ನೀವು ಬಿಸಿನೆಸ್‌ನಲ್ಲಿ ಭಾರಿ ದುಡ್ಡು ಮತ್ತು ಸಕ್ಸಸ್ ಗಳಿಸಬೇಕು ಅಂತ ಆಲೋಚಿಸುತ್ತಿದ್ದರೆ, ನಿಮ್ಮ ನಿರ್ಧಾರಗಳೂ ದೊಡ್ಡದಾಗಿರಬೇಕು. ( Business Guide) ಈಗ ಯಶಸ್ವಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸಂತೋಷ್ ಪಾಲ್ ಹೀಗೆನ್ನುತ್ತಾರೆ. ಅವರು ಬಿಸಿನೆಸ್ ತರಬೇತಿ ಕಾರ್ಯಾಗಾರವೊಂದಕ್ಕೆ ಸೇರಿದ ಬಳಿಕ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಏಳುತ್ತಾರೆ. ಹೊಸ ವಿಷಯಗಳನ್ನು ಕಲಿಯುತ್ತಾರೆ. ಈ ಹಿಂದೆ ಅವರ ವೇತನ ಮಾಸಿಕ 50,000 ರೂ. ಆಗಿತ್ತು. ಈಗ ಅವರು ತಮ್ಮ ಇಷ್ಟದ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವ ಮೂಲಕ ಪ್ರತಿ ತಿಂಗಳು 10-12 ಲಕ್ಷ ರೂ. ಆದಾಯ ಗಳಿಸುತ್ತಾರೆ.
ನೀವು ದೊಡ್ಡ ವಿಷಯಗಳನ್ನು ಸಾಧಿಸಬೇಕಿದ್ದರೆ, ದೊಡ್ಡ ನಿರ್ಧಾರವನ್ನೂ ಕೈಗೊಳ್ಳಬೇಕಾಗುತ್ತದೆ ಎನ್ನುತ್ತಾರೆ ಸಂತೋಷ್ ಪಾಲ್. ತಿಂಗಳಿಗೆ 50 ಸಾವಿರ ರೂ. ಸಂಬಳದ ಉದ್ಯೋಗವನ್ನು ಕೈಬಿಡುವ ಮಹತ್ವದ ನಿರ್ಧಾರವನ್ನು ಅವರು ತೆಗೆದುಕೊಂಡ ಬಳಿಕ ಅವರ ಜೀವನವೇ ಬದಲಾಯಿತು. ಬಿಸಿನೆಸ್ ಮೋಟಿವೇಶನ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಅವರ ಯೋಚನಾ ಲಹರಿ ಬದಲಾಗಿತ್ತು. ಧೈರ್ಯವಂತರಾಗಿದ್ದರು. ಈಗ ಅವರು ಪ್ರಾಪರ್ಟಿ ಮೇಳವನ್ನು ಆಯೋಜಿಸುವ ಮಟ್ಟಕ್ಕೆ ಬೆಳೆದಿದ್ದರು. ಅದೊಂದೇ ದಿನ ಹತ್ತು ಕೋಟಿ ರೂ. ಆದಾಯ ಗಳಿಸಿದ್ದರು. ಅದೊಂದೇ ದಿನ 12 ಲಕ್ಷ ರೂ. ನಿವ್ವಳ ಲಾಭವನ್ನು ತಮ್ಮದಾಗಿಸಿದ್ದರು. 50 ಸಾವಿರ ಮಾಸಿಕ ವೇತನ ಎಲ್ಲಿ, 12 ಲಕ್ಷ ರೂ. ಲಾಭವೆಲ್ಲಿ. ಆದರೆ ಸೇಲ್ಸ್‌ನ ಮ್ಯಾಜಿಕ್ಕೇ ಹಾಗಿರುತ್ತದೆ!
