ಬೆಂಗಳೂರು: ಯಾವುದೇ ನಂಬರ್ ಇಲ್ಲದ ಕ್ರೆಡಿಟ್ ಕಾರ್ಡ್ (Numberless Credit Card) ಸದ್ಯದಲ್ಲೇ ಬಳಕೆಯಲ್ಲಿ ಬರಲಿದೆ. ಇದು ಭಾರತದ ಮೊದಲ ಸಂಖ್ಯಾರಹಿತ ಕ್ರೆಡಿಟ್ ಕಾರ್ಡ್ ಎನಿಸಲಿದೆ. ಭಾರತದ ದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ (Axis Bank) ಹಾಗೂ ಪ್ರಮುಖ ಫಿನ್‌ಟೆಕ್ ಸಂಸ್ಥೆ ಫೈಬ್ (Fibe fintech) ಜತೆಯಾಗಿ ಇದನ್ನು ಹೊರತರುತ್ತಿವೆ.
ಇದರಲ್ಲಿ ಕಾರ್ಡ್ ನಂಬರ್, ಸಿವಿವಿ ನಂಬರ್, ಕಾರ್ಡ್‌ದಾರರ ಹೆಸರು, ಕಾರ್ಡ್‌ನ ಡೆಡ್‌ಲೈನ್ ದಿನಾಂಕ ಯಾವುದೂ ಇರುವುದಿಲ್ಲ. ಇದು ಹೆಚ್ಚಿನ ಸುರಕ್ಷತೆ ನೀಡಲಿದೆ ಎಂಬುದು ಈ ಕಾರ್ಡ್ ನೀಡುತ್ತಿರುವವರ ವಿವರಣೆ. ಭಾರತದ ಪ್ರಮುಖ ಫಿನ್‌ಟೆಕ್‌ಗಳಲ್ಲಿ ಒಂದಾದ ಫೈಬ್ ಅನ್ನು ಹಿಂದೆ ಅರ್ಲಿ ಸ್ಯಾಲರಿ (EarlySalary) ಎಂದು ಕರೆಯಲಾಗುತ್ತಿತ್ತು. ದೇಶದ ಸ್ಮಾರ್ಟ್, ಟೆಕ್ ಸೇವಿ Gen Z ಯುವಜನತೆಗಾಗಿ ಭಾರತದ ಮೊದಲ ಸಂಖ್ಯೆಯಿಲ್ಲದ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಆಕ್ಸಿಸ್ ಜತೆಗೆ ಪಾಲುದಾರಿಕೆ ಮಾಡಿಕೊಂಡಿದೆ.
“ಈ ಸಂಖ್ಯೆರಹಿತ ಆಕ್ಸಿಸ್ ಬ್ಯಾಂಕ್ ಕಾರ್ಡ್ ನಮ್ಮ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ನಮ್ಮ ರಾಷ್ಟ್ರದ ಸ್ಮಾರ್ಟ್ ಮತ್ತು ಮಹತ್ವಾಕಾಂಕ್ಷೆಯ ಯುವಜನರನ್ನು ಸಶಕ್ತಗೊಳಿಸುವ ದೃಢವಾದ ಆರ್ಥಿಕ ಪರಿಹಾರವನ್ನು ನೀಡಲಿದೆ. ನಮ್ಮ ವ್ಯಾಪಕವಾದ ಬ್ಯಾಂಕಿಂಗ್ ಕಾರ್ಯತಂತ್ರವು ಸಂಪರ್ಕವನ್ನು ಹೆಚ್ಚಿಸುವ ಮತ್ತು ವೈವಿಧ್ಯಮಯ ಗ್ರಾಹಕರನ್ನು ಪಡೆಯವ ಗುರಿ ಹೊಂದಿದೆʼʼ ಎಂದು ಆಕ್ಸಿಸ್ ಬ್ಯಾಂಕ್‌ನ ಕಾರ್ಡ್‌ಗಳು ಮತ್ತು ಪಾವತಿಗಳ ವಿಭಾಗದ ಅಧ್ಯಕ್ಷ ಸಂಜೀವ್ ಮೋಘೆ ತಿಳಿಸಿದ್ದಾರೆ.
“Axis ಬ್ಯಾಂಕ್ ಸಹಯೋಗದೊಂದಿಗೆ ಭಾರತದ ಮೊದಲ ನಂಬರ್‌ಲೆಸ್ ಕ್ರೆಡಿಟ್ ಕಾರ್ಡ್ ಪರಿಚಯಿಸಲು ನಾವು ಬಹಳ ಸಂತೋಷಪಡುತ್ತೇವೆ. ಈ ಅಸಾಧಾರಣ ಕಾರ್ಡ್ ಭಾರತದ ಮಹತ್ವಾಕಾಂಕ್ಷೆಯ ಯುವಕರಿಗೆ ಸುರಕ್ಷಿತ ಆರ್ಥಿಕ ಪರಿಹಾರ ಒದಗಿಸಲಿದೆ. ನಮ್ಮ ಬಳಕೆದಾರರನ್ನು ಸುರಕ್ಷಿತ ಪಾವತಿ ಪರಿಸರ ವ್ಯವಸ್ಥೆಯೊಂದಿಗೆ ಸಶಕ್ತಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ಕ್ರೆಡಿಟ್ ಕಾರ್ಡ್ ಉದ್ಯಮದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲಿದೆ” ಎಂದು Fibeನ ಸಹ ಸಂಸ್ಥಾಪಕ ಮತ್ತು CEO ಅಕ್ಷಯ್ ಮೆಹ್ರೋತ್ರಾ ತಿಳಿಸಿದ್ದಾರೆ.
