Site icon Vistara News

EPF New Rule: ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ.ವರೆಗೆ ಇಪಿಎಫ್‌ನಿಂದ ಹಣ ಪಡೆಯಲು ಅವಕಾಶ

EPF New Rule

ವೈದ್ಯಕೀಯ ಚಿಕಿತ್ಸೆಗಾಗಿ (medical treatment) ಇನ್ನು ಮುಂದೆ ಉದ್ಯೋಗಿಗಳು ಪಿಂಚಣಿ ನಿಧಿಯಿಂದ (Pension Fund ) 1 ಲಕ್ಷ ರೂ.ವರೆಗೆ ಭಾಗಶಃ ಹಿಂಪಡೆಯಲು ಅವಕಾಶವಿದೆ. ಈ ಕುರಿತು ಏಪ್ರಿಲ್‌ನಿಂದಲೇ ಉದ್ಯೋಗಿಗಳ ಪಿಂಚಣಿ ನಿಧಿ ಸಂಸ್ಥೆಯ (EPF New Rule) ಅಪ್ಲಿಕೇಶನ್ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಯನ್ನು ಮಾಡಲಾಗಿದ್ದು, ಇದಕ್ಕೆ ಕೇಂದ್ರ ಭವಿಷ್ಯ ನಿಧಿ ಆಯುಕ್ತರ ಒಪ್ಪಿಗೆಯೂ ದೊರೆತಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ 68ಜೆ ಕ್ಲೈಮ್‌ಗಳ ಅರ್ಹತೆ ಮಿತಿಯನ್ನು 50,000 ರೂ. ನಿಂದ 1 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಹಲವಾರು ಉದ್ದೇಶಗಳಿಗಾಗಿ ಇಪಿಎಫ್ ಭಾಗಶಃ ಹಿಂಪಡೆಯುವಿಕೆಗೆ ಫಾರ್ಮ್ 31ರ ಮೂಲಕ ಅನುಮತಿಸಲಾಗಿದೆ. ಮದುವೆ, ಸಾಲ ಮರುಪಾವತಿ, ಮನೆ ನಿರ್ಮಾಣ ಮತ್ತು ಫ್ಲಾಟ್ ಖರೀದಿಗಾಗಿ ಇಪಿಎಫ್ ನಿಂದ ಭಾಗಶಃ ಹಣ ಹಿಂಪಡೆಯಲು ಅವಕಾಶವಿದೆ.

ಪ್ಯಾರಾ 68ಜೆ ಅಡಿಯಲ್ಲಿ ಭಾಗಶಃ ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಲಾಗಿದೆ. ಪಿಂಚಣಿ ನಿಧಿ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರ ಅನಾರೋಗ್ಯದ ಚಿಕಿತ್ಸೆಗಾಗಿ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಿಂದ ಮುಂಗಡವನ್ನು ಪಡೆಯಬಹುದು.

ಒಂದು ಲಕ್ಷ ರೂ.ವರೆಗೆ ಮುಂಗಡ ಪಡೆಯಲು ಅವಕಾಶವಿದ್ದು, ಪಿಂಚಣಿದಾರರ 6 ತಿಂಗಳ ಮೂಲ ವೇತನ ಮತ್ತು ಡಿಎ ಅಥವಾ ಬಡ್ಡಿಯೊಂದಿಗೆ ಉದ್ಯೋಗಿ ಪಾಲು ಯಾವುದು ಕಡಿಮೆಯೋ ಅದನ್ನು ಹಿಂಪಡೆಯಲು ಅವಕಾಶವಿದೆ.
ಇದಕ್ಕಾಗಿ ಪಿಂಚಣಿದಾರರು ಫಾರ್ಮ್ 31 ಜೊತೆಗೆ ಉದ್ಯೋಗಿ ಮತ್ತು ವೈದ್ಯರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕಾಗುತ್ತದೆ.


ಫಾರ್ಮ್ 31 ಎಂದರೇನು?

ಇಪಿಎಫ್ ಫಾರ್ಮ್ 31 ನೌಕರರ ಭವಿಷ್ಯ ನಿಧಿ ಖಾತೆಯಿಂದ ಹಣವನ್ನು ಭಾಗಶಃ ಹಿಂಪಡೆಯಲು ಬಳಸುವ ಅರ್ಜಿ ನಮೂನೆಯಾಗಿದೆ.

ನಮೂನೆ 31ರ ಮೂಲಕ ಪ್ಯಾರಾ 68ಬಿ ಅಡಿಯಲ್ಲಿ ನಿವೇಶನವನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಮನೆ, ಫ್ಲಾಟ್ ಖರೀದಿ, ಮನೆ ನಿರ್ಮಾಣಕ್ಕಾಗಿ ಪಿಂಚಣಿ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

ಪ್ಯಾರಾ 68ಬಿಬಿ ಅಡಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ಸಾಲದ ಮರುಪಾವತಿಗಾಗಿ, ಪ್ಯಾರಾ 68ಹೆಚ್ ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಮುಂಗಡಗಳ ಅನುದಾನ, ಪ್ಯಾರಾ 68ಜೆ ಅಡಿಯಲ್ಲಿ ಅನಾರೋಗ್ಯಕ್ಕಾಗಿ ಮುಂಗಡ, ಪ್ಯಾರಾ 68ಕೆ ಅಡಿಯಲ್ಲಿ ಮಕ್ಕಳ ಮದುವೆ ಅಥವಾ ಮೆಟ್ರಿಕ್ಯುಲೇಷನ್ ಅನಂತರದ ಶಿಕ್ಷಣಕ್ಕಾಗಿ ಮತ್ತು ಪ್ಯಾರಾ 68ಎನ್ ಅಡಿಯಲ್ಲಿ ದೈಹಿಕವಾಗಿ ಅಶಕ್ತರಾಗಿರುವ ಸದಸ್ಯರಿಗೆ ಮುಂಗಡ ಅನುದಾನ ಮತ್ತು ಪ್ಯಾರಾ 68ಎನ್ ಎನ್ ಅಡಿಯಲ್ಲಿ ನಿವೃತ್ತಿಯ ಮೊದಲು ಒಂದು ವರ್ಷದೊಳಗೆ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಮಿತಿಯನ್ನು ಹೆಚ್ಚಿಸಿದ ಪ್ಯಾರಾ 68ಜೆ

ಪ್ಯಾರಾ 68ಜೆ ಪಿಂಚಣಿದಾರರು ಅಥವಾ ಕುಟುಂಬದ ಸದಸ್ಯರ ಅನಾರೋಗ್ಯದ ಚಿಕಿತ್ಸೆಗಾಗಿ ಇಪಿಎಫ್ ಖಾತೆಯಿಂದ ಭಾಗಶಃ ಹಿಂಪಡೆಯಲು ಅವಕಾಶ ನೀಡಲಾಗಿದೆ.

Exit mobile version