ರಾಯ್ರಂಗಾಪುರ: ಮುಂದಿನ ರಾಷ್ಟ್ರಪತಿ ಹುದ್ದೆಗೆ ನಡೆಯಲಿರುವ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು, ಒಡಿಶಾದ ರಾಯ್ರಂಗಾಪುರ ನಗರದಲ್ಲಿರುವ ಜಗನ್ನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಜಾರ್ಖಂಡ್ನ ರಾಜ್ಯಪಾಲರಾಗಿದ್ದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಎನ್ಡಿಎ ಘೋಷಿಸಿದೆ.
ಈ ಹಿಂದೆಯೂ ದ್ರೌಪದಿ ಮುರ್ಮು ಅವರ ಹೆಸರು ರಾಷ್ಟ್ರಪತಿ ಪದವಿಗೆ ಕೇಳಿಬಂದಿತ್ತು. ಈ ಬಾರಿ ಅಧಿಕೃತ ಘೋಷಣೆಯಾಗಿದೆ. ಮೂಲತಃ ಒಡಿಶಾದ ಮಯೂರ್ಭಂಜ್ನ ಬುಡಕಟ್ಟು ಸಮುದಾಯದ ಹಿನ್ನೆಲೆಯ ಮುರ್ಮು ಅವರು, ಪ್ರತಿಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: ದ್ರೌಪದಿ ಮುರ್ಮು ಆಯ್ಕೆ ಮಾಸ್ಟರ್ ಸ್ಟ್ರೋಕ್ ಎಂಬುದಕ್ಕೆ ಇಲ್ಲಿವೆ 7 ಕಾರಣಗಳು