ಕೃಷ್ಣ ಭಟ್ ಅಳದಂಗಡಿ- Motivational story
ಅದು ಹಿರಿಯ ಜೀವ. ವಯಸ್ಸು ಹೆಚ್ಚು ಕಡಿಮೆ 80 ಇರಬಹುದು.
ಬೆಳಗ್ಗೆ 8 ಗಂಟೆ ಹೊತ್ತಿಗೆ ಅವಸರವಾಗಿ ಡಾಕ್ಟರ್ ಚೇಂಬರ್ ಗೆ ನುಗ್ಗಿದರು. ಡಾಕ್ಟರ್.. ಆದಷ್ಟು ಬೇಗನೆ ಇದಕ್ಕೊಂದು ಡ್ರೆಸ್ಸಿಂಗ್ ಮಾಡಿಬಿಡಿ. ನಂಗೆ 9 ಗಂಟೆ ಒಳಗೆ ನರ್ಸಿಂಗ್ ಹೋಂಗೆ ಹೋಗ್ಬೇಕು.
ಎದುರು ಮಾಡಿದ ಕೈಯ ಹೆಬ್ಬೆರಳಲ್ಲಿ ರಕ್ತ ಒಸರುತ್ತಿತ್ತು. ಡಾಕ್ಟರ್ ಹೇಳಿದ್ರು: ಇಷ್ಟೊಂದು ರಕ್ತ ಬರ್ತಿದೆ. ನೀವು ಡ್ರೆಸಿಂಗ್ ಮಾಡ್ಕೊಂಡು ಮನೆಗೆ ಹೋಗಿ ರೆಸ್ಟ್ ಮಾಡಿ.
ನೀವು ಡ್ರೆಸಿಂಗ್ ಮಾಡಿ ಸರ್. ನಾನು ನರ್ಸಿಂಗ್ ಹೋಂಗೆ ಹೋಗ್ಲೇಬೇಕು ಅಂತ ಹೇಳಿ ವಾಚ್ ನೋಡುತ್ತಾ ಚಡಪಡಿಸಿದರು.
ಡಾಕ್ಟರ್ ಚಡಪಡಿಕೆ ಅರ್ಥ ಮಾಡಿಕೊಂಡು ಕೇಳಿದರು: ಯಾರಿದ್ದಾರೆ ಆಸ್ಪತ್ರೇಲಿ.
ಹೆಂಡ್ತಿ ಇದಾಳೆ ಸರ್. ಅವಳಿಗೆ ನಾನೇ ತಿಂಡಿ ತಿನಿಸ್ಬೇಕು*
ಡಾಕ್ಟರ್: ಏನು ಸಮಸ್ಯೆ?
ವೃದ್ಧ: ಅಲ್ಜೈಮರ್ಸ್-ಮರೆಯೋ ಕಾಯಿಲೆ ಇದೆ ಡಾಕ್ಟರ್.
ಡಾಕ್ಟರ್: ನಿಮ್ಮನ್ನು ಗುರುತು ಹಿಡಿತಾರಾ?
ವೃದ್ಧ: ಇಲ್ಲ ಸರ್.. ಅವಳಿಗೆ ನಾನು ಯಾರೂಂತಾನೇ ಗೊತ್ತಿಲ್ಲ. ಐದು ವರ್ಷದಿಂದ ಒಮ್ಮೆನೂ ಗುರುತು ಹಿಡಿದಿಲ್ಲ ಸರ್.
ಡಾಕ್ಟರ್: ನಿಮಗೂ ವಯಸ್ಸಾಯಿತು. ಊಟ ತಿಂಡಿ ಕೊಡೋಕೆ ಯಾರನ್ನಾದರೂ ನೇಮಿಸ್ಬೋದಲ್ವಾ? ಅವರಿಗೆ ನಿಮ್ಮ ನೆನಪೂ ಇಲ್ಲ ಅಂತೀರಿ.
ಅಜ್ಜ ಹೇಳಿದ್ರು: ಮರೆವಿನ ಕಾಯಿಲೆ ಇರುವುದು ಅವಳಿಗೆ ಡಾಕ್ಟರ್. ಆದ್ರೆ ನಂಗೆ ಇನ್ನೂ ನೆನಪುಗಳಿವೆಯಲ್ವಾ ಡಾಕ್ಟರ್.
Motivational story: ನಿಜಕ್ಕೂ ಕಿವಿ ಕೇಳಿಸದೆ ಇದ್ದುದು ಯಾರಿಗೆ? ಹೆಂಡತಿಗಾ, ಗಂಡನಿಗಾ?