Site icon Vistara News

Nirbhaya Case | ನಿರ್ಭಯಾ ಪ್ರಕರಣಕ್ಕೆ 10 ವರ್ಷ, ದಿಲ್ಲಿಯಲ್ಲಿ ಈಗ ರೇಪ್‌ ಕೇಸ್ ಸಂಖ್ಯೆ ಎಷ್ಟು?

Nirbhaya Case @ Delhi

ನವದೆಹಲಿ: ಇಡೀ ದೇಶವನ್ನು ನಡುಗಿಸಿದ್ದ ನಿರ್ಭಯಾ(Nirbhaya Case) ಪ್ರಕರಣಕ್ಕೆ(ಡಿ.16, 2012) ಈಗ ಬರೋಬ್ಬರಿ 10 ವರ್ಷ. ಆ ಭಯಾನಕ ಅತ್ಯಾಚಾರ ಘಟನೆ ನೆನಪಿಸಿಕೊಂಡರೂ ಈಗಲೂ ಆಕ್ರೋಶ ಪುಟಿಯುತ್ತದೆ. ಅದಾಗಿ ಈ ಹತ್ತು ವರ್ಷಗಳಲ್ಲಿ ರಾಜಧಾನಿ ದಿಲ್ಲಿ ಮಹಿಳೆಯರಿಗೆ ಸುರಕ್ಷಿತವಾಗಿದೆಯೇ? ಖಂಡಿತ ಇಲ್ಲ. ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ, 2012ರಿಂದ ಈತನಕ ದಿಲ್ಲಿಯಲ್ಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಾಗಿದೆ!

ದಿಲ್ಲಿ ಪೊಲೀಸ್ ಮಾಹಿತಿಯ ಪ್ರಕಾರ, 2012ರಲ್ಲಿ 706 ರೇಪ್ ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ಹತ್ತು ವರ್ಷದಲ್ಲಿ ಅವುಗಳ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ನಿರ್ಭಯಾ ಪ್ರಕರಣದಿಂದಾಗಿ ಕಠಿಣ ಕಾನೂನು ರೂಪಿಸಲಾಯಿತಾದರೂ, ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದು ವಾಸ್ತವದ ಸಂಗತಿಯಾಗಿದೆ.

2012ರಲ್ಲಿ ದಿಲ್ಲಿಯಲ್ಲಿ ಸರಾಸರಿ ನಿತ್ಯ ಎರಡು ರೇಪ್ ಕೇಸ್ ದಾಖಲಾಗುತ್ತಿದ್ದವು. 2021ರಲ್ಲಿ ಒಟ್ಟು 2076 ಅತ್ಯಾಚಾರ ಪ್ರಕಾರಣಗಳು ದಾಖಲಾಗಿವೆ. ಹಾಗಾಗಿ, ನಿತ್ಯದ ಸರಾಸರಿ ರೇಪ್ ಕೇಸ್ ಸಂಖ್ಯೆ ಐದಕ್ಕೇರಿಕೆಯಾಗಿದೆ. ಹಾಗೆಯೇ, 2022ರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. 2022ರ ಜುಲೈ 15ರವರಗೆ ದಿಲ್ಲಿಯಲ್ಲಿ 1,100 ಪ್ರಕರಣಗಳು ದಾಖಲಾಗಿದ್ದವು. ಹಾಗಾಗಿ, ಈಗಲೂ ದಿಲ್ಲಿಯಲ್ಲಿ ಪರಿಸ್ಥಿತಿಯು ಹಾಗೆಯೇ ಉಳಿದಿದೆ ಎಂದು ಹೇಳಬಹುದು.

ಇದನ್ನೂ ಓದಿ | ವಿಸ್ತಾರ Explainer | ಏನಿದು ಡಿಜಿಟಲ್ ರೇಪ್? ಶಿಕ್ಷೆಯಾದ ದೇಶದ ಮೊದಲ ಪ್ರಕರಣ ಯಾವುದು?

Exit mobile version