Site icon Vistara News

EPIC Study Report: ವಾಯು ಮಾಲಿನ್ಯದಿಂದಾಗಿ ದಿಲ್ಲಿ ನಿವಾಸಿಗಳ ಆಯುಷ್ಯದಲ್ಲಿ 12 ವರ್ಷ ನಷ್ಟ!

New Delhi Air pollution

ನವದೆಹಲಿ: ದೆಹಲಿಯಲ್ಲಿ ವಾಸಿಸುವ ಜನರು (People of New Delhi) ವಾಯುಮಾಲಿನ್ಯದಿಂದಾಗಿ (Air pollution) ತಮ್ಮ ಜೀವನದ ಸುಮಾರು 12 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ! (Span of human life) ಈ ಸುದ್ದಿಯನ್ನು ನಂಬಲು ಅಸಾಧ್ಯ ಎನಿಸಿದರೂ ನಿಜ. ದಿಲ್ಲಿಯ ಉಪನಗರಗಳಾದ ನೋಯ್ಡಾ (Noida) ಹಾಗೂ ಗುರುಗ್ರಾಮಗಳಲ್ಲಿ (Gurugram) ವಾಸಿಸುವ ಜನರ ಆಯುಷ್ಯದಲ್ಲಿ ಸುಮಾರು 11 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆಂದು ಜಾಗತಿಕ ಅಧ್ಯಯನ ವರದಿಯು (EPIC Study Report) ತಿಳಿಸಿದೆ. ಜಗತ್ತಿನ ಅತ್ಯಂತ ಕಲುಷಿತ ಮೆಟ್ರೋ ನಗರಗಳ ಪೈಕಿ ದಿಲ್ಲಿ ಕೂಡ ಒಂದಾಗಿದೆ.

ಸರಾಸರಿ ದೆಹಲಿ ನಿವಾಸಿಗಳು ತಮ್ಮ ಜೀವನದ ಸರಾಸರಿ 11.9 ವರ್ಷಗಳನ್ನು ವಾಯುಮಾಲಿನ್ಯದಿಂದ ಕಳೆದುಕೊಳ್ಳಬಹುದು ಎಂದು ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ (EPIC)ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ 2023 ವರದಿ ಹೇಳಿದೆ.

245 ದೇಶಗಳು ಮತ್ತು ಪ್ರದೇಶಗಳ ಜಾಗತಿಕವಾಗಿ ಜೀವಿತಾವಧಿಯಲ್ಲಿನ ನಷ್ಟವನ್ನು ಲೆಕ್ಕಹಾಕಿರುವ ವರದಿಯು, ಭಾರತದ ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ದಾಖಲಾದ ವಾರ್ಷಿಕ ಸರಾಸರಿ PM2.5 ಮಟ್ಟವನ್ನು ವಿಶ್ಲೇಷಿಸಿದೆ. ಈ ಅಧ್ಯಯನಕ್ಕೆ 2021 ಅನ್ನು ಮೂಲ ವರ್ಷವಾಗಿ ತೆಗೆದುಕೊಳ್ಳಲಾಗಿದೆ. ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಷ್ಟು (µg/m3) 2.5 ಮೈಕ್ರಾನ್‌ಗಳಷ್ಟು (PM2.5) ದಪ್ಪವಿರುವ ಕಣಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಮಾನದಂಡದೊಂದಿಗೆ ಮಾಹಿತಿಯನ್ನು ಹೋಲಿಕೆ ಮಾಡಲಾಗಿದೆ ಎಂದು ವರದಿಯು ತಿಳಿಸಿದೆ.

