ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಅಥವಾ non-banking financial companies -NBFC) ಆರ್‌ಬಿಐನ 1934ರ ಕಾಯಿದೆಯ ಪ್ರಕಾರ ನಿಯಂತ್ರಿಸುತ್ತದೆ. ಎನ್‌ಬಿಎಫ್‌ಸಿಗಳಿಗೆ ಕ್ರೆಡಿಟ್ ರಿಸ್ಕ್ ಅಟ್ಯಾಚ್ ಆಗಿರುವುದರಿಂದ ಅವುಗಳು ಸಾಮಾನ್ಯವಾಗಿ ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿಯನ್ನು ಫಿಕ್ಸೆಡ್ ಡೆಪಾಸಿಟ್‌ಗಳಿಗೆ ನೀಡುತ್ತವೆ.
ಬಡ್ಡಿ ದರಗಳು ಹೆಚ್ಚು ಇದ್ದಾಗ ಸುರಕ್ಷತೆ ಹಿಂದೆ ಸರಿಯುತ್ತದೆ. ಇದರ ಪರಿಣಾಮ ಡಿಫಾಲ್ಟ್ಸ್ ಮತ್ತು ರಿಪೇಮೆಂಟ್‌ನಲ್ಲಿ ವಿಳಂಬ ಉಂಟಾಗುತ್ತದೆ. ಆದ್ದರಿಂದ ಪ್ರತಿಷ್ಠಿತ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಂದ ಉತ್ತರ ರೇಟಿಂಗ್ ಹೊಂದಿರುವ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಹಿರಿಯ ನಾಗರಿಕರಿಗೆ ಎಎಫ್‌ಡಿಗೆ ಉತ್ತಮ ಬಡ್ಡಿ ನೀಡುವ ಡೆಪಾಸಿಟ್ ಸ್ಕೀಮ್‌ಗಳ ವಿವರ ಇಲ್ಲಿದೆ.
ಬಜಾಜ್ ಫೈನಾನ್ಸ್ ಎಫ್‌ಡಿ ಇಂಟರೆಸ್ಟ್ ರೇಟ್: (Bajaj finance FD interest rates) ಬಜಾಜ್ ಫಿನ್ ಸರ್ವ್ 7.70%ರಿಂದ 8.60 % ತನಕ ಬಡ್ಡಿ ದರವನ್ನು ನಾನ್-ಕ್ಯುಮುಲೇಟಿವ್ ಡೆಪಾಸಿಟ್‌ಗಳ ವಿಭಾಗದಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತದೆ. 15-44 ತಿಂಗಳಿನ ಸ್ಕೀಮ್‌ಗಳಿಗೆ ಇದು ಲಭ್ಯವಿದೆ. ರೆಗ್ಯುಲರ್ ಡೆಪಾಸಿಟ್‌ಗಳಲ್ಲಿ ಹಿರಿಯ ನಾಗರಿಕರಿಗೆ ಬಜಾಜ್ ಫಿನ್ ಸರ್ವ್ ಇಂಟರೆಸ್ಟ್ ರೇಟ್ 7.65%ರಿಂದ 8.30% ತನಕ ಸಿಗುತ್ತದೆ.
ಮುತ್ತೂಟ್ ಫೈನಾನ್ಸ್ ಎಫ್‌ಡಿ ಇಂಟರೆಸ್ಟ್ ರೇಟ್: ( Muthoot finance FD interest rate): ಮುತ್ತೂಟ್ ಫೈನಾನ್ಸ್ , ಮುತ್ತೂಟ್ ಕ್ಯಾಪ್ ಅಡಿಯಲ್ಲಿ ನಾನ್ ಕ್ಯುಮುಲೇಟಿವ್ ಡೆಪಾಸಿಟ್‌ಗಳಿಗೆ ವಾರ್ಷಿಕ 6.25%-7.25% ಬಡ್ಡಿ ದರ ನೀಡುತ್ತದೆ.
ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಎಫ್‌ಡಿ ಬಡ್ಡಿ ದರ: LIC housing finance FD interest rates: ಎಲ್‌ಐಸಿ ಹೌಸಿಂಗ್ ಫೈನಾನ್ಸ್ 20 ಕೋಟಿ ರೂ. ತನಕದ ನಾನ್ ಕ್ಯುಮುಲೇಟಿವ್ ಡೆಪಾಸಿಟ್‌ಗಳಿಗೆ 7%-7.75% ತನಕ ಬಡ್ಡಿ ನೀಡುತ್ತದೆ. ಹೂಡಿಕೆಯ ಕನಿಷ್ಠ ಮೊತ್ತ 20,000 ರೂ.
ಸುಂದರಂ ಫೈನಾನ್ಸ್ ಎಫ್‌ಡಿ ಬಡ್ಡಿ ದರ: ಸುಂದರಂ ಫೈನಾನ್ಸ್ (Sundaram finance) ಹಿರಿಯ ನಾಗರಿಕರಿಗೆ 7.95%-8.25% ತನಕ ವಾರ್ಷಿಕ ಬಡ್ಡಿ ನೀಡುತ್ತದೆ.
ಇದನ್ನೂ ಓದಿ: Mobile App : ಈ ಆ್ಯಪ್ಗಳು ನಿಮ್ಮ ಮೊಬೈಲ್ನಲ್ಲಿ ಇದ್ದರೆ ತಕ್ಷಣ ಡಿಲೀಟ್ ಮಾಡಿ ಎನ್ನುತ್ತಿದೆ ಗೂಗಲ್ ಪ್ಲೇಸ್ಟೋರ್
ಶ್ರೀರಾಮ್ ಫೈನಾನ್ಸ್ ಎಫ್‌ಡಿ ಬಡ್ಡಿ ದರ: (Shriram Finannce) : ಶ್ರೀರಾಮ್ ಫೈನಾನ್ಸ್ ಸಾಮಾನ್ಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ ಸಲುವಾಗಿ 7.60-8.50% ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ 8%-9% ಬಡ್ಡಿ ನೀಡುತ್ತದೆ.
ಐಸಿಐಸಿಐ ಹೋಮ್ ಫೈನಾನ್ಸ್ ಎಫ್‌ಡಿ ಬಡ್ಡಿ ದರ: (ICICI Home Finance): ಐಸಿಐಸಿಐ ಹೋಮ್ ಫೈನಾನ್ಸ್ 7.25%-7.75% ಬಡ್ಡಿ ದರವನ್ನು ಹಿರಿಯ ನಾಗರಿಕರಿಗೆ ನಾನ್ ಕ್ಯುಮುಲೇಟಿವ್ ಎಫ್‌ಡಿ ಸಲುವಾಗಿ ನೀಡುತ್ತದೆ. ವಾರ್ಷಿಕ ಪ್ಲಾನ್ ಅಡಿಯಲ್ಲಿ 7.65%-7.85% ತನಕ ಬಡ್ಡಿ ಪಡೆಯಬಹುದು.