ನವದೆಹಲಿ: ಭಾರತದ ವಿದ್ಯಾರ್ಥಿಗಳು ಸ್ಟೂಡೆಂಟ್ ವೀಸಾ ಪಡೆಯಲು ಸಲ್ಲಿಸುವ ದಾಖಲೆಗಳ ಕುರಿತು ಭಾರತದಲ್ಲಿರುವ ಜರ್ಮನಿ ರಾಯಭಾರಿ ಗಂಭೀರ ವಿಷಯ ಪ್ರಸ್ತಾಪ ಮಾಡಿದ್ದಾರೆ. “ಸ್ಟೂಡೆಂಟ್ ವೀಸಾ ಪಡೆಯಲು ಭಾರತದ ಶೇ.15ರಷ್ಟು ವಿದ್ಯಾರ್ಥಿಗಳು ನಕಲಿ ದಾಖಲೆ (Fake Documents) ಸಲ್ಲಿಸುತ್ತಾರೆ” ಎಂದು ಫಿಲಿಪ್ ಅಕೆರ್‌ಮನ್ ಆರೋಪಿಸಿದ್ದಾರೆ.
“ಭಾರತದ ಶೇ.10-15ರಷ್ಟು ವಿದ್ಯಾರ್ಥಿಗಳು ವೀಸಾಕ್ಕಾಗಿ ನಕಲಿ ದಾಖಲೆ ಸಲ್ಲಿಸುತ್ತಾರೆ. ಅಡ್ಡ ಮಾರ್ಗದ ಮೂಲಕ ನಕಲಿ ದಾಖಲೆ ಸೃಷ್ಟಿಸಿ, ಅವುಗಳನ್ನು ಸಲ್ಲಿಸಿರುತ್ತಾರೆ. ಜರ್ಮನಿಯು ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾಭ್ಯಾಸ ಅವಕಾಶ ನೀಡುತ್ತದೆ. ಹಾಗಾಗಿ, ಭಾರತದಲ್ಲಿ ಸಮರ್ಪಕವಾಗಿ ದಾಖಲೆಗಳ ಪರಿಶೀಲನೆ ಆಗಬೇಕಿದೆ” ಎಂದು ಸಲಹೆ ನೀಡಿದ್ದಾರೆ.
“ಸಾವಿರಾರು ವಿದ್ಯಾರ್ಥಿಗಳು ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡಲು ಕಾಯುತ್ತಿದ್ದಾರೆ. ಹಾಗಾಗಿ, ಭಾರತದಲ್ಲಿ ಸಮರ್ಪಕ ಹಾಗೂ ತ್ವರಿತವಾಗಿ ದಾಖಲೆಗಳ ಪರಿಶೀಲನೆ ಆಗಬೇಕು. ನಕಲಿ ದಾಖಲೆ ಸಲ್ಲಿಕೆಯು ಗಂಭೀರ ವಿಷಯವಾಗಿದ್ದು, ಈ ಕುರಿತು ಜರ್ಮನಿ ವಿಶ್ವವಿದ್ಯಾಲಯಗಳ ಜತೆಗೂ ಚರ್ಚಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | Visa free countries | ವೀಸಾ ಇಲ್ಲದೆ ಭಾರತೀಯರಿನ್ನು 60 ದೇಶಗಳಿಗೆ ಹೋಗಬಹುದು!