Site icon Vistara News

Explosives Found: ಪ್ರಧಾನಿ ಮೋದಿ ಹತ್ಯೆಗೆ ನಡೆಯಿತಾ ಸಂಚು? ಅವರ ರಾಜಸ್ಥಾನ ಭೇಟಿಗೂ 3 ದಿನ ಮೊದಲು ಸಾವಿರ ಕೆಜಿ ಸ್ಫೋಟಕ ಪತ್ತೆ

Explosives Found In Rajasthan

#image_title

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮೂರು ದಿನ ಬಾಕಿ ಇರುವ ಮೊದಲೇ ರಾಜಸ್ಥಾನದ ದೌಸಾದಲ್ಲಿ ಒಂದು ಸಾವಿರ ಕೆ.ಜಿ ಸ್ಫೋಟಕ (Explosives Found) ಪತ್ತೆಯಾಗಿದ್ದು, ಹಲವು ಶಂಕೆ ವ್ಯಕ್ತವಾಗಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನ ದೌಸಾ-ಸೊಹ್ನಾ ರಸ್ತೆಯ ಲೋಕಾರ್ಪಣೆಗಾಗಿ ನರೇಂದ್ರ ಮೋದಿ ಅವರು ಫೆಬ್ರವರಿ ೧೨ರಂದು ದೌಸಾಗೆ ತೆರಳಲಿದ್ದಾರೆ. ಈಗ ಇದೇ ಪ್ರದೇಶದಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಇದರಿಂದಾಗಿ ಸ್ಫೋಟಕ್ಕಾಗಿ ಭಾರಿ ಸಂಚು ರೂಪಿಸಲಾಗಿದೆ ಎಂದೇ ಹೇಳಲಾಗುತ್ತಿದೆ.

ಸದರ್‌ ಪೊಲೀಸ್‌ ಠಾಣೆ ಅಧಿಕಾರಿಗಳು ಭಂಕ್ರಿ ರಸ್ತೆಯಲ್ಲಿ ಒಂದು ಸಾವಿರ ಕೆ.ಜಿ ಸ್ಫೋಟಕಗಳನ್ನು ಪತ್ತೆಹಚ್ಚಿದ್ದಾರೆ. ಹಾಗೆಯೇ, ದೌಸಾ ನಿವಾಸಿಯಾದ ರಾಜೇಶ್‌ ಮೀನಾ ಎಂಬಾತನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೋದಿ ಅವರ ಹತ್ಯೆಗೆ ಏನಾದರೂ ಸಂಚು ರೂಪಿಸಲಾಗಿದೆಯೇ ಎಂಬ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಯಾವ ಯಾವ ಸ್ಫೋಟಕ ಪತ್ತೆ?

೬೫ ಡಿಟೊನೇಟರ್‌ಗಳು, ೩೬೦ ಜಿಲೆಟಿನ್‌ ಕಡ್ಡಿಗಳಿರುವ ೪೦ ಬಾಕ್ಸ್‌ಗಳು, ೧೩ ಕನೆಕ್ಟಿಂಗ್‌ ವೈರ್‌ಗಳು ಸೇರಿ ಎಲ್ಲ ಸ್ಫೋಟಕಗಳು ಒಂದು ಕೆ.ಜಿ ತೂಕ ಹೊಂದಿವೆ. ಬೇರೆ ಮೂಲಗಳ ಪ್ರಕಾರ, ಇಷ್ಟೂ ಸ್ಫೋಟಕಗಳು ಗಣಿಗಾರಿಕೆಗಾಗಿ ಬಳಸಲು ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಆದರೆ, ಮೋದಿ ಭೇಟಿಯ ಕಾರಣದಿಂದಾಗಿ ದೌಸಾದಲ್ಲಿ ಇನ್ನಷ್ಟು ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: PM Modi Speech In Rajya Sabha: ನೆಹರು, ಇಂದಿರಾ, ಖರ್ಗೆ, ಅಭಿವೃದ್ಧಿ; ಮೇಲ್ಮನೆಯಲ್ಲಿ ಮೋದಿ ಮಾತಿನ ಚಾಟಿ

Exit mobile version