Site icon Vistara News

Money Guide: ಹಣ ಉಳಿಸೋದು ಹೇಗೆ? ಮಿಲೇನಿಯಲ್ಸ್‌ಗಾಗಿ 10 ಟಿಪ್ಸ್‌ ಇಲ್ಲಿವೆ!

money saving tips

1981ರಿಂದ 1996ರ ನಡುವೆ ಜನಿಸಿದವರನ್ನು ʼಮಿಲೇನಿಯಲ್ಸ್’ (millennials) ಎಂದು ಕರೆಯುತ್ತಾರೆ. ಇವರ ಆದಾಯ, ವೆಚ್ಚದ ಸಾಮರ್ಥ್ಯ ಹೆಚ್ಚು. ನಿರಂತರ ಏರಿಕೆಯನ್ನೂ ಕಾಣುತ್ತಿದೆ. ಕ್ರೆಡಿಟ್ ಕಾರ್ಡ್‌ಗಳು ಮತ್ತು ವಿವಿಧ ಆನ್‌ಲೈನ್ ಶಾಪಿಂಗ್ (Online shopping) ಇವರಿಗೆ ಸುಲಭ. ಮಿಲೇನಿಯಲ್‌ಗಳು ಖರ್ಚು ಮಾಡುವತ್ತ ಗಮನಹರಿಸುವುದು ಹೆಚ್ಚು. ಉಳಿತಾಯದ ಮೇಲೆ ಗಮನ ಹರಿಸುವುದು ಕಡಿಮೆ. ಆದರೆ ಮಿಲೇನಿಯಲ್‌ಗಳು (millennials saving) ಸಹ ತಮ್ಮ ಹಣವನ್ನು ಉತ್ತಮವಾಗಿ ನಿರ್ವಹಿಸುವುದು (money guide) ಅಗತ್ಯ.

ಹೆಚ್ಚಿನ ಮಿಲೇನಿಯಲ್‌ಗಳು ದೊಡ್ಡ ಮನೆಯನ್ನು ಹೊಂದುವ, ರಜೆಯಲ್ಲಿ ವಿದೇಶಗಳಿಗೆ ಹೋಗುವ ಕನಸು ಕಾಣುತ್ತಾರೆ. ಕಠಿಣ ಕಾರ್ಪೊರೇಟ್ ಉದ್ಯೋಗಗಳನ್ನು ನಿರ್ವಹಿಸುತ್ತಾರೆ. ಆದರೆ ಭವಿಷ್ಯದಲ್ಲಿ ತಮ್ಮ ಜೀವನಶೈಲಿಯನ್ನು ಉಳಿಸಿಕೊಳ್ಳಲು ಅವರು ಸಾಕಷ್ಟು ಉಳಿಸುತ್ತಾರೆಯೇ? ನೀವು ಮಿಲೇನಿಯಲ್ಸ್‌ ಆಗಿದ್ದರೆ, ಭವಿಷ್ಯಕ್ಕಾಗಿ ಹಣ ಉಳಿಸುವ ಯೋಚನೆ ಹೊಂದಿದ್ದರೆ ಈ ಟಿಪ್ಸ್‌ ಓದಿ.

1) ಸಣ್ಣ ಉಳಿತಾಯ ಅಭ್ಯಾಸ ರೂಢಿಸಿಕೊಳ್ಳಿ

ಉಳಿತಾಯಕ್ಕೆ (small savings) ಸಂಬಂಧಿಸಿ ಮಿಲೇನಿಯಲ್‌ಗಳ ಚಿಂತನೆ ವಿಭಿನ್ನ. ಪ್ರವಾಸ, ದುಬಾರಿ ಗ್ಯಾಜೆಟ್‌, ಫ್ಯಾಶನ್ ಟ್ರೆಂಡ್‌ಗಳನ್ನು ಅನುಸರಿಸುವುದು ಇತ್ಯಾದಿಗಳಿಂದಾಗಿ ದೀರ್ಘಾವಧಿಯ ಉಳಿತಾಯದ ಶಿಸ್ತನ್ನು ಅನುಸರಿಸುವಲ್ಲಿ ಅಡ್ಡಿಯಾಗುತ್ತದೆ. ಖರ್ಚು ಮಾಡುವ ಮೊದಲು ಮಾಸಿಕ ಆದಾಯದ ಒಂದು ಭಾಗವನ್ನು ಉಳಿಸುವುದು ಉಳಿತಾಯದ ಶಿಸ್ತನ್ನು ಬೆಳೆಸಲು ಅತ್ಯುತ್ತಮ ಸೂತ್ರ.

