ನವದೆಹಲಿ: ಒಂದೇ ತಿಂಗಳಲ್ಲಿ 1.1 ಕೋಟಿ ರೂಪಾಯಿ ಸಂಪಾದಿಸಿದ್ದ ಆಸ್ಟ್ರೇಲಿಯಾದ 11 ವರ್ಷದ ಹುಡುಗಿ ಪಿಕ್ಸೀ ಕರ್ಟಿಸ್ (Pixie Curtis) ಈಗ ತನ್ನ ಆನ್‌ಲೈನ್ ಸ್ಟೋರ್‌ನಿಂದ ನಿವೃತ್ತಿ ಪಡೆಯಲು ಮುಂದಾಗಿದ್ದಾಳೆ. ಶಾಲೆಯ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವುದಕ್ಕಾಗಿ ಬಿಸಿನೆಸ್‌ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನ್ಯೂಸ್.ಕಾಮ್.ಎಯು ವರದಿಯ ಪ್ರಕಾರ, ಪಿಕ್ಸಿ ಕರ್ಟಿಸ್ ಒಂದೇ ತಿಂಗಳಲ್ಲಿ 1.1 ಕೋಟಿ ರೂ. ಸಂಪಾದಿಸಿದ್ದಳು. ಆಕೆಗೆ ಚಾಲನೆ ಬರುವುದಿಲ್ಲವಾದರೂ ಆಕೆಯ ಬಳಿಕ ಮರ್ಸಿಡೀಸ್‌ನಂಥ ಐಷಾರಾಮಿ ಕಾರ್ ಕೂಡ ಇದೆ. ಪಿಕ್ಸೀಸ್ ಪಿಕ್ಸ್ ಕಂಪನಿಯ ಮೂಲಕ ಈ ಬಾಲಕಿ ಆದಾಯ ಗಳಿಸುತ್ತಾಳೆ. ಆಕೆಯ ತಾಯಿ, ಆಸ್ಟ್ರೇಲಿಯಾದ ರಾಕ್ಸಿ ಜಾಸೆಂಕೊ ಆರಂಭಿಸಿದ ಈ ಕಂಪನಿಯು ಹೇರ್ ಬೋ ಮತ್ತು ಹೆಡ್‌ಬ್ಯಾಂಡ್‌ಗಳನ್ನು ಮಾರಾಟ ಮಾಡುತ್ತದೆ.
ಪಿಕ್ಸಿ ಕರ್ಟಿಸ್ ಇನ್‌ಸ್ಟಾ ಪೋಸ್ಟ್ ಹೀಗಿದೆ…
ಇದನ್ನೂ ಓದಿ: Viral Video: ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಾಲಕಿಗೆ ರಕ್ತ ಬರುವಂತೆ ಹೊಡೆದ ಮಹಿಳೆ! ವೈರಲ್ ಆಯ್ತು ವಿಡಿಯೊ
ಸಂಕ್ಷಿಪ್ತವಾಗಿ ಹೇಳುವುದಾದರೆ, ಕಳೆದ ಕೆಲವು ತಿಂಗಳುಗಳಲ್ಲಿ ನಾವು ಕುಟುಂಬವಾಗಿ ಮುಂದುವರಿಯುವ ವ್ಯಾಪಾರ ಯೋಜನೆಗಳನ್ನು ಚರ್ಚಿಸುತ್ತಿದ್ದೇವೆ. ಮೂರು ವರ್ಷಗಳಿಂದ ಇದು ಅದ್ಭುತವಾದ ಪ್ರಯಾಣವಾಗಿದ್ದರೂ, ಪಿಕ್ಸಿ ಪ್ರೌಢಶಾಲೆಯತ್ತ ಗಮನಹರಿಸಲು ಈಗ ಸಮಯವಾಗಿದೆ. ಹಾಗಾಗಿ, ಪಿಕ್ಸಿ ಟಾಯ್ ಸ್ಟೋರ್‌ನಿಂದ ರಿಟೈರ್ ಆಗುತ್ತಿದ್ದಾಳೆ ಎಂದು ಆಕೆಯ ತಾಯಿ ರಾಕ್ಸೋ ಹೇಳಿದ್ದಾರೆ.