Site icon Vistara News

Money Guide: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಭರ್ಜರಿ ಬಡ್ಡಿದರ; ಹೀಗೆ ಖಾತೆ ತೆರೆಯಿರಿ…

sukanya

sukanya

ನವದೆಹಲಿ: ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)ಯನ್ನು ಸರ್ಕಾರ ಹೆಣ್ಣು ಮಕ್ಕಳಿಗಾಗಿ ವಿಶೇಷವಾಗಿ ಜಾರಿಗೊಳಿಸಿದೆ. ಈ ಉಳಿತಾಯ ಯೋಜನೆಯನ್ನು ಬೇಟಿ ಬಚಾವೋ ಬೇಟಿ ಪಡಾವೊ (Beti Bachao Beti Padhao) ಅಭಿಯಾನದ ಭಾಗವಾಗಿ ಪರಿಚಯಿಸಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶ. ಹತ್ತು ವರ್ಷ ತುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ ಪಾಲಕರು ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಏನೆಲ್ಲ ಅನುಕೂಲಗಳಿವೆ? ಖಾತೆ ತೆರೆಯುವುದು ಹೇಗೆ? ಮುಂತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಈ ಯೋಜನೆಯಲ್ಲಿ ಕನಿಷ್ಠ 1,000 ರೂ. ಮತ್ತು ಗರಿಷ್ಠ 1,50,000 ರೂ. ಠೇವಣಿ ಇಡಬಹುದು. ಈ ಯೋಜನೆ ಮುಖಾಂತರ ಅತ್ಯುತ್ತಮ ಬಡ್ಡಿದರ ಪಡೆಯಬಹುದು. ಮಾತ್ರವಲ್ಲ ಆದಾಯ ತೆರಿಗೆಯಲ್ಲೂ ವಿನಾಯಿತಿ ಲಭ್ಯವಾಗುತ್ತದೆ. 2015ರಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹೆಣ್ಣು ಮಗುವಿನ ಹೆಸರಿನಲ್ಲಿ 15ನೇ ವರ್ಷದ ತನಕ ಹೂಡಿಕೆ ಮಾಡಬಹುದು. ಬಾಲಕಿಗೆ 18 ವರ್ಷ ಆಗುವ ತನಕ ಸುಕನ್ಯಾ ಸಮೃದ್ಧಿಯಲ್ಲಿ ಹಣ ಲಾಕ್‌ ಆಗಿರುತ್ತದೆ. ಬಳಿಕ ಶಿಕ್ಷಣ ಉದ್ದೇಶಕ್ಕೆ ಮಾತ್ರ 50% ಹಿಂಪಡೆಯಬಹುದು. 

ವೈಶಿಷ್ಟ್ಯಗಳು

ಅರ್ಹತೆ

ಇದನ್ನೂ ಓದಿ: Money Guide: ಮಕ್ಕಳಲ್ಲೂ ಇರಲಿ ಆರ್ಥಿಕ ಸಾಕ್ಷರತೆ; ಮಕ್ಕಳ ದಿನಾಚರಣೆಯಂದೇ ಇದು ಆರಂಭವಾಗಲಿ

ಖಾತೆ ಎಲ್ಲಿ ತೆರೆಯಬೇಕು?

ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ಯಾವುದೇ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್‌ಗಳ ಯಾವುದೇ ಶಾಖೆಯಲ್ಲಿ ತೆರೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಂತಾದ ಬಹುತೇಕ ಎಲ್ಲ ಸಾರ್ವಜನಿಕ ವಲಯದ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಖಾತೆ ಆರಂಭಿಸಬಹುದು. ಗಮನಿಸಬೇಕಾದ ಅಂಶ ಎಂದರೆ ಸದ್ಯ ಈ ಯೋಜನೆ ಅನಿವಾಸಿ ಭಾರತೀಯರಿಗೆ ಅನ್ವಯಿಸುವುದಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version