ಸ್ಮಾರ್ಟ್ ಸಲಹೆ: 50-20-30 ನಿಯಮವನ್ನು ಅನುಸರಿಸಿ. ಇದರ ಅಡಿಯಲ್ಲಿ, ಆದಾಯದ 50% ಜೀವನ ವೆಚ್ಚಕ್ಕಾಗಿ, 20% ಆಹಾರ, ಮನರಂಜನೆ ಮತ್ತು ಪ್ರಯಾಣಕ್ಕಾಗಿ ಮೀಸಲಿಡಬಹುದು. ಉಳಿದ ಶೇ.30ರಷ್ಟು ಹಣವನ್ನು ಉಳಿತಾಯವಾಗಿ ಇಡಬೇಕು.

2) ವೆಚ್ಚಗಳನ್ನು ಟ್ರ್ಯಾಕ್ ಮಾಡಿ

ಮಿಲೇನಿಯಲ್ಸ್ ಆದಾಯವನ್ನು ತಕ್ಷಣ ಖರ್ಚು ಮಾಡುವತ್ತಲೇ ಪರಿಗಣಿಸುತ್ತಾರೆ. ಮನೆ ಬಾಡಿಗೆ, ದಿನಸಿ, ಭೋಜನ ಇತ್ಯಾದಿಗಳಂತಹ ತಕ್ಷಣದ ಉದ್ದೇಶಗಳಿಗಾಗಿ ಅದನ್ನು ಬಳಸಲು ಬಯಸುತ್ತಾರೆ. ಸ್ಮಾರ್ಟ್ ಉಳಿತಾಯ ಅಭ್ಯಾಸ ಅಳವಡಿಸಿಕೊಳ್ಳುವ ಒಂದು ಹೆಜ್ಜೆಯೆಂದರೆ ಖರ್ಚುಗಳನ್ನು ಗುರುತಿಸುವುದು. ಒಂದು ನಿರ್ದಿಷ್ಟ ಅವಧಿಗೆ ಎಲ್ಲಾ ಖರ್ಚುಗಳನ್ನು ನಮೂದಿಸುವ ಮೂಲಕ ಇದನ್ನು ಮಾಡಬಹುದು. ಇದರಿಂದ ಅನಗತ್ಯ ಅಥವಾ ತಪ್ಪಿಸಬಹುದಾದ ವೆಚ್ಚವನ್ನು ಕಡಿತಗೊಳಿಸಬಹುದು.

ಸ್ಮಾರ್ಟ್ ಸಲಹೆ: ಖರ್ಚು ಟ್ರ್ಯಾಕರ್ ಅಪ್ಲಿಕೇಶನ್‌ಗಳನ್ನು ಬಳಸಿ. ಹೆಚ್ಚಿನ ಮಿಲೇನಿಯಲ್‌ಗಳು ಟೆಕ್ ಸೇವಿಗಳು. ಮೊಬೈಲ್ ಖರ್ಚು ಟ್ರ್ಯಾಕರ್ ಅಪ್ಲಿಕೇಶನ್ ಅನ್ನು ಬಳಸುವುದು ವೆಚ್ಚಗಳನ್ನು ಟ್ರ್ಯಾಕ್ ಮಾಡುಲು ಉತ್ತಮ ಆಹಾರ, ಶಾಪಿಂಗ್ ಮತ್ತು ಮನರಂಜನೆಯಂತಹ ವೆಚ್ಚಗಳನ್ನು ವರ್ಗೀಕರಿಸಲು ಈ ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತವೆ. ತಡವಾಗಿ ಬಿಲ್‌ಗಳನ್ನು ಪಾವತಿಸುವುದನ್ನು ತಪ್ಪಿಸಲು ರಿಮೈಂಡರ್‌ ಬಳಸಬಹುದು.

