Site icon Vistara News

SEBI : ಹೂಡಿಕೆದಾರರ ಪರ ಸೆಬಿ ಕೈಗೊಂಡ ಮಹತ್ವದ ನಿರ್ಧಾರಗಳು ಯಾವುದು?

SEBI Imposes Fine

ಷೇರು ಮತ್ತು ಮ್ಯೂಚುವಲ್‌ ಫಂಡ್‌ ಮಾರುಕಟ್ಟೆ ನಿಯಂತ್ರಕ ಸೆಬಿಯು 1996ರಲ್ಲಿ ಆರಂಭವಾದ ಬಳಿಕ ಹೂಡಿಕೆದಾರರ ಹಿತದೃಷ್ಟಿಯಿಂದ ಕಳೆದ‌ ( SEBI ) ಹಲವಾರು ವರ್ಷಗಳಿಂದೀಚೆಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮ್ಯೂಚುವಲ್‌ ಫಂಡ್‌ ಸೇರಿದಂತೆ ಫೈನಾನ್ಷಿಯಲ್‌ ಪ್ರಾಡಕ್ಟ್‌ಗಳು ಹೆಚ್ಚು ಅಗ್ಗ, ಸರಳ, ಪಾರದರ್ಶಕ ಹಾಗೂ ಬಳಕೆದಾರರ ಸ್ನೇಹಿಯಾಗುವಂತಾಗಲು ಸೆಬಿ ಕ್ರಮಗಳನ್ನು ಕೂಗೊಂಡಿದೆ. ಏಕೆಂದರೆ ಉತ್ಪನ್ನಕ್ಕೆ ತಗಲುವ ವೆಚ್ಚವು ಹೂಡಿಕೆದಾರರಿಗೆ ಮುಖ್ಯವಾಗುತ್ತದೆ.

ಸೆಬಿಯು ಮ್ಯೂಚುವಲ್‌ ಫಂಡ್‌ ಮತ್ತು ಇತರ ಹಣಕಾಸು ಯೋಜನೆಗಳಲ್ಲಿ ಗೌಪ್ಯ ಶುಲ್ಕಗಳನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಗಿದೆ. ನಿಯಮಾವಳಿಗಳನ್ನು ಹಲವು ಸಲ ಬದಲಾಯಿಸಿತ್ತು. ಇದರಿಂದಾಗ ಒಟ್ಟಾರೆ ವೆಚ್ಚ ನಿಯಂತ್ರಣಕ್ಕೆ ಬಂದಿತ್ತು.

ಸೆಬಿಯು 2006ರಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿತು. 2006ಕ್ಕೆ ಮುನ್ನ ಮ್ಯೂಚುವಲ್‌ ಫಂಡ್‌ಗಳು ಹೊಸ ಮ್ಯೂಚುವಲ್‌ ಫಂಡ್‌ ಮಾರಾಟದ ವೇಳೆ, ನ್ಯೂ ಫಂಡ್‌ ಆಫರ್‌ (New fund offer) ಎಂದು 6% ಶುಲ್ಕವನ್ನು ಗ್ರಾಹಕರಿಂದ ಪಡೆಯುತ್ತಿದ್ದವು. ಆರಂಭದಲ್ಲಿ ಇದನ್ನು ಮಾರುಕಟ್ಟೆ ಮತ್ತು ವಿತರಣೆ ವೆಚ್ಚ ಎಂದು ಅನುಮತಿ ನೀಡಲಾಗಿತ್ತು. ಜತೆಗೆ ಫ್ರಂಟ್‌ ಲೋಡ್‌ ಶುಲ್ಕ 2.5% ಅನ್ನೂ ಸಂಗ್ರಹಿಸಲಾಗುತ್ತಿತ್ತು. ಇದನ್ನು ಸೆಬಿ ರದ್ದುಪಡಿಸಿತು.

