Site icon Vistara News

ITR Filing : ಐಟಿಆರ್‌ ಫೈಲಿಂಗ್‌ ಮಾಡಲು ಜುಲೈ 31ರ ಗಡುವು ತಪ್ಪಿದರೆ ದಂಡ ಎಷ್ಟು, ಏನು ಮಾಡಬಹುದು?

ITR

ಕಳೆದ 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ (ITR Filing) 2023ರ ಜುಲೈ 31 ಕೊನೆಯ ದಿನಾಂಕವಾಗಿದೆ. ಒಂದು ವೇಳೆ ಜುಲೈ 31ರ ಗಡುವು ತಪ್ಪಿದರೆ ಅದರ ಪರಿಣಾಮವೇನು? ಮುಂದೇನು ಮಾಡಬಹುದು? ಈ ಕುರಿತ ಎಲ್ಲ ವಿವರಗಳು ಇಲ್ಲಿವೆ. ಐಟಿಆರ್‌ ಫೈಲಿಂಗ್‌ ಮಾಡಲು ತಪ್ಪಿದರೆ 5,000 ರೂ. ಅಥವಾ 1,000 ರೂ. ವಿಳಂಬ ಶುಲ್ಕ ಅನ್ವಯವಾಗುತ್ತದೆ. ವಿಳಂಬಿಸಿದರೆ ತೆರಿಗೆ ಮೊತ್ತಕ್ಕೆ ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ.

ಆದಾಯ ತೆರಿಗೆ ವಿವರ ಸಲ್ಲಿಕೆಯ ಆನ್‌ಲೈನ್‌ ಪ್ರಕ್ರಿಯೆ (Online process) ಈಗ ಸುಲಭ ಪ್ರಕ್ರಿಯೆಯಾಗಿದೆ. ಮನೆಯಲ್ಲೇ ಕುಳಿತುಕೊಂಡು ಕಂಫರ್ಟ್‌ ಆಗಿ ಐಟಿಆರ್‌ ಫೈಲಿಂಗ್‌ ಅನ್ನು ಈಗ ಮಾಡಬಹುದು. ಸಮಯವನ್ನು ಉಳಿತಾಯ ಮಾಡಬಹುದು. ಮಾನ್ಯುವಲ್‌ ಫೈಲಿಂಗ್‌ನಲ್ಲಿರುವ ಸಮಸ್ಯೆಗಳನ್ನು ದೂರ ಮಾಡಬಹುದು.

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಪ್ರಿ-ಫಿಲ್ಡ್‌ ಐಟಿಆರ್‌ ಫಾರ್ಮ್‌ ಅನ್ನು (pre-filled ITR form) ಸಿದ್ಧಪಡಿಸಿದೆ. ಹೀಗಿದ್ದರೂ, 2022-23 ಆರ್ಥಿಕ ವರ್ಷದ ಐಟಿಆರ್‌ ಫೈಲಿಂಗ್‌ ಮಾಡಲು 2023ರ ಜುಲೈ 31 ಕೊನೆಯ ದಿನಾಂಕ ಎಂಬುದು ನಿರ್ಣಾಯಕ. ಯಾವುದೇ ಶುಲ್ಕ ರಹಿತವಾಗಿ ಈ ಗಡುವಿನೊಳಗೆ ಐಟಿಆರ್‌ ಫೈಲಿಂಗ್‌ ಮಾಡಬಹುದು.

ಗಡುವು ತಪ್ಪಿದರೆ ಏನಾಗುತ್ತದೆ?

ಐಟಿಆರ್‌ ಸಲ್ಲಿಕೆಯ ಗಡುವನ್ನು ತಪ್ಪಿದರೆ ನಾನಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪೆನಾಲ್ಟಿಗಳನ್ನು ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 234 ಎಫ್‌ ಅಡಿಯಲ್ಲಿ 5,000 ರೂ. ತನಕ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ವಾರ್ಷಿಕ ಆದಾಯವು 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ವಿಳಂಬ ಶುಲ್ಕವು 1,000 ರೂ. ಆಗುತ್ತದೆ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಜುಲೈ 31ರ ಗಡುವು ತಪ್ಪಿದರೂ ನೀವು ವಿಳಂಬಿತ ರಿಟರ್ನ್‌ (belated return) ಫೈಲಿಂಗ್‌ ಮಾಡಬಹುದು. ವಿಳಂಬಿತ ಐಟಿಆರ್‌ ಅನ್ನು 2023ರ ಡಿಸೆಂಬರ್‌ 31 ರ ತನಕ ಫೈಲಿಂಗ್‌ ಮಾಡಬಹುದು. ಆದಾಯ ತೆರಿಗೆ ಪಾವತಿಸದಿದ್ದರೆ ( non-payment of taxes) ಕಠಿಣ ದಂಡ ಮತ್ತು ಮೂರು ತಿಂಗಳಿನಿಂದ ಎರಡು ವರ್ಷದ ತನಕ ಸೆರೆ ವಾಸಕ್ಕೂ ಕಾರಣವಾಗಬಹುದು. 25,00,000 ರೂ.ಗೂ ಹೆಚ್ಚು ತೆರಿಗೆ ಮೊತ್ತ ತಪ್ಪಿಸಿದ್ದರೆ ಏಳು ವರ್ಷದ ತನಕ ಜೈಲು ಶಿಕ್ಷೆ ಎದುರಿಸಬೇಕಾಗಿ ಬರಬಹುದು.

Exit mobile version