Site icon Vistara News

Money Guide: ನಿಶ್ಚಿತ ಠೇವಣಿಗೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿದರ? ಇಲ್ಲಿದೆ ವಿವರ

fd

fd

ನವ ದೆಹಲಿ: ಪ್ರಸ್ತುತ ದಿನಗಳಲ್ಲಿ ಉಳಿತಾಯ ಮಾಡುವತ್ತ ಎಲ್ಲರೂ ಗಮನ ಹರಿಸುವುದು ಮುಖ್ಯ. ಇದಕ್ಕೆ ಹಲವು ದಾರಿಗಳಿವೆ. ಆ ಪೈಕಿ ನಿಶ್ಚಿತ ಠೇವಣಿ (Fixed Deposits-FD) ಕೂಡ ಒಂದು. ಇದು ನಿರ್ದಿಷ್ಟ ಅವಧಿಯ ಹೂಡಿಕೆಯಾಗಿದೆ. ಒಂದೇ ಬಾರಿಗೆ ನಿಗದಿತ ಮೊತ್ತವನ್ನು ನಿಗದಿತ ಅವಧಿಗೆ ಹೂಡಿಕೆ ಮಾಡುವುದನ್ನು ನಿಶ್ಚಿತ ಠೇವಣಿ ಎಂದು ಕರೆಯಲಾಗುತ್ತದೆ. ನಿಶ್ಚಿತ ಠೇವಣಿಗೆ ಯಾವ ಬ್ಯಾಂಕ್‌, ಎಷ್ಟು ಬಡ್ಡಿ ದರ ಒದಗಿಸುತ್ತದೆ ಎನ್ನುವುದನ್ನು ಮನಿಗೈಡ್‌ (Money guide) ವಿವರಿಸಲಿದೆ.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಫ್‌ಡಿ ತೆರೆಯಲು ಭಾರತೀಯರ ಮೊದಲ ಆಯ್ಕೆ. ಇದು ಸರ್ಕಾರಿ ಬ್ಯಾಂಕ್‌ಗಳಲ್ಲಿ ಮಾಡಿದ ಒಟ್ಟು ಸ್ಥಿರ ಠೇವಣಿಗಳಲ್ಲಿ ಶೇ. 36ರಷ್ಟು ಪಾಲನ್ನು ಹೊಂದಿದೆ. 3 ವರ್ಷಗಳ ಅವಧಿಗೆ ಅತ್ಯುತ್ತಮ ಎಫ್‌ಡಿ ಬಡ್ಡಿದರಗಳನ್ನು ನೀಡುವ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ.

ಬ್ಯಾಂಕ್‌ ಆಫ್‌ ಬರೋಡಾ

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಬ್ಯಾಂಕ್‌ ಆಫ್‌ ಬರೋಡಾ ಎಫ್‌ಡಿ ಮೇಲೆ ಅತಿ ಹೆಚ್ಚಿನ ಬಡ್ಡಿ ದರ ನೀಡುತ್ತಿದೆ. ಮೂರು ವರ್ಷಗಳ ಅವಧಿಯ ಎಫ್‌ಡಿ ಮೇಲೆ 7.25% ಬಡ್ಡಿ ಒದಗಿಸುತ್ತಿದೆ. 1,00,000 ರೂ. ಹೂಡಿದರೆ 3 ವರ್ಷಗಳಿಗೆ 1.24 ಲಕ್ಷ ರೂ. ಲಭಿಸಲಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಬ್ಯಾಂಕ್‌ ಆಫ್‌ ಬರೋಡಾದ ಎಫ್‌ಡಿ ಪಾಲು 10%.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಮೂರು ವರ್ಷಗಳ ಎಫ್‌ಡಿ ಅವಧಿಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 7% ಬಡ್ಡಿ ನೀಡಲಿದೆ. ಇಲ್ಲಿ 1,00,000 ರೂ. ಹೂಡಿದರೆ ಮೂರು ವರ್ಷಗಳಿಗೆ 1.23 ಲಕ್ಷ ರೂ. ಸಿಗಲಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಪಿಎನ್‌ಬಿ ಎಫ್‌ಡಿ ಪಾಲು 10%.

ಕೆನರಾ ಬ್ಯಾಂಕ್‌

ದೇಶದ ಇನ್ನೊಂದು ಪ್ರಮುಖ ಬ್ಯಾಂಕ್‌ ಕೆನರಾ 6.8% ಬಡ್ಡಿದರ ವಿಧಿಸುತ್ತದೆ. 1,00,000 ರೂ. ಹೂಡಿದರೆ ಮೂರು ವರ್ಷಗಳಲ್ಲಿ ಆದಾಯ 1.22 ಲಕ್ಷ ರೂ. ಆಗಲಿದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಇಂಡಿಯಾ & ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಇಂಡಿಯನ್‌ ಓವರ್‌ಸೀಸ್ ಬ್ಯಾಂಕ್‌ 6.5% ಬಡ್ಡಿದರ ಒದಗಿಸುತ್ತದೆ. 1,00,000 ರೂ. ಹೂಡಿದರೆ ಮೂರು ವರ್ಷಗಳಿಗೆ 1.21 ಲಕ್ಷ ರೂ. ಆಗುತ್ತದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ದೇಶದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐ ಎಫ್‌ಡಿ ಬಡ್ಡಿದರದಲ್ಲಿ 5ನೇ ಸ್ಥಾನದಲ್ಲಿದೆ. ಎಸ್‌ಬಿಐ 6.5% ಬಡ್ಡಿದರ ಒದಗಿಸುತ್ತಿದೆ. ಎಸ್‌ಬಿಐಯಲ್ಲಿ 1,00,000 ರೂ. ಹೂಡಿಕೆ ಮಾಡಿದೆ ಮೂರು ವರ್ಷಗಳಲ್ಲಿ ಆದಾಯ 1.21 ಲಕ್ಷ ರೂ. ಆಗಲಿದೆ.

ಯುಸಿಒ ಬ್ಯಾಂಕ್‌

ಯುಸಿಒ ಬ್ಯಾಂಕ್‌ ಎಫ್‌ಡಿಗೆ 6.3% ಬಡ್ಡಿದರ ನೀಡುತ್ತಿದೆ. ಈ ಪ್ರಕಾರ 1,00,000 ರೂ. ಎಫ್‌ಡಿಯಲ್ಲಿ ಹೂಡಿಕೆ ಮಾಡಿದರೆ ಮೂರು ವರ್ಷಗಳಿಗೆ 1.21 ಲಕ್ಷ ರೂ. ಸಿಗಲಿದೆ.

ಇದನ್ನೂ ಓದಿ: Money Guide: ಪೋಸ್ಟ್‌ ಆಫೀಸ್‌ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು 9,250 ರೂ. ಗಳಿಸಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version