ಭಾರತದ ಮೊಟ್ಟಮೊದಲ ಸಂಖ್ಯೆರಹಿತ ಕ್ರೆಡಿಟ್ ಕಾರ್ಡ್‌ನ ವೈಶಿಷ್ಟ್ಯಗಳೇನು?
- ಈ ನಂಬರ್‌ಲೆಸ್ ಕ್ರೆಡಿಟ್ ಕಾರ್ಡ್ನಲ್ಲಿ ಕಾರ್ಡ್ ಸಂಖ್ಯೆ, ಕಾಋಡ್ನ ಕೊನೆಯ ದಿನಾಂಕ ಅಥವಾ CVV ಮುದ್ರಿತವಾಗದ ಕಾರಣ ಗ್ರಾಹಕರು ಹೆಚ್ಚುವರಿ ಮಟ್ಟದ ಭದ್ರತೆಯನ್ನು ಪಡೆಯುತ್ತಾರೆ. ಇದು ಸಂಪೂರ್ಣ ಭದ್ರತೆ ಮತ್ತು ಗೌಪ್ಯತೆಯನ್ನು ಖಾತ್ರಿಪಡಿಸುತ್ತದೆ. ಗ್ರಾಹಕರ ಕಾರ್ಡ್ ವಿವರಗಳ ಕಳವು ಅಪಾಯವನ್ನು ಕಡಿಮೆ ಮಾಡುತ್ತದೆ.
- ಈ ಕಾರ್ಡ್ RuPayನಿಂದ ಚಾಲಿತವಾಗಿದೆ. ಇದು ಗ್ರಾಹಕರು ಈ ಕ್ರೆಡಿಟ್ ಕಾರ್ಡ್ ಅನ್ನು UPIಗೆ ಲಿಂಕ್ ಮಾಡಲು ಅನುಮತಿಸುತ್ತದೆ.
- ಎಲ್ಲಾ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಜೊತೆಗೆ ಎಲ್ಲಾ ಆಫ್ಲೈನ್ ಸ್ಟೋರ್ಗಳಲ್ಲಿ ಕಾರ್ಡ್ ಅನ್ನು ಸ್ವೀಕರಿಸಲಾಗುತ್ತದೆ.
- ಇದು ಟ್ಯಾಪ್ ಮತ್ತು ಪೇ ವೈಶಿಷ್ಟ್ಯವನ್ನು ಸಹ ಹೆಚ್ಚುವರಿ ಅನುಕೂಲವಾಗಿ ನೀಡುತ್ತದೆ.
- ಈ ಕಾರ್ಡ್ ಶೂನ್ಯ ಆರಂಭಿಕ ಶುಲ್ಕ ಮತ್ತು ಶೂನ್ಯ ವಾರ್ಷಿಕ ಶುಲ್ಕವನ್ನು ಹೊಂದಿದೆ.
- ಎಲ್ಲಾ ರೆಸ್ಟೋರೆಂಟ್ ಅಗ್ರಿಗೇಟರ್ಗಳ ಮೂಲಕ ಆನ್‌ಲೈನ್ ಆಹಾರ ವಿತರಣೆಯ ಮೇಲೆ ಫ್ಲಾಟ್ 3% ಕ್ಯಾಶ್ಬ್ಯಾಕ್ ನೀಡುತ್ತದೆ.
- ಪ್ರಮುಖ ಸ್ಥಳೀಯ ಪ್ರಯಾಣ ಆಪ್ಗಳು, ಮನರಂಜನೆಯ ಆನ್‌ಲೈನ್ ಟಿಕೆಟ್ ಪ್ಲಾಟ್ಫಾರ್ಮ್ಗಳಲ್ಲಿ ಕ್ಯಾಶ್ಬ್ಯಾಕ್ ಕೊಡಲಿದೆ.
- ಹೆಚ್ಚುವರಿಯಾಗಿ, ಗ್ರಾಹಕರು ಎಲ್ಲಾ ಆನ್‌ಲೈನ್ ಮತ್ತು ಆಫ್ಲೈನ್ ವಹಿವಾಟುಗಳಲ್ಲಿ 1% ಕ್ಯಾಶ್ಬ್ಯಾಕ್ ಪಡೆಯುತ್ತಾರೆ.
ಇದನ್ನೂ ಓದಿ: Flipkart, Amazon Sale: ಹಬ್ಬದ ಸೀಸನ್ ಆನ್‌ಲೈನ್ ಖರೀದಿ, ಕ್ರೆಡಿಟ್ ಕಾರ್ಡ್‌ದಾರರು ತಿಳಿದುಕೊಳ್ಳಬೇಕಾದ ಸಂಗತಿಗಳು