ಬೆಂಗಳೂರು: ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದವರು ಮತ್ತು ಉತ್ತಮ ಆದಾಯಯ ಮೂಲ ಹಾಜರುಪಡಿಸುವವರಿಗೆ (Good credit score and Proof of income) ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ಆದರೆ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಗಳನ್ನು ಪರಿಗಣಿಸುವಾಗ ಬ್ಯಾಂಕ್‌ಗಳು (Banks) ಜಾಗರೂಕರಾಗಿರುತ್ತವೆ ಮತ್ತು ಅಂತಹ ಸಂದರ್ಭಗಳಲ್ಲಿ ಹೆಚ್ಚಿನ ಬಡ್ಡಿದರಗಳನ್ನು ವಿಧಿಸುತ್ತವೆ. ಜತೆಗೆ ಆದಾಯದ ಮೂಲ ಹಾಜರು ಪಡಿಸದೆ ಬ್ಯಾಂಕ್‌ನಿಂದ ಸಾಲ ಪಡೆಯುವುದು ಕಷ್ಟ. ಹಾಗಾದರೆ ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೂ, ಆದಾಯದ ಮೂಲ ಹಾಜರು ಪಡಿಸದೆ ಸಾಲವನ್ನು ಹೇಗೆ ಪಡೆಯಬಹುದು ಎನ್ನುವುದನ್ನು ಇಂದಿನ ಮನಿಗೈಡ್ (Money Guide) ವಿವರಿಸಲಿದೆ.
ಚಿನ್ನದ ಮೇಲೆ ಸಾಲ
ಆಭರಣವಾಗಿ ಮಾತ್ರವಲ್ಲದೆ ಚಿನ್ನ ಆದಾಯದ ಮೂಲವಾಗಿಯೂ ಕಷ್ಟಕಾಲದಲ್ಲಿ ನೆರವಾಗುತ್ತದೆ. ಆದ್ದರಿಂದಲೇ ಭಾರತದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಚಿನ್ನದ ಮೇಲಿನ ಸಾಲ ದುಡ್ಡಿನ ಆವಶ್ಯಕತೆಯನ್ನು ನೆರವೇರಿಸುತ್ತದೆ. ಸಾಮಾನ್ಯವಾಗಿ ಚಿನ್ನದ ಮೇಲಿನ ಸಾಲ 2ರಿಂದ 3 ದಿನಗಳಲ್ಲಿ ದೊರೆಯುತ್ತದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ (Non-banking Financial Company)ಗಳು 1.5 ಕೋಟಿ ರೂ.ಗಳವರೆಗೆ ಚಿನ್ನದ ಸಾಲವನ್ನು ನೀಡುತ್ತವೆ. ಈ ಸಾಲವನ್ನು ಪಡೆಯಲು ನಿಮ್ಮ ಚಿನ್ನದ ಆಭರಣಗಳನ್ನು ಅಡ ಇಡವಿಟ್ಟರೆ ಸಾಕು. ಬ್ಯಾಂಕ್ ಅವುಗಳನ್ನು ಸುರಕ್ಷಿತವಾಗಿ ತೆಗೆದಿರಿಸುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲವನ್ನು ಮರುಪಾವತಿ ಮಾಡುವ ಮೂಲಕ ನೀವು ಅಡವಿಟ್ಟ ಚಿನ್ನವನ್ನು ಹಿಂಪಡೆಯಬಹುದು.
ಚಿನ್ನದ ಸಾಲವು ಸುರಕ್ಷಿತ ಆಯ್ಕೆಯಾಗಿದ್ದು, ಇದಕ್ಕೆ ಸಿಬಿಲ್ ಸ್ಕೋರ್ ಅಥವಾ ಆದಾಯ ಪುರಾವೆ ಅಗತ್ಯವಿಲ್ಲ. ನಿಮ್ಮ ಅಮೂಲ್ಯವಾದ ಚಿನ್ನದ ಆಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ತಪಾಸಣೆ ಅಥವಾ ಆದಾಯ ಪರಿಶೀಲನೆಯ ಅಗತ್ಯವಿರುವುದಿಲ್ಲ. ಚಿನ್ನದ ಸಾಲಗಳು ಸಾಮಾನ್ಯವಾಗಿ 3ರಿಂದ 4 ವರ್ಷಗಳವರೆಗಿನ ಅವಧಿಗೆ ಲಭ್ಯ. ಸ್ಟ್ಯಾಂಡರ್ಡ್ ಪ್ರೊಸೆಸಿಂಗ್ ಫೀ(standard processing fee)ಯನ್ನು ಸುಮಾರು 0.5 %ರಷ್ಟು ಮತ್ತು ಒಟ್ಟು ಸಾಲದ ಮೊತ್ತದ ಮೇಲೆ ಜಿಎಎಸ್‌ಟಿಯೊಂದಿಗೆ ವಿಧಿಸಲಾಗುತ್ತದೆ.
ಬಡ್ಡಿ ದರ
ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಸಾಲವನ್ನು ಕಡಿಮೆ ಬಡ್ಡಿದರದೊಂದಿಗೆ ಒದಗಿಸಲಾಗುತ್ತದೆ. ಇದು ಸಾಮಾನ್ಯವಾಗಿ ಶೇ. 8ರಷ್ಟು ವಾರ್ಷಿಕ ದರದಲ್ಲಿ ಪ್ರಾರಂಭವಾಗುತ್ತದೆ. ಉದಾಹರಣೆಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ. 8ರಿಂದ 24ರಷ್ಟು ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ಒದಗಿಸುತ್ತದೆ. ಎಸ್‌ಬಿಐ ಚಿನ್ನದ ಮೇಲಿನ ಸಾಲದ ಬಡ್ಡಿದರ ಶೇ. 8.70ರಿಂದ 9.80 ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 8.65ರಿಂದ 9.25 ಬಡ್ಡಿದರದೊಂದಿಗೆ ಒದಗಿಸಿದರೆ ಎಚ್‌ಡಿಎಫ್‌ಸಿ ಗೋಲ್ಡ್ ಲೋನ್ ಶೇ. 11ರಿಂದ 16 ಬಡ್ಡಿದರದಲ್ಲಿ ಸಿಗುತ್ತದೆ.
ಇದನ್ನೂ ಓದಿ: Money Guide : ನಿವೃತ್ತಿ ಬಳಿಕ ಹಣದ ಚಿಂತೆ; ಈ 10 ಟಿಪ್ಸ್ ಪಾಲಿಸಿದರೆ ನೋ ಟೆನ್ಷನ್!
ಚಿನ್ನದ ಸಾಲವನ್ನು ಅತ್ಯಂತ ಮೌಲ್ಯಯುತ, ವಿಶ್ವಾಸಾರ್ಹ ಎಂದೇ ಪರಿಗಣಿಸಲಾಗುತ್ತದೆ. ಯಾಕೆಂದರೆ ಇದು ಹಲವು ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ಹೆಚ್ಚಿನ ಸಾಲದ ಮೊತ್ತ, ಕಡಿಮೆ ಬಡ್ಡಿದರ, ಸರಳ ಅರ್ಹತಾ ಮಾನದಂಡ, ತ್ವರಿತ ಸಾಲ, ಅಂತಿಮ ಬಳಕೆಯ ನಿರ್ಬಂಧಗಳಿಲ್ಲದ ಕಾರಣ, ಸುಲಭ ಮರುಪಾವತಿ ಆಯ್ಕೆಗಳವರೆಗೆ ಇದು ಸುಲಭವಾಗಿ ಕೈಗೆ ಎಟಕುವಂತಿರುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