Site icon Vistara News

Money Guide: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಬದಲು; ಒಮ್ಮೆ ಚೆಕ್‌ ಮಾಡಿಕೊಳ್ಳಿ

savings

savings

ನವ ದೆಹಲಿ: ಸ್ಥಿರ ಆದಾಯದ ಮಾರ್ಗವನ್ನು ಹುಡುಕುವವರಿಗೆ ಸಣ್ಣ ಉಳಿತಾಯ ಯೋಜನೆ (Small savings schemes) ಅತ್ಯುತ್ತಮ ಮಾರ್ಗ. ಸಾರ್ವಜನಿಕ ಭವಿಷ್ಯ ನಿಧಿ (Public provident fund), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (National savings certificates) ಮತ್ತು ಅಂಚೆ ಕಚೇರಿ ಠೇವಣಿ (Post office deposits) ಗಳನ್ನು ಒಳಗೊಂಡಿರುವ ಈ ಯೋಜನೆಗಳನ್ನು ಸರ್ಕಾರವೂ ಬೆಂಬಲಿಸುತ್ತದೆ. ಅಕ್ಟೋಬರ್‌-ಡಿಸೆಂಬರ್‌ ತ್ರೈಮಾಸಿಕದ ಬಡ್ಡಿ ದರದ ವಿವರ ಇಲ್ಲಿದೆ (Money Guide).

ಸಣ್ಣ ಉಳಿತಾಯ ಯೋಜನೆ ಎಂದರೇನು?

ನಿಯಮಿತವಾಗಿ ಉಳಿತಾಯ ಮಾಡುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸಲು ಸರ್ಕಾರ ಇದನ್ನು ಜಾರಿಗೆ ತಂದಿದೆ. ಸಣ್ಣ ಉಳಿತಾಯ ಯೋಜನೆ ಮೂರು ವಿಭಾಗಗಳನ್ನು ಹೊಂದಿದೆ-ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಮಾಸಿಕ ಆದಾಯ ಯೋಜನೆಗಳು. ಉಳಿತಾಯ ಠೇವಣಿಗಳಲ್ಲಿ 1-3 ವರ್ಷಗಳ ಟೈಮ್ ಡೆಪಾಸಿಟ್ ಮತ್ತು 5 ವರ್ಷಗಳ ರೆಕರಿಂಗ್ ಡಿಪಾಸಿಟ್‌ಗಳಿವೆ. ಜತೆಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಮತ್ತು ಕಿಸಾನ್ ವಿಕಾಸ್ ಪತ್ರದಂತಹ ಉಳಿತಾಯ ಪ್ರಮಾಣಪತ್ರಗಳಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಮಾಸಿಕ ಆದಾಯ ಯೋಜನೆ ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿದೆ.

ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರ

ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್‌-ಡಿಸೆಂಬರ್‌ ತ್ರೈಮಾಸಿಕದ ಬಡ್ಡಿ ದರ ಇಂತಿದೆ.

ಅಕ್ಟೋಬರ್‌-ಡಿಸೆಂಬರ್‌ ತ್ರೈಮಾಸಿಕದಲ್ಲಿ ಪಿಪಿಎಫ್‌, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌ಗಳ ಬಡ್ಡಿದರದಲ್ಲಿ ಸರ್ಕಾರ ಬದಲಾವಣೆ ಮಾಡಿಲ್ಲ. 5 ವರ್ಷಗಳ ರಿಕರಿಂಗ್‌ ಡೆಪಾಸಿಟ್‌ ಮೇಲಿನ ಬಡ್ಡಿದರವನ್ನು ಶೇ. 6.7ಕ್ಕೆ ಹೆಚ್ಚಿಸಲಾಗಿದೆ.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ತ್ರೈಮಾಸಿಕದ ಅವಧಿಗೆ ದರವನ್ನು ನಿರ್ಧರಿಸಲಾಗುತ್ತದೆ. ಜೂನ್ 30ರಂದು ಸರ್ಕಾರವು ಹಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿತ್ತು.

ಇದನ್ನೂ ಓದಿ: Money Guide: ಆಪತ್ಕಾಲದಲ್ಲಿ ನೆರವಾಗುವ ಆಪ್ತಮಿತ್ರ ಟರ್ಮ್‌ ಇನ್ಶೂರೆನ್ಸ್‌; ಏನಿದರ ವೈಶಿಷ್ಟ್ಯ?

2020-21ರ ಎರಡನೇ ತ್ರೈಮಾಸಿಕದಿಂದ 2022-23ರ ಎರಡನೇ ತ್ರೈಮಾಸಿಕದವರೆಗೆ ಸತತ ಒಂಬತ್ತು ತ್ರೈಮಾಸಿಕಗಳಲ್ಲಿ ಯಾವುದೇ ಬದಲಾವಣೆಯಾಗದ ನಂತರ, 2022ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version