ಮ್ಯೂಚುವಲ್ ಫಂಡ್‌ಗಳಲ್ಲಿ ನೇರವಾಗಿಯೂ ಹೂಡಿಕೆ ಮಾಡಬಹುದು. (Money plus) ಅಥವಾ ಇಂಟರ್ ಮೀಡಿಯೇಟ್ ಮೂಲಕ ಕೂಡ ರೆಗ್ಯುಲರ್ ಇನ್ವೆಸ್ಟ್‌ಮೆಂಟ್ ಅನ್ನೂ ಮಾಡಬಹುದು. ಈ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತವೆ. ಏನಿದು? ವಿಸ್ತಾರ ಮನಿ ಪ್ಲಸ್‌ನಲ್ಲಿ ನಾಲೆಡ್ಜ್ ಬೆಲ್ ಸಂಸ್ಥೆಯ ಸಿಇಒ ವಿನೋದ್ ತಂತ್ರಿ ಅವರು ಈ ಬಗ್ಗೆ ವಿವರಿಸಿದ್ದಾರೆ.
ಮ್ಯೂಚುವಲ್ ಫಂಡ್‌ಗಳಲ್ಲಿ ಎಕ್ಸ್‌ಪೆನ್ಸ್ ರೇಶಿಯೊ ಇರುತ್ತದೆ. ಅದನ್ನು ಕಮಿಶನ್ ಎಂದೂ ಕರೆಯಬಹುದು. ಅಂದರೆ ಮ್ಯೂಚುವಲ್ ಫಂಡ್ ಕಂಪನಿಗಳು ಹೂಡಿಕೆದಾರರಿಗೆ ನೀಡುವ ಸೇವೆಗೆ ಪ್ರತಿಯಾಗಿ ಪಡೆಯುವ ಶುಲ್ಕ. ನೇರವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ನೇರವಾಗಿ ಹೂಡಿಕೆ ಮಾಡಿದರೆ ನಿಮಗೆ ಆ ಎಕ್ಸ್‌ಪೆನ್ಸ್ ರೇಶಿಯೊ ಉಳಿಯುತ್ತದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು 2.5% ತನಕ ಎಕ್ಸ್‌ಪೆನ್ಸ್ ರೇಶಿಯೊ ಮಾಡಲು ಅನುಮತಿ ನೀಡುತ್ತದೆ. ನೇರವಾಗಿ ಹೂಡಿದರೆ 2.5% ಉಳಿಸಬಹುದು ಎಂದು ಭಾವಿಸಲಾಗುತ್ತದೆ. ಆದರೆ ವಾಸ್ತವವಾಗಿ ಹಾಗೆ ಆಗುವುದಿಲ್ಲ. ವಾಸ್ತವವಾಗಿ ಸೇವ್ ಮಾಡಲು ಸಾಧ್ಯವಾಗುವುದು ಕೇವಲ 0.5% ಮಾತ್ರ.
ಟಾಪ್ 5 ಮ್ಯೂಚುವಲ್ ಫಂಡ್ ಇತ್ಯಾದಿ ಘೋಷಣೆಗಳನ್ನು ಯೂಟ್ಯೂಬ್, ಬ್ಲಾಗ್‌ಗಳಲ್ಲಿ, ರೀಲ್ಸ್‌ಗಳಲ್ಲಿ ಕಂಡು ನಂಬಿ ಹೂಡಿಕೆ ಮಾಡಬಹುದೇ? ಮ್ಯೂಚುವಲ್ ಫಂಡ್ ದೀರ್ಘಕಾಲೀನ ಹೂಡಿಕೆಗೆ ಸೂಕ್ತ. ಇದು 10-15 ವರ್ಷ ಹೂಡಿಕೆಗೆ ಉತ್ತಮ. ಆರಂಭದಲ್ಲಿ ಕೆಲ ಹೂಡಿಕೆದಾರರು 6 ತಿಂಗಳು-ಒಂದು ವರ್ಷ ಹೂಡಿಕೆ ಮಾಡಿದ ಬಳಿಕ ನಿರಾಶೆಗೊಂದು ವಿತ್ ಡ್ರಾವಲ್ ಮಾಡುವುದು ಇದೆ. ಆದರೆ ಇದರಿಂದ ಕಂಪೌಂಡಿಂಗ್‌ನ ಲಾಭ ಅವರಿಗೆ ಸಿಗುವುದಿಲ್ಲ.