Site icon Vistara News

Maha politics| ಶಿವಸೇನಾದ 16 ರೆಬೆಲ್‌ ಶಾಸಕರ ಅನರ್ಹತೆ ನೋಟಿಸ್‌, ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆ

ನವದೆಹಲಿ: ಶಿವಸೇನಾದ ರೆಬೆಲ್‌ ನಾಯಕ ಏಕನಾಥ್‌ ಶಿಂಧೆ ಅವರು ತಮ್ಮ ಹಾಗೂ ಇತರ ೧೫ ಶಾಸಕರನ್ನು ಅನರ್ಹಗೊಳಿಸುವ ನೋಟಿಸ್‌ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಇಂದು ಪ್ರಕರಣದ ವಿಚಾರಣೆ ನಡೆಯಲಿದೆ.

ಶಿಂಧೆ ಬಣದ ಪರ ಖ್ಯಾತ ನ್ಯಾಯವಾದಿ ಹರೀಶ್‌ ಸಾಳ್ವೆ ವಾದಿಸಲಿದ್ದಾರೆ. ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು ಉದ್ಧವ್‌ ಠಾಕ್ರೆ ಬಣದ ಪರ ವಕಾಲತ್‌ ವಹಿಸಲಿದ್ದಾರೆ.

ಕಳೆದ ಜೂನ್‌ ೨೨ರಿಂದ ಶಿಂದೆ ಬಣ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದು, ಇದಕ್ಕೆ ಸೇರುತ್ತಿರುವ ಶಾಸಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಮತ್ತೊಂದು ಕಡೆ ಶಿಂಧೆ ಹಾಗೂ ಉದ್ಧವ್‌ ಠಾಕ್ರೆ ಪಾಳೆಯದ ನಡುವೆ ಜಟಿಲ ಕಾನೂನು ಸಮರ ಏರ್ಪಟ್ಟಿದೆ.

ಇದನ್ನೂ ಓದಿ: Maha Politics | ಉದ್ಧವ್‌ ಸಂಪುಟದಲ್ಲಿ ಉಳಿದಿರುವುದು 3 ಶಿವಸೇನಾ ಸಚಿವರು ಮಾತ್ರ!

ಶಿವಸೇನಾದ ಮೂರನೇ ಎರಡರಷ್ಟು ಶಾಸಕರ ಬೆಂಬಲವನ್ನು ಈಗಾಗಲೇ ಶಿಂಧೆ ಬಣ ಗಳಿಸಿದ್ದರೂ, ಪಕ್ಷಾಂತರ ತಡೆ ಕಾಯಿದೆ ಬಿಗಿಯಾಗಿರುವುದರಿಂದ ಅಷ್ಟೇ ಸಾಕಾಗುವುದಿಲ್ಲ. ಒಂದೋ ಬಿಜೆಪಿ ಜತೆ ವಿಲೀನವಾಗಬೇಕು, ಇಲ್ಲದಿದ್ದರೆ ತಮ್ಮದೇ ಅಸಲಿ ಶಿವಸೇನೆ ಎಂದು ಶಿಂಧೆ ಬಣ ಸಾಬೀತುಪಡಿಸಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಏಕೆಂದರೆ ಉದ್ಧವ್‌ ಠಾಕ್ರೆ ಶಿವಸೇನಾ ಅಧ್ಯಕ್ಷರು ಎಂಬ ಚರ್ಚೆ ನಡೆಯುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ಇಂದು ನಡೆಯಲಿರುವ ವಿಚಾರಣೆ ದೇಶದ ಗಮನ ಸೆಳೆದಿದೆ.

ಇದನ್ನೂ ಓದಿ: Maha politics: ಅನರ್ಹತೆ ತಪ್ಪಿಸಬೇಕಿದ್ರೆ ಶಿಂಧೆ ಟೀಮ್‌ ಬಿಜೆಪಿ ಸೇರಲೇಬೇಕು! ಇದು ಕಾನೂನು! 2/3 ಮೆಜಾರಿಟಿ ಲೆಕ್ಕಕ್ಕಿಲ್ಲ!

Exit mobile version