ಬೆಂಗಳೂರು: ಸ್ವಂತದ್ದೊಂದು ಸೂರು ಹೊಂದಿರಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ದುಬಾರಿ ದುನಿಯಾದಲ್ಲಿ ಮನೆ ಹೊಂದುವ ಈ ಕನಸನ್ನು ನನಸು ಮಾಡಬೇಕು ಎಂದರೆ ಗೃಹಸಾಲದ (Home loan) ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಪ್ರತಿ ಬ್ಯಾಂಕ್‌ನಲ್ಲಿ ಗೃಹಸಾಲದ ಬಡ್ಡಿದರ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ ಗೃಹಸಾಲ ಕೊಳ್ಳುವ ಮುನ್ನ ಯಾವೆಲ್ಲ ವಿಚಾರವನ್ನು ಗಮನಿಸಬೇಕು? ಎನ್ನುವುದನ್ನು ಇಂದಿನ ಮನಿಗೈಡ್(Money Guide)ನಲ್ಲಿ ತಜ್ಞ ಅರಬೆಟ್ಟು ವಿಶ್ವನಾಥ್ ಕಾಮತ್ ವಿವರಿಸಿದ್ದಾರೆ.
ಹೋಮ್ ಲೋನ್‌ನ ವಿಧಗಳು
ಹೋಮ್ ಲೋನ್‌ನಲ್ಲಿ ಎರಡು ವಿಧಗಳಿವೆ. ಟರ್ಮ್ ಲೋನ್(Term loan) ಮತ್ತು ಮ್ಯಾಕ್ಸ್ ಗೈನ್(Max Gain). ಒಂದು ನಿರ್ದಿಷ್ಟ ಅವಧಿಗೆ ಮಾಡುವ ಸಾಲವನ್ನು ಟರ್ಮ್ ಲೋನ್ ಎಂದು ಕರೆಯಲಾಗುತ್ತದೆ. ಇನ್ನು ಮ್ಯಾಕ್ಸ್ ಗೈನ್ ವಿಧದಲ್ಲಿಯೂ ನಿರ್ದಿಷ್ಟ ಅವಧಿಗೆ ಸಾಲ ಪಡೆಯಲಾಗುತ್ತದೆ. ಇದರಲ್ಲಿ ನೀವು ಬೇಕಾದರೆ ಅಧಿಕ ಮೊತ್ತವನ್ನು ಪಾವತಿಸಬಹುದು. ಇದರಿಂದ ಬಡ್ಡಿ ಹೊರೆ ಕಡಿಮೆಯಾಗುತ್ತದೆ ಎಂದು ವಿಶ್ವನಾಥ್ ಕಾಮತ್ ವಿವರಿಸುತ್ತಾರೆ.
ಇದನ್ನು ಗಮನಿಸಿ
ಯಾವುದೇ ಆಸ್ತಿಯನ್ನು ಖರೀದಿಸುವ ಮುನ್ನ ಅದರ ಕಾಗದ ಪತ್ರಗಳು ಸಮರ್ಪಕವಾಗಿ ಇದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಇದಕ್ಕಾಗಿ ಬ್ಯಾಂಕ್‌ನಲ್ಲಿ ಅಪ್ರೂವ್ ಲೀಗಲ್ ಅಡ್ವೈಸರ್‌ಗಳಿರುತ್ತಾರೆ. ಅವರು ಕಾಗದ ಪತ್ರಗಳನ್ನು ಪರಿಶೀಲಿಸಿ ದಾಖಲೆ ಪತ್ರ ಸರಿಯಾಗಿದೆಯಾ ಎನ್ನುವುದನ್ನು ಗಮನಿಸುತ್ತಾರೆ. ಸಮರ್ಪಕವಾಗಿ ಇಲ್ಲ ಎಂದಾದರೆ ಹೆಚ್ಚುವರಿ ಯಾವೆಲ್ಲ ದಾಖಲೆ ಬೇಕು ಎನ್ನುವುದನ್ನು ತಿಳಿಸುತ್ತಾರೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಯಾವೆಲ್ಲ ದಾಖಲೆಗಳು ಅಗತ್ಯ?