Health insurence

3) ವಿವೇಚನೆಯಿಂದ ವೆಚ್ಚ ಮಾಡಿ

ತಮ್ಮ ವೃತ್ತಿಜೀವನವನ್ನು ಇತ್ತೀಚೆಗೆ ಪ್ರಾರಂಭಿಸಿರುವ ಮಿಲೇನಿಯಲ್‌ಗಳು ಉಳಿತಾಯ ಪ್ರಾರಂಭಿಸಲು ಅನಿವಾರ್ಯವಲ್ಲದ ವೆಚ್ಚಗಳನ್ನು ತಪ್ಪಿಸಬೇಕು. ಅಗತ್ಯ ಮತ್ತು ಅನಿವಾರ್ಯವಲ್ಲದ ವೆಚ್ಚವನ್ನು ಗುರುತಿಸುವುದು ಮುಖ್ಯ. ಅನಿಯಂತ್ರಿತವಾಗಿ ಬಿಟ್ಟರೆ ಈ ವೆಚ್ಚಗಳು ಸುಲಭವಾಗಿ ಆದಾಯವನ್ನು ಅಳಿಸಿಹಾಕಬಹುದು ಮತ್ತು ಭವಿಷ್ಯದ ಬಳಕೆಗಾಗಿ ಏನನ್ನೂ ಉಳಿಸದೇ ಇರಬಹುದು.

4) ಅನಗತ್ಯ ಸಾಲವನ್ನು ತಪ್ಪಿಸಿ

ಕ್ರೆಡಿಟ್ ಸೌಲಭ್ಯಗಳು ಸುಲಭವಾಗಿ ಲಭ್ಯವಿವೆ ಮತ್ತು ಸುಲಭವಾಗಿ ಪಡೆಯಬಹುದು. ಈ ಕಾರಣದಿಂದ ಅನೇಕ ಯುವಜನ ತಮ್ಮ ಜೀವನಶೈಲಿಯ ಅವಶ್ಯಕತೆಗಳನ್ನು ಪೂರೈಸಲು ಇವುಗಳ ಕಡೆಗೆ ಒಲವು ತೋರುತ್ತಾರೆ. ಆದರೆ ಇದು ಸಾಲದ ಬಲೆಗೆ ಕಾರಣವಾಗಬಹುದು. ಅಸುರಕ್ಷಿತ ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಸಾಲಗಳಂತಹ ಅನಗತ್ಯ ಸಾಲವನ್ನು ತಪ್ಪಿಸುವುದು ಉತ್ತಮ. ಸಾಲದ ಉದ್ದೇಶ, ಮರುಪಾವತಿ ಯೋಜನೆ, ಮರುಪಾವತಿಗೆ ಹಣದ ಲಭ್ಯತೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ.

5) ತುರ್ತು ನಿಧಿಯನ್ನು ಹೊಂದಿಸಿಡಿ

ಹೊಸ ಕಾರನ್ನು ಹೊಂದುವುದು, ಮದುವೆ ಅಥವಾ ಮನೆ ನವೀಕರಣಗಳಿಗೆಲ್ಲ ಸಾಕಷ್ಟು ಹಣದ ಅಗತ್ಯವಿರುತ್ತದೆ. ಈ ಗುರಿಗಳು ಉತ್ತಮವಾಗಿ ಉಳಿಸಲು ನಿಮ್ಮನ್ನು ಪ್ರೇರೇಪಿಸುತ್ತವೆ. ಆದರೆ ಹೆಚ್ಚಿನವರು ತುರ್ತು ನಿಧಿಯ (Emergency fund) ಅವಶ್ಯಕತೆಯನ್ನು ಕಡೆಗಣಿಸುತ್ತಾರೆ. ವೈದ್ಯಕೀಯ ಅಗತ್ಯಗಳಂತಹ ತುರ್ತು ಪರಿಸ್ಥಿತಿಗಳಿಗಾಗಿ ಉಳಿಸುವುದು ಯಾವಾಗಲೂ ಒಳ್ಳೆಯದು.

6) ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ

ಇನ್ನೂ ಹೂಡಿಕೆಯನ್ನು ಪ್ರಾರಂಭಿಸದ ಮಿಲೇನಿಯಲ್‌ಗಳು ತಮ್ಮ ಹೂಡಿಕೆಯ ಪ್ರಯಾಣವನ್ನು ಪ್ರಾರಂಭಿಸಲು ಸರಿಯಾದ ಸಮಯವಿದು. ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಹಣವನ್ನು ಉಳಿಸುವುದು ಹೂಡಿಕೆಯ ಮೂಲಕ ಮಾತ್ರ ಸಾಧ್ಯ. ನಿಮ್ಮ ಆದಾಯದ ಮಟ್ಟವನ್ನು ಲೆಕ್ಕಿಸದೇ ಮ್ಯೂಚುಯಲ್ ಫಂಡ್ ಹೂಡಿಕೆಗಳಿಗಾಗಿ ಕನಿಷ್ಠ 15-20% ಅನ್ನು ಮೀಸಲಿಡಬೇಕು. ಇವುಗಳು ನೀವು ಅನುಸರಿಸಿದ ಹೂಡಿಕೆಯ ಮಾದರಿ ಅವಲಂಬಿಸಿ ಧನಾತ್ಮಕ ಆದಾಯವನ್ನು ನೀಡಬಹುದು.

ಸ್ಮಾರ್ಟ್ ಸಲಹೆ: ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮ್ಯೂಚುವಲ್ ಫಂಡ್‌ಗಳು ಲಭ್ಯವಿದೆ. ಮ್ಯೂಚುವಲ್ ಫಂಡ್‌ಗಳ ರಿಸ್ಕ್ ರೇಟಿಂಗ್ ಅನ್ನು ನೋಡಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮ್ಯೂಚುಯಲ್ ಫಂಡ್‌ನಲ್ಲಿ ಹೆಚ್ಚಿನ ರಿಸ್ಕ್‌ ಕೂಡಾ ಇರುತ್ತದೆ.

Health insurence

7) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ

ಇಂದು ಷೇರು ಮಾರುಕಟ್ಟೆ ಎಲ್ಲರಿಗೂ ಸುಲಭವಾಗಿ ಲಭ್ಯವಿದೆ ಮತ್ತು ಪ್ರವೇಶಿಸಬಹುದಾಗಿದೆ. ಹೂಡಿಕೆಯ ಆಯ್ಕೆಗಳಿಗಾಗಿ ಸ್ಟಾಕ್ ಮಾರುಕಟ್ಟೆಯನ್ನು ಅನ್ವೇಷಿಸುವುದು, ಒಟ್ಟು ಆದಾಯದ ಒಂದು ನಿರ್ದಿಷ್ಟ ಭಾಗವನ್ನು ಹೂಡುವುದು ಒಳ್ಳೆಯದು. ಸ್ಟಾಕ್ ಮಾರುಕಟ್ಟೆಗಳು ಏರಿಳಿತಗೊಳ್ಳುತ್ತಲೇ ಇರುತ್ತವೆ. ಆದ್ದರಿಂದ ಇವುಗಳ ಬಗ್ಗೆ ಹೆಚ್ಚಿನ ಜ್ಞಾನವನ್ನೂ ಗಳಿಸಿಕೊಳ್ಳಬೇಕು.

ಇದನ್ನೂ ಓದಿ: Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!

