Site icon Vistara News

ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದರ ಸಂಖ್ಯೆ ಈಗ ಕೇವಲ 3ಕ್ಕೆ ಇಳಿಕೆ, ಅಖಿಲೇಶ್‌ ಯಾದವ್‌ಗೆ ತೀವ್ರ ಹಿನ್ನಡೆ

akhilesh yadav

ನವದೆಹಲಿ: ಮೂರು ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ (By election) ಉತ್ತರ ಪ್ರದೇಶದ ರಾಮ್‌ ಪುರ ಮತ್ತು ಅಜಮ್‌ ಗಢ ಎರಡೂ ಕ್ಷೇತ್ರಗಳನ್ನು ಬಿಜೆಪಿ ಸಮಾಜವಾದಿ ಪಕ್ಷದ ಕೈಯಿಂದ ಕಿತ್ತುಕೊಂಡಿದೆ. ಇದರ ಪರಿಣಾಮ ಲೋಕಸಭೆಯಲ್ಲಿ ಈಗ ಎಸ್ಪಿ ಸಂಸದರ ಸಂಖ್ಯೆ ಕೇವಲ ಮೂರಕ್ಕೆ ಇಳಿದಿದೆ.

ಇದರೊಂದಿಗೆ ೨೦೨೪ರ ಲೋಕಸಭೆ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷದ ಹಾದಿ ಮತ್ತಷ್ಟು ದುರ್ಗಮವಾಗಿದೆ. ೨೦೧೭ರಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿ ಅಖಿಲೇಶ್‌ ಯಾದವ್‌ ಅಧಿಕಾರ ಚಲಾಯಿಸುತ್ತಿದ್ದಾರೆ. ಆದರೆ ಅವರ ರೀತಿ-ನೀತಿಗಳಿಗೆ ಈಗ ಪಕ್ಷದ ಒಳ-ಹೊರಗುಗಳಲ್ಲಿ ತೀವ್ರ ಟೀಕೆ ಎದುರಾಗಿದೆ. ಅಖಿಲೇಶ್‌ ಯಾದವ್‌ಗೆ ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ ಎಂದು ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು. ಅದು ಈಗ ನುಚ್ಚುನೂರಾಗಿದೆ.

ಉಪ ಚುನಾವಣೆಯಲ್ಲಿ ಅಖಿಲೇಶ್‌ ಯಾದವ್‌ ಪಕ್ಷದ ಪರ ಚುನಾವಣಾ ಪ್ರಚಾರಕ್ಕೂ ಹೋಗಿರಲಿಲ್ಲ. ಈ ಉದಾಸೀನತೆಯೇ ಪಕ್ಷದ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಉಪ ಚುನಾವಣೆಯಲ್ಲಿ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಅಖಿಲೇಶ್‌ ವಿರುದ್ಧದ ಟೀಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ: By election results: ಅಖಿಲೇಶ್‌ ಯಾದವ್‌ ಅತಿ ಆತ್ಮವಿಶ್ವಾಸವನ್ನು ಕುಟ್ಟಿ ಪುಡಿ ಮಾಡಿದ ಯೋಗಿ ಬುಲ್ಡೋಜರ್‌!

Exit mobile version