2009ರಲ್ಲಿ ಸೆಬಿಯು ಮತ್ತೊಂದು ಸುಧಾರಣಾ ಕ್ರಮವನ್ನು ಕೈಗೊಂಡಿತು. 2.25% ಅಪ್‌ ಫ್ರಂಟ್‌ ಶುಲ್ಕವನ್ನು ಕೂಡ ರದ್ದುಪಡಿಸಿತು. ಅಲ್ಲಿಯವರೆಗೆ ಗ್ರಾಹಕರು ಹೊಸ ಮ್ಯೂಚುವಲ್‌ ಫಂಡ್‌ ಖರೀದಿಸಿದಾಗ ಅದನ್ನು ಪಾವತಿಸುತ್ತಿದ್ದರು. ಹೂಡಿಕೆದಾರರ ಹಣದಿಂದ ಇದನ್ನು ಕಳೆಯಲಾಗುತ್ತಿತ್ತು. 2013ರಲ್ಲಿ ಸೆಬಿಯು ನೇರವಾಗಿ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಅವಕಾಶ ಕೊಟ್ಟಿತು. ಏಜೆಂಟರ ಮೂಲಕವೇ ಹೋಗಬೇಕು ಎಂಬ ನಿಯಮವನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿತು. 2018ರಲ್ಲಿ ಏಜೆಂಟರ ಟ್ರಯಲ್‌ ಕಮೀಶನ್‌ ಅನ್ನೂ ರದ್ದುಪಡಿಸಿತು. 2019 ರಲ್ಲಿ ಮ್ಯೂಚುವಲ್‌ ಫಂಡ್‌ಗಳ ಖರ್ಚುವೆಚ್ಚಗಳ ಅನುಪಾತದ ಮಿತಿಯನ್ನು ಕಡಿಮೆಗೊಳಿಸಿತು.

ಇದನ್ನೂ ಓದಿ: Mutual fund : ಭಾರತದ ಮೊದಲ ಮ್ಯೂಚುವಲ್‌ ಫಂಡ್‌ 60 ವರ್ಷಗಳಲ್ಲಿ ಹೂಡಿಕೆದಾರರಿಗೆ ಕೊಟ್ಟ ಆದಾಯ ಎಷ್ಟು?

2017ರಲ್ಲಿ ಸೆಬಿಯು ಮ್ಯೂಚುವಲ್‌ ಫಂಡ್‌ಗಳನ್ನು ಲಾರ್ಜ್‌, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಎಂದು ಅವುಗಳ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಬಿಡುಗಡೆಗೊಳಿಸಿದೆ. ಅದೇ ವರ್ಷ ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳನ್ನು 36 ಕೆಟಗರಿಗಳಲ್ಲಿ ವಿಭಜಿಸಿತು. ಹೂಡಿಕೆದಾರರಿಗೆ ಯೋಜನೆಯೊಂದರ ರಿಸ್ಕ್‌ ಅನ್ನು ಅಳೆಯಲೂ ಸಹಕಾರಿಯಾಗುವಂತೆ ರಿಸ್ಕೊಮೀಟರ್‌ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ರಿಸ್ಕೊಮೀಟರ್‌ ಒಂದು ಗ್ರಾಫಿಕಲ್‌ ರೆಪ್ರೆಸಂಟೇಶನ್‌ ಆಗಿದ್ದು, ಮ್ಯೂಚುವಲ್‌ ಫಂಡ್‌ನ ರಿಸ್ಕ್‌ ಪ್ರಮಾಣವನ್ನು ಬಿಂಬಿಸುತ್ತದೆ. ಅಸೋಸಿಯೇಶನ್‌ ಆಫ್‌ ಮ್ಯೂಚುವಲ್‌ ಫಂಡ್ಸ್‌ ಇನ್‌ ಇಂಡಿಯಾ (AMFI) ಮಾರ್ಗದರ್ಶನದ ಅನ್ವಯ ರಿಸ್ಕೊಮೀಟರ್‌ ಅಳವಡಿಸಲಾಗುತ್ತದೆ. ಇದರ ಪ್ರಕಾರ ಬ್ಲೂ ಕಲರ್‌ ಇದ್ದರೆ ರಿಸ್ಕ್‌ ಕಡಿಮೆ ಎಂದರ್ಥ. ಹಳದಿ ಕಲರ್‌ ಇದ್ದರೆ ಮಧ್ಯಮ ರಿಸ್ಕ್‌ ಹಾಗೂ ಕಂದು ಬಣ್ಣ ಇದ್ದರೆ ಹೆಚ್ಚು ರಿಸ್ಕ್‌ ಇದೆ ಎಂದರ್ಥ.

Exit mobile version