ಮದರ್ ಡಾಕ್ಯುಮೆಂಟ್ ಮುಖ್ಯ. ಅಂದರೆ ಈ ಆಸ್ತಿ ಎಲ್ಲಿಂದ ಬಂತು ಎನ್ನುವುದನ್ನು ಗಮನಿಸಲಾಗುತ್ತದೆ. ಬಳಿಕ ಸೇಲ್ ಅಗ್ರಿಮೆಂಟ್ ಮಾಡಲಾಗುತ್ತದೆ. ಮದರ್ ಡಾಕ್ಯುಮೆಂಟ್ ಇಲ್ಲದೆ ಏನು ಮಾಡಲೂ ಸಾಧ್ಯವಿಲ್ಲ. ಇದು ಸಮರ್ಪಕವಾಗಿದೆ ಎನ್ನುವುದಾದರೆ ಬಳಿಕ ವಾಲ್ಯುವೇಷನ್ ರೆಪೋರ್ಟ್ ಮಾಡಿಸಬೇಕು. ಮಾರಾಟ ಮಾಡುವವರು ಮತ್ತು ಖರೀದಿದಾರರ ಮಧ್ಯೆ ಇರುವ ಮೌಲ್ಯವನ್ನು ಬ್ಯಾಂಕ್ ಒಪ್ಪಬೇಕಾಗಿಲ್ಲ. ಹೀಗಾಗಿ ಬ್ಯಾಂಕ್‌ನವರು ಪ್ಯಾನಲ್ ವಾಲ್ಯುವರ್ ಬಳಿ ಇದನ್ನು ಪರಿಶೀಲನೆಗೆ ಒಳಪಡಿಸುತ್ತಾರೆ. ಗೈಡ್‌ಲೈನ್ ವಾಲ್ಯು, ಮಾರ್ಕೆಟ್ ವಾಲ್ಯು, ರಿಯಲೆಸಬಲ್ ವಾಲ್ಯು ಮತ್ತು ಡಿಸ್ಟ್ರೆಸ್ಡ್ ಸೇಲ್ ವಾಲ್ಯು ಮೂಲಕ ಇದನ್ನು ನಿರ್ಧರಿಸಲಾಗುತ್ತದೆ. ರಿಯಲೆಸಬಲ್ ವಾಲ್ಯುವಿನ ಶೇ. 80ರಷ್ಟು ಸಾಲ ಸಿಗುತ್ತದೆ. ಮನೆ ಖರೀದಿಸುವ/ ಕಟ್ಟುವ ಮುನ್ನ ಬಜೆಟ್ ತಯಾರಿಸುವುದು ಬಹಳ ಮುಖ್ಯ. ಸುಮಾರು 7% ರಿಜಿಸ್ಟ್ರೇಷನ್ ಚಾರ್ಜಸ್ ಬೀಳುತ್ತದೆ. ಇದನ್ನೆಲ್ಲ ಗಮನಿಸಬೇಕು ಎಂದು ವಿಶ್ವನಾಥ್ ಹೇಳುತ್ತಾರೆ.
ಹೋಮ್ ಲೋನ್ ಕೌನ್ಸಿಲರ್‌ಗಳ ಅಗತ್ಯ
ನಾವು ನೇರವಾಗಿ ಬ್ಯಾಂಕ್‌ಗೆ ಹೋಗಿ ಹೋಮ್ ಲೋನ್ ಬಗ್ಗೆ ವಿಚಾರಿಸಬಹುದು. ಅದಕ್ಕಿಂತ ಹೆಚ್ಚಾಗಿ ಇದಕ್ಕಾಗಿ ಹೋಮ್ ಲೋನ್ ಕೌನ್ಸಿಲರ್‌ಗಳ ಸಹಾಯ ಪಡೆಯಬಹುದು. ಅವರನ್ನು ಸಂಪರ್ಕಿಸಿದರೆ ಮತ್ತೆ ನೀವು ಹೋಮ್ ಲೋನ್‌ಗಾಗಿ ಓಡಾಡಬೇಕಾದ ಅಗತ್ಯವಿರುವುದಿಲ್ಲ. ಬೇಕಾದ ಎಲ್ಲ ಕೆಲಸಗಳನ್ನು ಹೋಮ್‌ಲೋನ್ ಕೌನ್ಸಿಲರ್‌ಗಳು ಮಾಡಿ ಕೊಡುತ್ತಾರೆ. ಎಲ್ಲ ಬ್ಯಾಂಕ್‌ಗಳಲ್ಲಿ ಈ ಹೋಮ್ ಲೋನ್ ಕೌನ್ಸಿಲರ್‌ಗಳಿರುತ್ತಾರೆ ಎನ್ನುತ್ತಾರೆ ವಿಶ್ವನಾಥ್.
ಇದನ್ನೂ ಓದಿ: Money Guide: ನಿಶ್ಚಿತ ಠೇವಣಿಗೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿದರ? ಇಲ್ಲಿದೆ ವಿವರ
ಇನ್ನು ಲೇಔಟ್ ವಿಚಾರದಲ್ಲೂ ಈ ಎಲ್ಲ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಎಲ್ಲ ಡಾಕ್ಯುಮೆಂಟ್ ಸಮರ್ಪಕವಾಗಿದೆಯಾ ಎನ್ನುವುದನ್ನು ಮೊದಲು ಗಮನಿಸಬೇಕು. ಲೇಔಟ್ ಪ್ಲ್ಯಾನ್, ಅದಕ್ಕೆ ಅಪ್ರೂವಲ್ ಇದೆಯಾ ಎನ್ನುವುದನ್ನು ನೋಡಬೇಕು, ಗೈಡ್‌ಲೈನ್ಸ್ ಪ್ರಕಾರ ರಸ್ತೆಗೆ ಜಾಗ ಬಿಡಲಾಗಿದೆಯಾ ಎನ್ನುವುದನ್ನು ಪರಿಶೀಲಿಸಬೇಕು. ಬ್ಯಾಂಕ್ ಅಪ್ರೂವಲ್ ಇದ್ದರೆ ಖರೀದಿಸಬಹುದು. ಯಾಕೆಂದರೆ ಅವರು ಎಲ್ಲ ಅಂಶಗಳನ್ನು ಪರಿಶೀಲಿಸಿ ಅಪ್ರೂವಲ್ ನೀಡಿರುತ್ತಾರೆ. ಬ್ಯಾಂಕ್‌ಗಳ ಬಡ್ಡಿದರದ ಮಾಹಿತಿ Cibil Score ಎನ್ನುವ ಆ್ಯಪ್‌ನಲ್ಲಿ ಲಭ್ಯವಾಗುತ್ತದೆ. ನಿಮ್ಮ ಪ್ಯಾನ್ ನಂಬರ್ ಹಾಕಿದರೆ ಎಲ್ಲ ವಿವರಗಳು ಲಭ್ಯವಾಗುತ್ತದೆ. ಗೃಹ ಸಾಲ ಹೊಂದಲು Cibil Score 600 ಇರಬೇಕು ಎಂದು ವಿಶ್ವನಾಥ್ ಹೇಳುತ್ತಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