8) ವಿಮೆ ಇರಲಿ

ಇಂದಿನ ಕಾಲದಲ್ಲಿ ಆರೋಗ್ಯ ವಿಮೆ ಬಹಳ ನಿರ್ಣಾಯಕ. ಆರೋಗ್ಯ ರಕ್ಷಣೆ, ಜೀವ ವಿಮೆಯಂತಹ ವಿಮೆಗಳನ್ನು ಆರಿಸಿಕೊಳ್ಳುವ ಮೂಲಕ ಮಿಲೇನಿಯಲ್‌ಗಳು ಹಣಕಾಸಿನ ಭದ್ರತೆಯನ್ನು ಹೊಂದಬೇಕು. ವಿಮೆಯು ನಿಮ್ಮ ಭವಿಷ್ಯಕ್ಕೆ ಮತ್ತು ನಿಮ್ಮ ಕುಟುಂಬ/ಅವಲಂಬಿತರ ಭವಿಷ್ಯಕ್ಕೆ ಆರ್ಥಿಕ ರಕ್ಷಣೆ ಒದಗಿಸುತ್ತದೆ. ವಿಮೆ ಯೋಜನೆ ಆರಿಸುವ ಮೊದಲು ನೀವು ವಿಮೆಯ ಕೆಲವು ಮೂಲಭೂತ ಅಂಶಗಳನ್ನು ಕಲಿಯಬೇಕು, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದುದನ್ನು ಆರಿಸಿಕೊಳ್ಳಬೇಕು. ವಿಮೆಯು ಕೇವಲ ಹಿರಿಯರಿಗೆ ಮಾತ್ರ ಅಲ್ಲ.

#image_title

9) ಲೈಫ್‌ಸ್ಟೈಲ್‌ ಬದಲಾವಣೆಗಳು

ಮಿಲೇನಿಯಲ್‌ಗಳ ಜೀವನಶೈಲಿಯು (lifestyle) ಹಿಂದಿನ ಪೀಳಿಗೆಗಿಂತ ಬಹಳ ಭಿನ್ನ. ಮಿಲೇನಿಯಲ್ಸ್ ಜೀವನದಲ್ಲಿ ಐಷಾರಾಮಿತನ ಬಯಸುತ್ತಾರೆ. ಐಷಾರಾಮಿ ಕೆಟ್ಟದ್ದಲ್ಲ. ಆದರೆ ಕೆಲವು ಜೀವನಶೈಲಿ ಹೊಂದಾಣಿಕೆಗಳು ದೀರ್ಘಾವಧಿಯಲ್ಲಿ ಗಮನಾರ್ಹ ಉಳಿತಾಯವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

10) ಕ್ರೆಡಿಟ್ ಕಾರ್ಡ್ ಬಾಕಿ ಪಾವತಿ ತಪ್ಪಿಸಬೇಡಿ

ಕ್ರೆಡಿಟ್ ಕಾರ್ಡ್‌ಗಳು ಬಳಕೆದಾರರಿಗೆ ಪಾವತಿ (credit card payment) ಮುಂದೂಡಲು ಅವಕಾಶ ನೀಡುತ್ತವೆ. ಆದರೆ ಅಷ್ಟೇ ಪ್ರಮಾಣದ ಬಡ್ಡಿಯನ್ನೂ ಕಸಿಯುತ್ತವೆ. ನಿಗದಿತ ದಿನಾಂಕದಂದು ಬಾಕಿ ಕಟ್ಟದೆ ಮುಂದೂಡಿ ಅದೇ ಹಣವನ್ನು ಇತರ ವೆಚ್ಚಗಳಿಗೆ ಬಳಸುವುದು ಅಪಾಯಕಾರಿ. ನೀವು ಹಣ ಉಳಿಬಯಸಿದ್ದರೆ ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ ಪೂರ್ಣ ಪಾವತಿ ಮಾಡಿ. ಇದರಿಂದ ಲಾಭವೆಂದರೆ, ಒಂದು, ನಿಮ್ಮ ಕ್ರೆಡಿಟ್ ಸ್ಕೋರ್‌ ಮೇಲೆ ಧನಾತ್ಮಕ ಪರಿಣಾಮ ಮತ್ತು ಎರಡನೆಯದು, ನಿಮ್ಮ ಆದಾಯ-ವೆಚ್ಚದ ಮೇಲೆ ಉತ್ತಮ ನಿಯಂತ್ರಣ.

ಇದನ್ನೂ ಓದಿ: Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!

Exit mobile version