ಮುಂಬಯಿ: ಇಲ್ಲಿನ ಗಿರ್ಗಾಂವ್ನ ಗೋಡೌನ್ವೊಂದರ ಬಳಿ ಇದ್ದ ಸುಮಾರು 14 ವಾಹನಗಳು ಸುಟ್ಟು ಭಸ್ಮವಾಗಿವೆ. ಅದರಲ್ಲಿ ಆರು ಕಾರುಗಳು ಮತ್ತು ಏಳು ಬೈಕ್ಗಳು ಸೇರಿದ್ದು, ಅಕ್ಟೋಬರ್ 26ರಂದು ಈ ಅವಘಡ ನಡೆದಿದೆ. ಗೋಡೌನ್ನ ಹೊರಗೆ ವಾಹನಗಳನ್ನು ನಿಲ್ಲಿಸಿಡಲಾಗಿತ್ತು. ಒಂದಾದ ಬಳಿಕ ಒಂದು ವಾಹನಕ್ಕೆ ಬೆಂಕಿ ತಗುಲಿದೆ. ನಂದಿಸುವಷ್ಟರಲ್ಲೇ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು.
ಈ ಗೋದಾಮು ಮುಚ್ಚಿ ಹಲವು ವರ್ಷಗಳೇ ಆಗಿದೆ. ಅದರ ಆವರಣದಲ್ಲಿ ವಿಶಾಲ ಜಾಗ ಇರುವುದರಿಂದ ಸಹಜವಾಗಿಯೇ ಅಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಆದರೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪಟಾಕಿ ಹಚ್ಚಲಾಗಿದ್ದು, ಅದರಿಂದಲೂ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ ಎಂದೂ ತಿಳಿಸಿದ್ದಾರೆ. ಇಲ್ಲಿ ಜಾಗ ಕೂಡ ಕಿರಿದಾಗಿರುವ ಕಾರಣ, ಅಗ್ನಿಶಾಮಕ ದಳದ ವಾಹನ ಬರುವುದೂ ಸ್ವಲ್ಪ ತಡವಾಗಿದೆ. ಹೀಗಾಗಿ ಭಸ್ಮವಾದ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಅದೃಷ್ಟಕ್ಕೆ ಯಾರಿಗೂ ಗಾಯಗಳಾಗಿಲ್ಲ.
ಇದನ್ನೂ ಓದಿ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ, ಬಾನೆತ್ತರಕ್ಕೆ ಹೊಗೆ: ಫುಟ್ ವೇರ್ ಕಂಪನಿಯಲ್ಲಿ ಅಗ್ನಿ ಅನಾಹುತ, ನಂದಿಸಲು ಹರಸಾಹಸ