ಮಿರ್ಜಾಪುರ: ರಾಮನವಮಿಯಂದು ಪೂಜಿಸಿ ವಿತರಣೆ ಮಾಡಲೆಂದು 1,11,111 ಕೆ. ಜಿ ಲಡ್ಡುಗಳನ್ನು ಅಯೋಧ್ಯೆಯ ರಾಮ ಮಂದಿರಕ್ಕೆ (Ram Mandir) ಟ್ರಸ್ಟ್ ಒಂದು ಸಿದ್ದಪಡಿಸಿ ಪೂರೈಸಿದೆ. ದೇವರಾಹ ಹನ್ಸ್ ಬಾಬಾ ಟ್ರಸ್ಟ್ ನಿಂದ ಈ ಲಡ್ಡುಗಳು ವಿತರಣೆಗೊಂಡಿವೆ. ಈ ಬಗ್ಗೆ ಟ್ರಸ್ಟಿ ಅತುಲ್ ಕುಮಾರ್ ಸಕ್ಸೇನಾ ಮಾತನಾಡಿ, ದೇವರಾಹ ಹನ್ಸ್ ಬಾಬಾ ಅವರು 1,11,111 ಕೆಜಿ ಲಡ್ಡು ಪ್ರಸಾದವನ್ನು ದೇವಾಲಯಕ್ಕೆ ಕಳುಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಾಶಿ ವಿಶ್ವನಾಥ ದೇವಾಲಯ ಅಥವಾ ತಿರುಪತಿ ಬಾಲಾಜಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಪ್ರತಿ ವಾರ ಲಡ್ಡು ಪ್ರಸಾದವನ್ನು ಕಳುಹಿಸಲಾಗುತ್ತದೆ ಎಂದು ಅತುಲ್ ಕುಮಾರ್ ಸಕ್ಸೇನಾ ಇದೇ ವೇಳೆ ಹೇಳಿದ್ದಾರೆ ಅಯೋಧ್ಯೆಯ ಪ್ರಾಣ ಪ್ರತಿಷ್ಠಾ ದಿನವಾದ ಜನವರಿ 22 ರಂದು ದೇವರಾಹ ಹನ್ಸ್ ಬಾಬಾ ಆಶ್ರಮವು 40,000 ಕೆಜಿ ಲಡ್ಡುವನ್ನು ಅರ್ಪಣೆಗಾಗಿ ಕಳುಹಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Ayodhya Ram mandir: ಅಯೋಧ್ಯೆ ರಾಮ ಮಂದಿರದಲ್ಲಿ ಫೈರಿಂಗ್, ಕಮಾಂಡೋ ಸ್ಥಿತಿ ಗಂಭೀರ; ಏನಾಯಿತು?
ಅಯೋಧ್ಯೆ ರಾಮ ಮಂದಿರಕ್ಕೆ ಬರಬೇಡಿ ಎಂದ ಪೇಜಾವರ ಶ್ರೀ
ವಿಜಯಪುರ: ಈ ಬಾರಿ ಶ್ರೀ ರಾಮ ನವಮಿಯಂದು ಅಯೋಧ್ಯೆ ರಾಮ ಮಂದಿರಕ್ಕೆ ಬರಬೇಡಿ ಎಂದು ಭಕ್ತರಲ್ಲಿ ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ. ರಾಮ ನವಮಿ (ಏ.17) ಹಿನ್ನೆಲೆಯಲ್ಲಿ ಅಯೋಧ್ಯೆಗೆ ಕೋಟ್ಯಂತರ ಭಕ್ತರು ಆಗಮಿಸುವುದರಿಂದ ಜನದಟ್ಟಣೆ ಹೆಚ್ಚಾಗಲಿದೆ. ಹೀಗಾಗಿ ತಮ್ಮ ತಮ್ಮ ಊರುಗಳಲ್ಲೇ ಭಕ್ತರು ರಾಮ ನವಮಿ ಆಚರಿಸಬೇಕು ಎಂದು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.
ನಗರದ ಕೃಷ್ಣ ಮಠದಲ್ಲಿ ಮಾತನಾಡಿದ ಅವರು, ರಾಮ ನವಮಿಗೆ ಅಯೋಧ್ಯೆಗೆ ಭಕ್ತರು ಬಂದಲ್ಲಿ ದರ್ಶನಕ್ಕೆ ತೊಂದರೆಯಾಗಲಿದೆ. ಹೀಗಾಗಿ ತಮ್ಮ ಊರಿನ ಮಂದಿರ, ಮನೆಗಳಲ್ಲೇ ರಾಮ ನವಮಿ ಆಚರಿಸಿ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.
ಈಗಲೇ ಪ್ರತಿ ಗಂಟೆಗೆ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ. ರಾಮನವಮಿಗೆ ಮತ್ತಷ್ಟು ಭಕ್ತರು ಆಗಮಿಸಿದಲ್ಲಿ ತೊಂದರೆ ಉಂಟಾಗಲಿದೆ. ಅದ್ದರಿಂದ ನಿಮ್ಮ ಊರುಗಳು, ಮಂದಿರಗಳಲ್ಲೆ ರಾಮ ನವಮಿ ಆಚರಿಸಿ ಎಂದು ಪೇಜಾವರ ಶ್ರೀಗಳು ಕೋರಿದ್ದಾರೆ.