ದೇಶದ ಅತ್ಯಂತ ಕಲುಷಿತ ಪ್ರದೇಶಗಳ ಪೈಕಿ ರಾಷ್ಟ್ರ ರಾಜಧಾನಿ ಪ್ರದೇಶ (NCR) ಒಂದಾಗಿದೆ. ಇಲ್ಲಿ ವಾಸಿಸುತ್ತಿರುವ ನಾಗರಿಕರ ಮೇಲೆ ವಾಯು ಮಾಲಿನ್ಯ ಹೆಚ್ಚು ಪ್ರಭಾವ ಬೀರುತ್ತಿದೆ ಎಂದು ಎಪಿಕ್ ವರದಿ ಹೇಳಿದೆ. ಕಳೆದ ವರ್ಷದ ಅಧ್ಯಯನದ ವರದಿಯಲ್ಲಿ ದಿಲ್ಲಿ ನಾಗರಿಕರು, ಈ ವಾಯು ಮಾಲಿನ್ಯದ ಕಾರಣದಿಂದಾಗಿ ತಮ್ಮ ಜೀವಿತಾವಧಿಯಲ್ಲಿ 10.1 ವರ್ಷಗಳನ್ನು ನಷ್ಟ ಮಾಡಿಕೊಳ್ಳುತ್ತಿದ್ದರು. ಅದೀಗ ಆಲ್ಮೋಲ್ಟ್ 12 ವರ್ಷಕ್ಕೆ ಏರಿಕೆಯಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಕೋವಿಡ್-19 ಕಾರಣದಿಂದಾಗಿ 2020ರಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಪರಿಣಾಮ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿದ್ದವು.

ಯಾವ ರಾಜ್ಯದಲ್ಲಿ ಹೆಚ್ಚು ವಾಯು ಮಾಲಿನ್ಯ?

ವಾಯು ಮಾಲಿನ್ಯ ಕಾರಣದಿಂದಾಗಿ ಭಾರತದಲ್ಲಿನ ನಾಗರಿಕರ ಸರಾಸರಿ ಜೀವಿತಾವಧಿ ನಷ್ಟವು 5.3 ವರ್ಷಗಳಿಷ್ಟಿದೆ. ರಾಜ್ಯವಾರು ಹೇಳುವುದಾದರೆ, ಉತ್ತರ ಪ್ರದೇಶವು ಅತಿ ಹೆಚ್ಚು ಮಾಲಿನ್ಯ ರಾಜ್ಯವಾಗಿದ್ದು, ಇಲ್ಲಿ ಸರಾಸರಿ ಜೀವಿತಾವಧಿ ನಷ್ಟವು 8.8 ವರ್ಷಗಳಷ್ಟಿದ್ದು, ನಂತರ ಸ್ಥಾನದಲ್ಲಿ ಹರ್ಯಾಣ(8.3 ವರ್ಷಗಳು) ರಾಜ್ಯವಿದೆ.

ಈ ಸುದ್ದಿಯನ್ನೂ ಓದಿ: ವಾಯು ಮಾಲಿನ್ಯ ಎಂಬ ಸೈಲೆಂಟ್‌ ಕಿಲ್ಲರ್ ವರ್ಷಕ್ಕೆ 23 ಲಕ್ಷ ಭಾರತೀಯರು ಬಲಿ

ಭಾರತದ ಅತ್ಯಂತ ಕಲುಷಿತ ಪ್ರದೇಶವೆಂದರೆ ಉತ್ತರದ ಬಯಲು ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಭಾರತದ 50 ಕೋಟಿಗೂ ಅಧಿಕ ಜನರು ವಾಸವಾಗಿದ್ದು, ದೇಶದ ಒಟ್ಟು ಜನಸಂಖ್ಯೆ ಶೇ.38.9 ಜನರು ಇಲ್ಲೇ ಇದ್ದಾರೆ. ಹಾಗೆಯೇ ಮಾಲಿನ್ಯದ ಪ್ರಮಾಣವೂ ಅಧಿಕವಾಗಿದೆ. ಪರಿಣಾಮ ಇಲ್ಲಿನ ಜನರು ತಮ್ಮ ಜೀವಿತಾವಧಿಯಲ್ಲಿ 8 ವರ್ಷಗಳ ನಷ್ಟದಲ್ಲಿದ್ದಾರೆ ಎಂದು ಎಪಿಕ್ ವರದಿ ಹೇಳಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version