Site icon Vistara News

Money Guide: ಎಲ್‌ಐಸಿ ಪಾಲಿಸಿ ಪಾವತಿಸುವ ಅವಧಿ ಮೀರಿದರೆ ಚಿಂತೆ ಬಿಡಿ; ಹೀಗೆ ಪುನಃ ನವೀಕರಿಸಿ

insurence policy

insurence policy

ಬೆಂಗಳೂರು: ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿದೊಡನೆ ಉಳಿತಾಯ ಮಾಡಲು ಅರಂಭಿಸುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಅದಕ್ಕಾಗಿ ಜೀವ ವಿಮೆ (Life insurance) ಮಾಡಿಸುವುದು ಅತ್ಯುತ್ತಮ ಮಾರ್ಗ ಎಂದೇ ಪರಿಗಣಿಸಲಾಗುತ್ತದೆ. ಲೈಫ್‌ ಇನ್ಶೂರೆನ್ಸ್‌ ವಿಪತ್ತಿನ ಸಮಯದಲ್ಲಿ ಕೈ ಹಿಡಿಯುತ್ತದೆ. ನಿಮ್ಮ ಹಾಗೂ ಕುಟುಂಬದ ರಕ್ಷಣೆ ಮಾಡುತ್ತದೆ. ಹೀಗಾಗಿ ನೀವು ಸಮಯಕ್ಕೆ ಸರಿಯಾಗಿ ಪಾಲಿಸಿ ತುಂಬುವುದು ಅಗತ್ಯ. ಒಂದು ವೇಳೆ ಅನಿವಾರ್ಯ ಕಾರಣದಿಂದ ನಿಮಗೆ ಎಲ್‌ಐಸಿ ಪಾಲಿಸಿಯನ್ನು (LIC Policy) ಸಮಯಕ್ಕೆ ಸರಿಯಾಗಿ ನವೀಕರಿಸಲು ಸಾಧ್ಯವಾಗಲಿಲ್ಲ ಎಂದಾದರೆ ಚಿಂತೆ ಬಿಡಿ. ಅವಧಿ ಮೀರಿದ ಪಾಲಿಸಿಯನ್ನು ಪುನಃ ನವೀಕರಿಸುವುದು ಹೇಗೆ ಎನ್ನುವುದನ್ನು ಮನಿಗೈಡ್‌ (Money Guide) ತಿಳಿಸಲಿದೆ.

ನಿಯಮ ಏನು ಹೇಳುತ್ತದೆ?

ಪಾಲಿಸಿದಾರರು ತಮ್ಮ ಪ್ರೀಮಿಯಂಗಳನ್ನು ನಿಗದಿತ ಕಾಲಮಿತಿಯೊಳಗೆ ಪಾವತಿಸಲು ಅಸಮರ್ಥರಾದಾಗ ಅವರ ಜೀವ ವಿಮಾ ಪಾಲಿಸಿಯು ಮುಕ್ತಾಯಗೊಳ್ಳುತ್ತದೆ. ಇದರಿಂದಾಗಿ ಕವರೇಜ್ ತಾತ್ಕಾಲಿಕವಾಗಿ ನಿಷ್ಕ್ರಿಯವಾಗುತ್ತದೆ. ಈ ವಿಮಾ ರಕ್ಷಣೆಯನ್ನು ಪುನಃಸ್ಥಾಪಿಸಲು ಕಂಪನಿಗಳು ಸಾಮಾನ್ಯವಾಗಿ ಎರಡು ವರ್ಷಗಳ ಪುನರುಜ್ಜೀವನ ಸಮಯವನ್ನು ನೀಡುತ್ತವೆ. ಈ ಸಮಯದಲ್ಲಿ ಅಂದರೆ ಎರಡು ವರ್ಷಗಳಲ್ಲಿ ಪಾಲಿಸಿದಾರರು ತಮ್ಮ ಅವಧಿ ಮೀರಿದ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಬಹುದು ಮತ್ತು ಪ್ರಯೋಜನವನ್ನು ಮರಳಿ ಪಡೆಯಬಹುದು.

ಅವಧಿ ಮೀರಿದ ಪಾಲಿಸಿ ಎಂದರೇನು?

ನೀವು ಒಂದು ಜೀವ ವಿಮೆ ಮಾಡಿಸಿದ್ದೀರಿ ಎಂದರೆ ನಿರ್ದಿಷ್ಟ ಅವಧಿಗೆ, ನಿರ್ದಿಷ್ಟ ಮೊತ್ತ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಪಾವತಿಸಬೇಕಾದ ದಿನಾಂಕದಂದು ಪಾಲಿಸಿ ಮೊತ್ತವನ್ನು ಒದಗಿಸದಿದ್ದರೆ ಜೀವ ವಿಮೆ ನಿಷ್ಕ್ರಿಯವಾಗುತ್ತದೆ. ಹೀಗಾದಾಗ ಮೊದಲೇ ಹೇಳಿದಂತೆ ನೀವು ಎರಡು ವರ್ಷಗಳ ಒಳಗೆ ಮತ್ತೆ ಆ ಪಾಲಿಸಿಯನ್ನು ಮುಂದುವರಿಸಬಹುದು. ಅದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ. ಎಲ್ಲ ಪ್ರೀಮಿಯಂ ಬಾಕಿಗಳು ಮತ್ತು ಬಡ್ಡಿಯನ್ನು ಪಾವತಿಸಿದ ಪುರಾವೆಗಳನ್ನು ಕಂಪನಿಗೆ ಸಲ್ಲಿಸಿದ ನಂತರ ಯೋಜನೆಯ ನಿಬಂಧನೆಗಳಿಗೆ ಅನುಗುಣವಾಗಿ ಅವಧಿ ಮೀರಿದ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸಬಹುದು. ಎಲ್ಐಸಿಯಲ್ಲಿಯೂ ಕೂಡ ಇದು ಸಾಧ್ಯ. ಎಲ್ಐಸಿ ಅನುಮತಿಸಿದರೆ ಕೊನೆಗೊಂಡ ಪಾಲಿಸಿಯನ್ನು ಮುಂದುವರಿಸಬಹುದು.

ಇದನ್ನೂ ಓದಿ: Money Guide: ಉತ್ತಮ ಕ್ರೆಡಿಟ್‌ ಸ್ಕೋರ್‌, ಆದಾಯದ ಪುರಾವೆಗಳಿಲ್ಲದೆಯೂ ಸಾಲ ಪಡೆಯಬಹುದು; ವಿವರ ಇಲ್ಲಿದೆ

ಎಲ್‌ಐಸಿ ಪಾಲಿಸಿ ಮುಂದುವರಿಸುವ ವಿಧಾನ

ಅವಧಿ ಮೀರಿದ ಎಲ್‌ಐಸಿ ಪಾಲಿಸಿಯನ್ನು ಮುಂದುವರಿಸುವುದು ಹೇಗೆ ಎನ್ನುವುದರ ವಿವರ ಇಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version