Site icon Vistara News

ಸೇನಾಪಡೆಗೆ ಯುವಜನರ ಸೇರ್ಪಡೆಗೆ ಅಗ್ನಿಪಥ್‌ ಯೋಜನೆ ಅಗತ್ಯ ಎಂದ ಲೆಫ್ಟಿನೆಂಟ್ ಜನರಲ್‌ ಅನಿಲ್‌ ಪುರಿ

lft.genarl anil puri

ನವದೆಹಲಿ: ದೇಶದ ಸೇನೆಗೆ ಯುವಶಕ್ತಿಯ ಚೈತನ್ಯವನ್ನು ತುಂಬಿ ಬಲಿಷ್ಠಗೊಳಿಸಲು ನೇಮಕಾತಿಯಲ್ಲಿ ಅಗ್ನಿಪಥ್‌ ಮಾದರಿಯ ಸುಧಾರಣೆಯ ಅಗತ್ಯ ಇದೆ. ಇದು ಬಹಳ ಕಾಲದಿಂದಲೂ ನನೆಗುದಿಯಲ್ಲಿದ್ದ ಬೇಡಿಕೆಯಾಗಿತ್ತು. ಅದೀಗ ನೆರವೇರುತ್ತಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.

” ಸೇನಾಪಡೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜವಾನರ ಸರಾಸರಿ ವಯಸ್ಸು ೩೦ ಆಗಿದೆ. ಅಧಿಕಾರಿಗಳೂ ಹಿಂದಿಗಿಂತ ವಿಳಂಬವಾಗಿ ಅಧಿಕಾರ ಪಡೆಯುತ್ತಿದ್ದಾರೆ. ಹೀಗಾಗಿ ನೇಮಕಾತಿಯ ವಿಧಾನದಲ್ಲಿ ಸಮಗ್ರ ಸುಧಾರಣೆ ತಂದು ಯುವಶಕ್ತಿಯನ್ನು ಸೇನೆಗೆ ತುಂಬಬೇಕಿದೆ ಎಂದು ಸೇನಾ ವ್ಯವಹಾರಗಳ ಹೆಚ್ಚುವರಿ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಪುರಿ ತಿಳಿಸಿದ್ದಾರೆ.

ಪ್ರತಿ ವರ್ಷ ಸೇನೆಯ ಮೂರೂ ವಿಭಾಗಗಳಿಂದಲೂ ಸರಾಸರಿ ೧೭,೬೦೦ ಮಂದಿ ತಮ್ಮ ಸೇವಾವಧಿ ಪೂರ್ಣವಾಗುವುದಕ್ಕೆ ಮೊದಲೇ ಸ್ವಯಂ ನಿವೃತ್ತರಾಗುತ್ತಾರೆ. ಅವರಲ್ಲೊಬ್ಬರೂ, ಮುಂದೇನು ಎಂದು ಭವಿಷ್ಯದ ಬಗ್ಗೆ ಪ್ರಶ್ನೆ ಕೇಳುವುದಿಲ್ಲ ಎಂದು ಅವರು ತಿಳಿಸಿದರು.

ಅಗ್ನಿವೀರರು ಸಿಯಾಚಿನ್‌ ಮತ್ತು ಇತರ ಕಡೆಗಳಲ್ಲಿ ಯೋಧರು ಈಗ ಗಳಿಸುವಷ್ಟೇ ಭತ್ಯೆಗಳನ್ನು ಗಳಿಸಲಿದ್ದಾರೆ. ಸೇವೆಯ ಷರತ್ತುಗಳಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಅವರು ಸಮರ್ಥಿಸಿದರು.

ಹುತಾತ್ಮರಾದವರ ಕುಟುಂಬಕ್ಕೆ ೧ ಕೋಟಿ ರೂ. ಪರಿಹಾರ

ಮುಂಬರುವ ೪-೫ ವರ್ಷಗಳಲ್ಲಿ ಸೇನೆಗೆ ನೇಮಕಾತಿಯಲ್ಲಿ ಸರಾಸರಿ ೫೦-೬೦,೦೦೦ ಹೆಚ್ಚಲಿದೆ. ಅಂದರೆ ೯೦,೦೦೦ದಿಂದ ೧ ಲಕ್ಷ ಲೆಕ್ಕದಲ್ಲಿ ಸೇರ್ಪಡೆಯಾಗಲಿದೆ. ರಾಷ್ಟ್ರಕ್ಕಾಗಿ ಜೀವ ತ್ಯಾಗ ಮಾಡುವ ಅಗ್ನಿವೀರರ ಕುಟುಂಬಕ್ಕೆ ೧ ಕೋಟಿ ರೂ. ಪರಿಹಾರ ಸಿಗಲಿದೆ ಎಂದು ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಪುರಿ ತಿಳಿಸಿದರು.

೧.೨೫ ಲಕ್ಷ ಅಗ್ನಿವೀರರ ನೇಮಕ

ಮೊದಲ ಹಂತದಲ್ಲಿ ೪೬,೦೦೦ ಅಗ್ನಿವೀರರ ಸೇರ್ಪಡೆಯಾದರೂ ಮುಂದೆ ೧.೨೫ ಲಕ್ಷದ ತನಕ ನೇಮಕಾತಿ ವೃದ್ಧಿಸಲಿದೆ. ಉದ್ಯೋಗಾವಕಾಶ ಸಿಗದು ಎಂಬ ಆತಂಕ ಬೇಡ ಎಂದು ಲೆಫ್ಟಿನೆಂಟ್‌ ಜನರಲ್‌ ತಿಳಿಸಿದರು.

ಇದನ್ನೂ ಓದಿ: ಅಗ್ನಿಪಥ್‌ ಹಿಂಸಾಚಾರಗಳ ಹಿಂದೆ ಕೋಚಿಂಗ್‌ ಸೆಂಟರ್‌ಗಳ ಕೈವಾಡ ಶಂಕಿಸಿದ ಬಿಹಾರದ ಪೊಲೀಸರು

Exit mobile version