ನವದೆಹಲಿ: ಗುಜರಾತ್‌ನಲ್ಲಿ ಭಾನುವಾರ ಸಂಜೆ ಸಂಭವಿಸಿದ ಮೋರ್ಬಿ ಸೇತುವೆ ದುರಂತದಲ್ಲಿ (Morbi Bridge Collapse) ರಾಜಕೋಟ್‌ನ ಬಿಜೆಪಿಯ ಸಂಸದ ಮೋಹನಭಾಯಿ ಕಲ್ಯಾಣಜೀ ಕುಂದರಿಯಾ ಕುಟುಂಬದ 12 ಜನರು ಸಾವಿಗೀಡಾಗಿದ್ದಾರೆ. ಐದು ಮಕ್ಕಳು ಸೇರಿದಂತೆ ನನ್ನ ಸಹೋದರಿಯ ಕುಟುಂಬದ ಸದಸ್ಯರನ್ನು ನಾನು ಕಳೆದುಕೊಂಡಿದ್ದೇನೆ ಎಂದು ಸಂಸದ ಕುಂದರಿಯಾ ಅವರು ಮಾಹಿತಿ ನೀಡಿದ್ದಾರೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯ ಆಡಳಿತವು ಶೋಧ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಕೈಗೊಂಡಿದೆ. ಈ ಘಟನೆಯಲ್ಲಿ ಬದುಕುಳಿದವರನ್ನು ರಕ್ಷಿಸಲಾಗುತ್ತಿದೆ. ಮಚ್ಚು ನದಿಯಲ್ಲಿ ಶವಗಳನ್ನು ಹೊರೆ ತೆಗೆಯಲು ಬೋಟ್‌ಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
40 ಮಕ್ಕಳು ಸೇರಿದಂತೆ ಮೃತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಈ ದುರ್ಘಟನೆ ಸಂಬಂಧ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ. ಈ ದುರ್ಘಟನೆ ಹೇಗೆ ಸಂಭವಿಸಿತು ಎಂಬುದು ಬಳಿಕ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು. ಈ ವರೆಗೂ 60ಕ್ಕೂ ಹೆಚ್ಚು ಶವಗಳನ್ನು ಹೊರ ತೆಗೆಯಲಾಗಿದೆ.
ಇದನ್ನೂ ಓದಿ | Morbi Bridge Collapse | ಸೇತುವೆ ಕುಸಿತ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ, ಮೋದಿ ಕಾರ್ಯಕ್ರಮ ರದ್ದು, ಸಾವಿನ ಸಂಖ್ಯೆ 91