸ್ವೀಕರಿಸುತ್ತೀರಿ. ಇಲ್ಲವಾದರೆ ಚುನಾವಣಾ ಆಯೋಗದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮತ್ತು ಅಧಿಕೃತ ವೆಬ್‌ಸೈಟ್ ನಿಂದ ತಕ್ಷಣವೇ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಫೋನ್‌ನಲ್ಲಿ ಪಡೆಯುವುದು ಹೇಗೆ?

ಫೋನ್‌ನಲ್ಲಿ ಮತದಾರರ ಮಾಹಿತಿ ಸ್ಲಿಪ್ ಅಥವಾ ವಿಐಎಸ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂಬುದರ ಕುರಿತು ಹಂತ-ಹಂತದ ಮಾಹಿತಿ ಇಲ್ಲಿದೆ.

– ಮೊಬೈಲ್ ಅಪ್ಲಿಕೇಶನ್ ಬಳಸಿ ಮತದಾರರ ಮಾಹಿತಿ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ತೆರೆದು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

– ಡೌನ್‌ಲೋಡ್ “E-EPIC” ಆಯ್ಕೆಯನ್ನು ಟ್ಯಾಪ್ ಮಾಡಿ. ನೋಂದಾಯಿತ ಫೋನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ. ಈಗಾಗಲೇ ನೋಂದಾಯಿಸದಿದ್ದರೆ ಮತದಾರ ಐಡಿ ಕಾರ್ಡ್‌ನಲ್ಲಿ ಇರುವ ಎಪಿಕ್ ಸಂಖ್ಯೆಯನ್ನು ನಮೂದಿಸಿ. ಪರ್ಯಾಯವಾಗಿ ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯನ್ನು ಬಳಸಿಕೊಂಡು ಮತದಾರರ ಮಾಹಿತಿ ಸ್ಲಿಪ್ ಅನ್ನು ನೋಡಬಹುದು.

– ಇದರ ಅನಂತರ ನಿಮ್ಮ ವೋಟರ್ ಸ್ಲಿಪ್ ವಿವರಗಳನ್ನು ಕಾಣಬಹುದು. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ವಿಐಸಿ ಡಾಕ್ಯುಮೆಂಟ್ ತೆರೆಯಲು ಒಟಿಪಿಯನ್ನು ಮತ್ತೆ ನಮೂದಿಸಿ. ಬಳಿಕ ಇದನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್‌ಸೈಟ್ ನಲ್ಲಿ ಹೇಗೆ?

https://voters.eci.gov.in/ ತೆರೆದು ಫೋನ್ ನಂಬರ್, ಪಾಸ್‌ವರ್ಡ್ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ. ವೆಬ್‌ಸೈಟ್‌ಗೆ ಹೊಸಬರಾಗಿದ್ದರೆ ಮೊದಲು ನೊಂದಾಯಿಸಿಕೊಳ್ಳಿ.

ಡೌನ್‌ಲೋಡ್ E-EPIC ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಬಳಿಕ ಮತದಾರರ ಗುರುತಿನ ಚೀಟಿಯಲ್ಲಿರುವ EPIC ಸಂಖ್ಯೆಯನ್ನು ನಮೂದಿಸಿ.

ಒಮ್ಮೆ ಇದನ್ನು ಮಾಡಿದ ಅನಂತರ, ವಿಐಸಿ ಜೊತೆಗೆ E-EPIC ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಒಮ್ಮೆ E-EPIC ಅನ್ನು ಹೊಂದಿದ್ದರೆ ಸಂಪೂರ್ಣ ಪುಟವನ್ನು ಅಥವಾ ವಿಐಸಿ ಪುಟವನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಮತ ಚಲಾಯಿಸಲು ಇದನ್ನು ನಿಮ್ಮೊಂದಿಗೆ ಮತಗಟ್ಟೆಗೆ ಕೊಂಡೊಯ್ಯಬಹುದಾಗಿದೆ.

Exit mobile version