Site icon Vistara News

ಸಹೋದರನಿಂದಲೇ ಗರ್ಭಿಣಿಯಾದ 12 ವರ್ಷದ ಬಾಲಕಿ; ಗರ್ಭಪಾತಕ್ಕೆ ಕೋರ್ಟ್‌ ನಕಾರ

Abortion Law

12-year-old Gets Pregnant With Minor Brother's Baby, HC Denies Abortion Request

ತಿರುವನಂತಪುರಂ: ಕೇರಳದಲ್ಲಿ 12 ವರ್ಷದ ಬಾಲಕಿಯೊಬ್ಬಳು ಸಹೋದರನಿಂದಲೇ ಗರ್ಭಿಣಿಯಾದ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಬಾಲಕಿಯ ಗರ್ಭಪಾತಕ್ಕೆ ಕೇರಳ ಹೈಕೋರ್ಟ್‌ ನಕಾರ (Kerala High Court) ವ್ಯಕ್ತಪಡಿಸಿದ್ದು, ಈಗ ಪೋಷಕರು ಚಿಂತೆಗೀಡಾಗಿದ್ದಾರೆ. ಬಾಲಕಿ ಹಾಗೂ ಆಕೆಯ ಸಹೋದರನು ಲೈಂಗಿಕ ಸಂಪರ್ಕ (Incestual Relationship) ಹೊಂದಿದ್ದು, ಇದರಿಂದಾಗಿ ಬಾಲಕಿಯು ಗರ್ಭಿಣಿಯಾಗಿದ್ದಾಳೆ. ಕೇರಳದ ಅತಿ ವಿರಳ ಪ್ರಕರಣಗಳಲ್ಲಿ ಇದು ಕೂಡ ಒಂದಾಗಿದ್ದು, ಗರ್ಭಪಾತಕ್ಕೆ (Abortion) ಅವಕಾಶ ಕೊಡಬೇಕು ಎಂದು ಪೋಷಕರು ಮನವಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಹೈಕೋರ್ಟ್‌ ನಿರಾಕರಿಸಿದೆ.

“ಬಾಲಕಿ ಗರ್ಭ ಧರಿಸಿ 34 ವಾರ ಆಗಿವೆ. ಈಗಾಗಲೇ ಹೊರಗಿನ ಜಗತ್ತಿನಲ್ಲಿ ಜೀವಿಸಲು ಗರ್ಭದಲ್ಲಿಯೇ ಮಗು ಸಿದ್ಧವಾಗುತ್ತಿದೆ. ಬಾಲಕಿಯ ಆರೋಗ್ಯವೂ ಚೆನ್ನಾಗಿರುವುದರಿಂದ ಮಗು ಜನಿಸಲು ಅರ್ಹವಾಗಿದೆ. ಹಾಗಾಗಿ, ಮಗು ಹುಟ್ಟುವುದನ್ನು ತಡೆಯಲು ಆಗುವುದಿಲ್ಲ. ಯಾವುದೇ ಕಾರಣಕ್ಕೂ ಬಾಲಕಿಯ ಗರ್ಭಪಾತ ಮಾಡಲು ಅನುಮತಿ ಕೊಡುವುದಿಲ್ಲ” ಎಂದು ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ದೇವನ್‌ ರಾಮಚಂದ್ರನ್‌ ಹೇಳಿದರು. ಆ ಮೂಲಕ ಬಾಲಕಿಯ ಪೋಷಕರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದರು.

ವೈದ್ಯಕೀಯ ವರದಿ ಏನು ಹೇಳಿತ್ತು?

ಗರ್ಭ ಧರಿಸಿದ ಬಾಲಕಿಯ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಾಲಕಿಯ ಗರ್ಭಪಾತವನ್ನು ಮಾಡಬಹುದಾಗಿದೆ. ಇದರಿಂದ ಆಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಮಗುವನ್ನು ಹೆರಲು ಬಾಲಕಿ ಸಮರ್ಥಳಾಗಿದ್ದಾಳೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದರಿಂದಾಗಿ ನ್ಯಾಯಾಲಯವು ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ. ಬಾಲಕಿ ಜತೆ ಸಂಬಂಧ ಹೊಂದಿದ್ದವನು ಕೂಡ ಅಪ್ರಾಪ್ತನಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Abortion law : ಅತ್ಯಾಚಾರ ಸಂತ್ರಸ್ತ ಹೆಣ್ಮಕ್ಕಳಿಗೆ ಗರ್ಭಪಾತದ ಹಕ್ಕಿದೆ ಎಂದ ಹೈಕೋರ್ಟ್‌

ಪೋಷಕರ ವಾದವೇನು?

ನ್ಯಾಯಾಲಯದಲ್ಲಿ ಬಾಲಕಿಯ ಪೋಷಕರ ಪರ ವಾದ ಮಂಡಿಸಿದ ವಕೀಲರು, “ಬಾಲಕಿಯು 12 ವರ್ಷದವಳಾದ ಕಾರಣ ಆಕೆಯ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ. ಬಾಲಕಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಗರ್ಭಪಾತಕ್ಕೆ ಅನುಮತಿ ನೀಡಬೇಕು” ಎಂದು ಮನವಿ ಮಾಡಿದರು. ಇದನ್ನು ನಿರಾಕರಿಸಿದ ನ್ಯಾಯಾಲಯವು, “ಬಾಲಕಿಯನ್ನು ಕಸ್ಟಡಿಗೆ ನೀಡಲಾಗುತ್ತದೆ. ಪೋಷಕರು ಅಲ್ಲಿಯೇ ಬಾಲಕಿಯ ಆರೈಕೆ ಮಾಡಬೇಕು. ಬಾಲಕನು ಈಕೆಯ ಸಮೀಪ ಕೂಡ ಸುಳಿಯದಂತೆ ನೋಡಿಕೊಳ್ಳಬೇಕು” ಎಂದು ನ್ಯಾಯಾಲಯ ತಿಳಿಸಿತು. ಕಳೆದ ಏಪ್ರಿಲ್‌ನಲ್ಲಿಯೂ ಕೇರಳ ನ್ಯಾಯಾಲಯವು 12 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿರಲಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version