ಮಹಾರಾಷ್ಟ್ರದ ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ, 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಪತ್ತಾರೆ ಗ್ರಾಮದ ಬಳಿ ಬಸ್ ಮತ್ತು ಟ್ರಕ್ ಡಿಕ್ಕಿಯಾಗಿ ದೊಡ್ಡ ಮಟ್ಟದ ಅಪಘಾತವಾಗಿದೆ. ಇದೊಂದು ಖಾಸಗಿ ಬಸ್ ಆಗಿದ್ದು, ಥಾಣೆಯಿಂದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಹೋಗುತ್ತಿತ್ತು. ಸುಮಾರು 50 ಪ್ರಯಾಣಿಕರು ಈ ಬಸ್ನಲ್ಲಿ ಇದ್ದರು.
ಇದೀಗ ಮೃತಪಟ್ಟ 10 ಜನರಲ್ಲಿ ಐವರು ಮಹಿಳೆಯರು, ಮೂವರು ಪುರುಷರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಇನ್ನೂ 34 ಮಂದಿ ಗಾಯಗೊಂಡಿದ್ದಾರೆ. ಅವರನ್ನು ನಾಸಿಕ್ನಲ್ಲಿರುವ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆ, ಸಿನ್ನಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ಬ್ಲಾಕ್ ಆಗಿದ್ದು, ಪೊಲೀಸರು ಅದನ್ನು ತೆರವುಗೊಳಿಸುತ್ತಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಯಿಂದ ನೆರವು
ಈ ಭೀಕರ ಅಪಘಾತದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೇ, ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.
ಇದನ್ನೂ ಓದಿ: Sultanpuri Death Case | ಅಪಘಾತಕ್ಕೆ ಬಲಿಯಾದ ಅಂಜಲಿ ಸಿಂಗ್ ಮನೆಯಲ್ಲಿ ಕಳವು, ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದ ಕುಟುಂಬಸ್ಥರು