ಅಮಿತ್ ಕಾಂಬೋಜಿ ಎಂಬುವರು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಅವರಿಗೆ ಒಮ್ಮೆ 20 ಲಕ್ಷ ರೂ. ನಷ್ಟವಾಗಿತ್ತು. ಬಳಿಕ ಖಿನ್ನತೆಯಿಂದ ಬಳಲಿದರು. ಹೇಗೋ, ಒಂದು ಬಿಸಿನೆಸ್ ಮೋಟಿವೇಶನ್ ತರಗತಿಗೆ ಬಂದ ಬಳಿಕ ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡರು. ಆಮದು-ರಫ್ತು ತರಬೇತಿ ಗಳಿಸಿದರು. ಬಳಿಕ ಅವರ ಅದೃಷ್ಟ ಖುಲಾಯಿಸಿತು. ಇಬ್ಬರಿಗೆ ಮೊದಲು ತರಬೇತಿ ನೀಡಿದರು. ಬಳಿಕ ಒಂದೊಂದೇ ಕಂಪನಿಗಳನ್ನು ಗ್ರಾಹಕರಾಗಿ ಪಡೆದರು. ಎರಡು ವರ್ಷದಲ್ಲಿ 1000 ಕಂಪನಿಗಳಿಗೆ ಟ್ರೈನಿಂಗ್ ಕೊಟ್ಟರು. ಇದುವರೆಗೆ 35,000 ಮಂದಿಗೆ ತರಬೇತಿ ಕೊಟ್ಟಿದ್ದಾರೆ. ಈಗ ಒಂದು ಕೋಟಿ ರೂ. ಲಾಭ ಗಳಿಸಿದ್ದಾರೆ. ಇಂಥ ಹಲವು ಬಿಸಿನೆಸ್ ಸ್ಟೋರಿಗಳನ್ನು ನೀವು ಕೇಳಿರಬಹುದು. ಇವೆಲ್ಲದರ ಹಿಂದಿನ ಕಾರಣಗಳನ್ನು ಗಮನಿಸಿ ನೋಡಿ, ಅವರಲ್ಲೊಂದು ಸಕಾರಾತ್ಮಕ ಮನಸ್ಥಿತಿ ಇರುತ್ತದೆ.
ಇದನ್ನೂ ಓದಿ: Moxy Hotels: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾಕ್ಸಿ ಹೋಟೆಲ್ ಆರಂಭ!
ಸಕಾರಾತ್ಮಕ ಚಿಂತನೆ ಮತ್ತು ದೊಡ್ಡ ನಿರ್ಧಾರಗಳು ನಿಮ್ಮ ಪ್ರೊಫೆಷನಲ್ ಕರಿಯರ್ ಅನ್ನು ದೊಡ್ಡದಾಗಿಸುವುದು ಮಾತ್ರವಲ್ಲದೆ, ನಿಮ್ಮ ವ್ಯಕ್ತಿತ್ವವನ್ನೇ ಉನ್ನತ ಮಟ್ಟಕ್ಕೆ ಏರಿಸುತ್ತದೆ. ಸೇಲ್ಸ್ ಸಂದರ್ಭ ತಿರಸ್ಕಾರಗಳು ಉಂಟಾಗುವುದು ಸಹಜ. ಆದರೆ ಅವುಗಳನ್ನರ ಎದುರಿಸುವ ಛಾತಿ ನಿಮ್ಮದಾಗುತ್ತದೆ. ಕಟು ಟೀಕೆಗಳ ಹೊರತಾಗಿಯೂ ಬೆಳೆದು ನಿಲ್ಲುವ ಕಲೆ ನಿಮಗೆ ರಕ್ತಗತವಾಗುತ್ತದೆ. ಸೇಲ್ಸ್ ಮೂಲಕ ನೀವು ನಾನಾ ಜನರೊಡನೆ ನಿತ್ಯ ಸಂಪರ್ಕ ಗಳಿಸುತ್ತೀರಿ. ಇದು ಕೂಡ ನಿಮ್ಮ ನೆಟ್ ವರ್ಕ್ ಅನ್ನು ದೊಡ್ಡದಾಗಿಸುತ್ತದೆ. ಸೇಲ್ಸ್ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.