Site icon Vistara News

Himachal Pradesh: ಭೂಕುಸಿತದಿಂದ 15 ಕಿ.ಮೀ ಟ್ರಾಫಿಕ್‌ ಜಾಮ್;‌ ಹೋಟೆಲ್‌, ಅನ್ನ, ನೀರಿಲ್ಲದೆ 200 ಜನಕ್ಕೆ ಸಂಕಷ್ಟ

Landslide In Himachal Pradesh

15-km Traffic Jam, No Hotel Rooms: Himachal Pradesh Landslide Nightmare For 200 Tourists

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಸುಮಾರು 15 ಕಿಲೋಮೀಟರ್‌ ಟ್ರಾಫಿಕ್‌ ಜಾಮ್‌ (Himachal Pradesh) ಆಗಿದೆ. ಇದರಿಂದಾಗಿ 200 ಪ್ರವಾಸಿಗರು ರಸ್ತೆ ಮಧ್ಯೆಯೇ ಕಾಲ ಕಳೆಯುವಂತಾಗಿದೆ. ಅಲ್ಲದೆ, ಸುತ್ತಮುತ್ತ ಹೋಟೆಲ್‌ ಇಲ್ಲದೆ, ತಿನ್ನಲು ಏನೂ ಸಿಗದೆ ಪರದಾಡುತ್ತಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಹಾಗೂ ಕುಲು ಪ್ರದೇಶದಲ್ಲಿ ಭಾನುವಾರ ರಾತ್ರಿಯಿಂದಲೂ ಭಾರಿ ಮಳೆಯಾಗಿದೆ. ಇದರಿಂದಾಗಿ ದಿಢೀರನೆ ಭೂಕುಸಿತ ಉಂಟಾಗಿದ್ದು, ರಸ್ತೆ ಮೇಲೆ ರಾಶಿ ರಾಶಿ ಕಲ್ಲು, ಮಣ್ಣು ಬಿದ್ದಿದೆ. ಹಾಗಾಗಿ, ಮನಾಲಿ-ಚಂಡೀಗಢ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದ್ದು, 15 ಕಿ.ಮೀ ಸಂಚಾರ ದಟ್ಟಣೆ ಉಂಟಾಗಿದೆ.

ಒಂದೆಡೆ ಭಾರಿ ಮಳೆಯಾಗುತ್ತಿದೆ. ಕಾರು ಸೇರಿ ಇನ್ನಿತರ ವಾಹನಗಳಲ್ಲಿರುವ ಜನರು ರಸ್ತೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಒಂದೂ ವಾಹನ ಮುಂದಡಿ ಇಡುತ್ತಿಲ್ಲ. ಭೂಕುಸಿತದಿಂದ ತುಂಬಿದ ಮಣ್ಣು ತೆರವಾಗುತ್ತಿಲ್ಲ. ರಸ್ತೆ ಕ್ಲಿಯರ್‌ ಆಗುವತನಕ ಬೇರೆಲ್ಲಾದರೂ ಇರಬೇಕು ಎಂದರೆ ಸುತ್ತಮುತ್ತ ಒಂದೂ ಹೋಟೆಲ್‌ ಸಿಗುತ್ತಿಲ್ಲ. ತಿನ್ನಲು ಹಾಗೂ ಕುಡಿಯಲು ಕೂಡ ಏನೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಏಳೆಂಟು ಗಂಟೆ ಇದೇ ಪರಿಸ್ಥಿತಿ?

ಜೆಸಿಬಿ ಸೇರಿ ಇನ್ನಿತರ ಉಪಕರಣಗಳಿಂದ ರಸ್ತೆ ಮೇಲಿನ ಕಲ್ಲು ಹಾಗೂ ಮಣ್ಣಿನ ರಾಶಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಏಳೆಂಟು ಕಡೆ ಬೆಟ್ಟ ಕುಸಿದಿರುವ ಕಾರಣ ತೆರವು ಕಾರ್ಯಾಚರಣೆ ಇನ್ನೂ ಏಳೆಂಟು ಗಂಟೆ ಇದೇ ಪರಿಸ್ಥಿತಿ ಇರಲಿದೆ. ಅಲ್ಲಿಯವರೆಗೆ ಏನು ಮಾಡಬೇಕು, ರಾತ್ರಿಯಾದರೆ, ಇನ್ನೂ ಹೆಚ್ಚಿನ ಮಳೆ ಬಂದರೆ ಹೇಗೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ.

ಇದನ್ನೂ ಓದಿ: Sikkim Landslide: ಸಿಕ್ಕಿಂನಲ್ಲಿ ಭೂಕುಸಿತ; ಸಂಕಷ್ಟಕ್ಕೆ ಸಿಲುಕಿದ 3,500 ಜನರನ್ನು ರಕ್ಷಿಸಿದ ಹೆಮ್ಮೆಯ ಸೈನಿಕರು

ಹಿರಿಯರು, ಮಕ್ಕಳು, ಮಹಿಳೆಯರಿಗೆ ಹೆಚ್ಚಿನ ತೊಂದರೆಯಾಗಿದ್ದು, ರಸ್ತೆ ಬದಿಯೇ ನೂರಾರು ಜನ ಕುಳಿತುಕೊಂಡು ಆತಂಕದಲ್ಲಿ ಸಮಯ ಕಳೆಯುತ್ತಿದ್ದಾರೆ. ಆದಾಗ್ಯೂ, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯು ಪ್ರವಾಸಿಗರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Exit mobile version