Site icon Vistara News

Rajya Sabha: ರಾಜ್ಯಸಭೆಯ ಶೇ.12 ಸದಸ್ಯರು ಕೋಟ್ಯಧಿಪತಿಗಳು! ಯಾರ ವಿರುದ್ಧ ಕ್ರಿಮಿನಲ್ ಕೇಸ್‌ಗಳಿವೆ?

Rajya Sabha

ನವದೆಹಲಿ: ರಾಜ್ಯಸಭೆಯ (Rajya Sabha) ಹಾಲಿ ಸದಸ್ಯರ ಪೈಕಿ ಒಟ್ಟು ಶೇ.12ರಷ್ಟು ಸದಸ್ಯರು ಕೋಟ್ಯಧಿಪತಿಗಳಾಗಿದ್ದಾರೆ(billionaire MPs). ಈ ಪೈಕಿ, ಆಂಧ್ರ ಪ್ರದೇಶ (Andhra Pradesh) ಮತ್ತು ತೆಲಂಗಾಣದ (Telangana State) ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(Association for Democratic Reforms – ADR) ಮತ್ತು ನ್ಯಾಷನಲ್ ಎಲೆಕ್ಷ್ ವಾಚ್ (National Election Watch – NEW) ಈ ಮಾಹಿತಿಯನ್ನು ಹೊರ ಹಾಕಿದೆ. 225 ಸದಸ್ಯರ ಪೈಕಿ 233 ಸದಸ್ಯರ ಕ್ರಿಮಿನಲ್ (Criminal), ಫೈನಾನ್ಷಿಯಲ್ (Financial) ಮತ್ತು ಅವರ ಇತರ ಹಿನ್ನೆಲೆಗಳನ್ನು ವಿಶ್ಲೇಷಿ ಈ ವರದಿಯನ್ನು ತಯಾರಿಸಲಾಗಿದೆ. ಪ್ರಸಕ್ತ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿಯಿದೆ.

ವರದಿಯ ಪ್ರಕಾರ, ಆಂಧ್ರಪ್ರದೇಶದ 11 ಸಂಸದರಲ್ಲಿ 5 (ಶೇ. 45), ತೆಲಂಗಾಣದ 7 ಸಂಸದರಲ್ಲಿ 3 (ಶೇ. 43), ಮಹಾರಾಷ್ಟ್ರದ 19 ಸಂಸದರಲ್ಲಿ 3 (ಶೇ. 16), 1 (ಶೇ. 33) ದೆಹಲಿಯ 3 ಸಂಸದರಲ್ಲಿ 2 (ಶೇ. 29), ಪಂಜಾಬ್‌ನ 7 ಸಂಸದರಲ್ಲಿ 2 (ಶೇ. 29), ಹರಿಯಾಣದ 5 ಸಂಸದರಲ್ಲಿ 1 (ಶೇ. 20) ಮತ್ತು ಮಧ್ಯಪ್ರದೇಶದ 11 ಸಂಸದರಲ್ಲಿ 2 (ಶೇ. 18) ಆಸ್ತಿ ಘೋಷಿಸಿದ್ದು, 100 ಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ತೆಲಂಗಾಣದ 7 ಸದಸ್ಯರ ಆಸ್ತಿ ಮೌಲ್ಯ 5,596 ರೂ. ಇದ್ದರೆ, ಆಂಧ್ರಪ್ರದೇಶದ 11 ಸಂಸದರ ಆಸ್ತಿ ಮೌಲ್ಯ 3,823 ಕೋಟಿ ರೂ. ಇದೆ. ಇನ್ನು ಉತ್ತರ ಪ್ರದೇಶ 30 ರಾಜ್ಯಸಭೆ ಸದಸ್ಯರ ಒಟ್ಟು ಆಸ್ತಿ 1,941 ಕೋಟಿ ರೂಪಾಯಿ ಆಗಿದೆ ಎಂದು ವರದಿಯಲ್ಲ ತಿಳಿಸಲಾಗಿದೆ.

ಶೇ.33 ಸಂಸದರ ವಿರುದ್ಧ ಕ್ರಿಮಿನಲ್ ಕೇಸ್

ವರದಿಯ ಪ್ರಕಾರ, ರಾಜ್ಯಸಭೆಯ ಹಾಲಿ 225 ಸದಸ್ಯರ ಪೈಕಿ 75(ಶೇ.33) ಸದಸ್ಯರು ತಮ್ಮ ವಿರುದ್ಧ ಕ್ರಿಮಿನಿಲ್ ಪ್ರಕರಣಗಳ ಮಾಹಿತಿಯನ್ನು ನೀಡಿದ್ದಾರೆ. ರಾಜ್ಯಸಭೆಯ ಸದಸ್ಯರು ಪೈಕಿ 41 (ಶೇ.18) ಸದಸ್ಯರು ಗಂಭೀರ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದರೆ, ಈ ಪೈಕಿ ಇಬ್ಬರು ಸದಸ್ಯರು ಕೊಲೆ ಸಂಬಂಧಿ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಇನ್ನು ನಾಲ್ವರು ತಮ್ಮ ವಿರುದ್ಧ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಪೈಕಿ ಹಾಲಿ ರಾಜ್ಯಸಭಾ ಸದಸ್ಯ, ರಾಜಸ್ಥಾನದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಕೆ ಸಿ ವೇಣುಗೋಪಾಲ್ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Vistara Explainer: 3 ವಿಧೇಯಕ ಮಂಡಿಸಿದ ಅಮಿತ್ ಶಾ, ಬಿಲ್ ಕಾನೂನು ಆಗಿ ಬದಲಾಗುವುದು ಹೇಗೆ? ಮುಂದೇನಾಗುತ್ತದೆ?

ಯಾವ ಪಕ್ಷದಲ್ಲಿ ಎಷ್ಟು ಕ್ರಿಮಿನಲ್‌ಗಳು?

ಬಿಜೆಪಿಯ 85 ಸದಸ್ಯರ ಪೈಕಿ 23 (ಶೇ.27) ಸದಸ್ಯರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಕಾಂಗ್ರೆಸ್‌ನ 30 ಸದಸ್ಯರ ಪೈಕಿ 12(ಶೇ.40) ಸದಸ್ಯರು, ತೃಣಮೂಲ ಕಾಂಗ್ರೆಸ್‌‌ ಪಕ್ಷದ 13 ಸದಸ್ಯರ ಪೈಕಿ 4(ಶೇ.31), ಆರ್‌ಜೆಡಿಯ 6 ಸದಸ್ಯರ ಪೈಕಿ 5 (ಶೇ.83), ಸಿಪಿಎಂನ 5 ಸದಸ್ಯರ ಪೈಕಿ 4, ಆಪ್‌ನ ಹತ್ತು ಸದಸ್ಯರ ಪೈಕಿ ಮೂರು, ವೈಎಸ್‌ಆರ್‌ಪಿಯ 9 ಸದಸ್ಯರ ಪೈಕಿ 3, ಎನ್‌ಸಿಪಿಯ ಮೂವರು ಸದಸ್ಯರ ಪೈಕಿ ಇಬ್ಬರು ತಮ್ಮ ವಿರುದ್ದ ಕ್ರಿಮಿನಲ್‌ ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ.

Exit mobile version