Site icon Vistara News

100 ಗಂಟೆಯಲ್ಲಿ ಗಾಜಿಯಾಬಾದ್-ಅಲಿಗಢ್ ಎಕ್ಸ್‌ಪ್ರೆಸ್‌ವೇನ 100 ಕಿ.ಮೀ. ರಸ್ತೆ ನಿರ್ಮಾಣ!

Nitin Gadkari

ನವದೆಹಲಿ: ಗಾಜಿಯಾಬಾದ್-ಅಲಿಗಢ ಎಕ್ಸ್‌ಪ್ರೆಸ್‌ವೇ (Ghaziabad-Aligarh Expressway) 100 ಕಿ.ಮೀ ರಸ್ತೆಯನ್ನು 100 ಗಂಟೆ(ಹೆಚ್ಚು ಕಡಿಮೆ 4.16 ದಿನ)ಯಲ್ಲಿ ಬಿಟುಮಿನಸ್ ಕಾಂಕ್ರಿಟ್ ಮೂಲಕ ನಿರ್ಮಾಣ ಮಾಡುವ ಮೂಲಕ ಭಾರತವು ಇತಿಹಾಸವನ್ನು ಸೃಷ್ಟಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿತಿನ್ ಗಡ್ಕರಿ (Nitin Gadkari) ಅವರು, ಭಾರೀ ಜನಸಂಖ್ಯೆ ಹೊಂದಿರುವ ಎರಡು ಪ್ರದೇಶಗಳನ್ನು ಸಂಪರ್ಕಿಸುವಲ್ಲಿ 118 ಕಿ. ಮೀ ಉದ್ದದ ಗಾಜಿಯಾಬಾದ್- ಅಲಿಗಢ ಹೆದ್ದಾರಿಯ ಈ ಪಟ್ಟಿಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಈ ರಸ್ತೆಯು ಕೈಗಾರಿಕಾ ಪ್ರದೇಶಗಳು, ಕೃಷಿ ವಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿರುವ ಸ್ಥಳಗಳನ್ನು ಸಂಪರ್ಕಿಸುವ ಮೂಲಕ ಪ್ರಮುಖ ವಾಣಿಜ್ಯ ಮಾರ್ಗವಾಗಿ ಕೆಲಸ ಮಾಡುತ್ತಿದೆ. ಈ ಪ್ರದೇಶದ ಗೂಡ್ಸ್ ರವಾನೆ ಮತ್ತು ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಈ ಪ್ರಾಜೆಕ್ಟ್‌ನಲ್ಲಿ ಕೋಲ್ಡ್ ಸೆಂಟ್ರಲ್ ಪ್ಲಾಂಟ್ ರೀಸೈಕ್ಲಿಂಗ್ (CCPR) ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಸುಸ್ಥಿರತೆ ಮತ್ತು ವೆಚ್ಚ-ಪರಿಣಾಮಕಾರಿತ್ವದ ಬದ್ಧತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

ಈ ನವೀನ ಹಸಿರು ತಂತ್ರಜ್ಞಾನವು ಸುಮಾರು 20 ಲಕ್ಷ ಚದರ ಮೀಟರ್ ರಸ್ತೆ ಮೇಲ್ಮೈಯನ್ನು ಹೊಂದಿರುವ ಶೇ.90ರಷ್ಟು ಸಂಸ್ಕರಿತ ವಸ್ತುಗಳನ್ನು ಒಳಗೊಂಡಿರುತ್ತದೆ. ಹಾಗಾಗಿ, ಕಚ್ಚಾ ವಸ್ತುಗಳ ಬಳಕೆಯನ್ನು ಶೇ.10ಕ್ಕೆ ಇಳಿಸಲಾಗಿದೆ ಎಂದರು.

ಇದನ್ನು ಓದಿ: Nitin Gadkari: ಬಿಜೆಪಿ ಹೈಕಮಾಂಡ್ ಜತೆ ಮುನಿಸು, ನಿತಿನ್ ಗಡ್ಕರಿ ರಾಜಕೀಯ ನಿವೃತ್ತಿ?

ಈ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ಇಂಧನ ಬಳಕೆ ಮತ್ತು ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದೇವೆ. ಇದರಿಂದಾಗಿ ನಮ್ಮ ಇಂಗಾಲ ಪರಿಣಾಮವನ್ನು ಕಡಿಮೆ ಮಾಡಲು ಗಣನೀಯ ಕೊಡುಗೆ ನೀಡಿದ್ದೇವೆ ಎಂದು ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version